More

    ಕನಸು ನನಸಾಗಿಲು ಸತತ ಪರಿಶ್ರಮ ಅಗತ್ಯ

    ತಿಕೋಟಾ: ವಿದ್ಯಾರ್ಥಿಗಳು ಜೀವನದಲ್ಲಿ ಕನಸು ಕಟ್ಟಿಕೊಂಡು ಗುರಿ ಮುಟ್ಟಿದಾಗ ಮಾತ್ರ ಮುಂದಿನ ಬದುಕಿನಲ್ಲಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕನ್ನಡ ಉಪನ್ಯಾಸಕ- ಸಂಪನ್ನೂಲ ವ್ಯಕ್ತಿ ಡಾ.ಬಾಗೇಶ ಮುರಡಿ ಹೇಳಿದರು.

    ಪಟ್ಟಣದ ಬಿ.ಎಲ್.ಡಿ.ಇ ಸಂಸ್ಥೆಯ ನೂತನ ಕಲಾ ಮಹಾವಿದ್ಯಾಲಯದ ಸಭಾಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಿ.ಎ ಹಾಗೂ ಬಿ.ಕಾಂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.

    ಜೀವನದಲ್ಲಿ ಸುಖವನ್ನು ಅರಸಿ ಹೊರಟರೆ ವಿದ್ಯೆ ಹತ್ತುವುದಿಲ್ಲ, ವಿದ್ಯೆ ಸಿಗಬೇಕೆಂದರೆ ಹಾಯಾಗಿ ಇರುವ ಯೋಚನೆಯನ್ನು ಬಿಡಬೇಕು. ಶ್ರೇಷ್ಠ ಸಾಧನೆಗೆ ಜೀವನದಲ್ಲಿ ಮೂರು ವಿಘ್ನಗಳಿರುತ್ತವೆ. ಆಕಳಿಕೆ, ಬೇಕರಿಕೆ, ತೂಕಡಿಕೆ ಈ ಮೂರುಗಳನ್ನು ನಿಗ್ರಹಿಸಿಕೊಳ್ಳಬೇಕು. ತಂದೆ-ತಾಯಿಗಳ ಋಣ ತೀರಿಸುವ ಮಕ್ಕಳು ನೀವಾಗಬೇಕು. ವಿದ್ಯಾರ್ಥಿಗಳು ಕಾಲೇಜಿನ ಗ್ರಂಥಾಲಯವನ್ನು ಸದ್ಬಳಕೆ ಮಾಡಿಕೊಂಡು ಸಾಧನೆಯತ್ತ ಗಮನ ಹರಿಸಬೇಕು. ಬಡತನ, ಅವಮಾನ ಲೆಕ್ಕಿಸದೆ ಸಾಧನೆ ಮಾಡಿದ ಅನೇಕ ಮಂದಿ ನಮ್ಮ ಸುತ್ತಮುತ್ತ ಇದ್ದಾರೆ. ಅವರ ಮಾರ್ಗದರ್ಶನ ಪಡೆಯಬೇಕು ಎಂದರು.

    ಕನ್ನಡ ವಿಭಾಗದ ಮುಖ್ಯಸ್ಥ- ಸಾಂಸ್ಕೃತಿಕ ಘಟಕದ ಅಧ್ಯಕ್ಷ ಡಾ.ಬಸವರಾಜ ಸಾಲವಾಡಗಿ ಮಾತನಾಡಿ, ನಮ್ಮಲ್ಲಿರುವ ಸಂಪನ್ಮೂಲಗಳ ಕೊರತೆ ಎದುರಾಗುವ ಸಮಸ್ಯೆಗಳನ್ನು ಕಂಡು ಕೊರಗುವ ಬದಲು ಅವುಗಳನ್ನೇ ಅವಕಾಶಗಳನ್ನಾಗಿಸಿಕೊಳ್ಳುವ ಮನಸ್ಸು ನಮಗಿರಬೇಕು. ಎಂತಹ ಕಠಿಣ ಸಂದರ್ಭದಲ್ಲೂ ಧೃತಿಗೆಡದೆ ಮುನ್ನೆಡೆದರೆ, ಇಂದಲ್ಲಾ, ನಾಳೆ ಯಶಸ್ಸು ನಮ್ಮದಾಗುತ್ತದೆ ಎಂದರು.

    ಪ್ರಾಚಾರ್ಯ ಆರ್.ಬಿ.ಸಿರಸಂಗಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೋಧಕ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts