More

    ಕನಸಿನ ದಾವಣಗೆರೆ ಕುರಿತು ಚಿಂತನೆಯಿರಲಿ: ಮಹಿಮ ಪಟೇಲ್

    ದಾವಣಗೆರೆ: ನಮ್ಮ ಕನಸಿನ ದಾವಣಗೆರೆ ಹೇಗಿರಬೇಕು ಎಂಬುದರ ಬಗ್ಗೆ ಎಲ್ಲರಲ್ಲೂ ಚಿಂತನೆ ಅಗತ್ಯ ಎಂದು ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಪಟೇಲ್ ಹೇಳಿದರು.

    ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ ಸಹಯೋಗದಲ್ಲಿ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ದಾವಣಗೆರೆ ಜಿಲ್ಲೆ ರಜತ ಸಂಭ್ರಮ ಹಾಗೂ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಅನೇಕ ರಾಜಕೀಯ ಪಕ್ಷಗಳ ವರಿಷ್ಠರನ್ನು ಭೇಟಿ ಮಾಡಿದ್ದೇನೆ. ಅವರು ಯಾರೂ ಭವಿಷ್ಯದ ಬಗ್ಗೆ ಮಾತನಾಡುತ್ತಿಲ್ಲ. ಕಲಾವಿದರು, ಸಾಹಿತಿಗಳು, ಕವಿಗಳ ಬಗ್ಗೆ ಗೌರವ ಇಟ್ಟುಕೊಂಡರೆ ಹೃದಯವಂತಿಕೆ ಹೆಚ್ಚಾಗಲಿದೆ. ಕಲೆ, ಸಂಸ್ಕೃತಿ ಹಾಗೂ ಸಾವಯವ ರಾಜಕಾರಣಕ್ಕೆ ಬೆಲೆ ಕೊಡಬೇಕು ಎಂದು ಸಲಹೆ ನೀಡಿದರು.
    ಸಾವಯವ, ನೈಸರ್ಗಿಕ ಕೃಷಿಯಂತೆ ರಾಜಕಾರಣದಲ್ಲೂ ಸಾವಯವ ಹಾಗೂ ನೈಸರ್ಗಿಕ ರಾಜಕಾರಣವಿದೆ. ಹಣ, ಹೆಂಡ ಧರ್ಮ ಇವು ರಾಜಕಾರಣದಲ್ಲಿ ರಾಸಾಯನಿಕಗಳು ಇದ್ದಂತೆ. ಇವುಗಳು ಸಮಾಜದ ಮನಸ್ಸನ್ನು ಕೆಡಿಸುವ ಕೆಲಸ ಮಾಡುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
    ಇಂದಿನ ಸರ್ಕಾರ, ರಾಜಕೀಯ ಪಕ್ಷಗಳು ಜನರಿಗೆ ಬೇಕಾದ್ದನ್ನು ನೀಡುತ್ತಿಲ್ಲ. ಜನರು ಕೇಳುತ್ತಾರೆಂದು ಚುನಾವಣೆಗಳಲ್ಲಿ ಹಣ ಚಲಾವಣೆ ಆಗುತ್ತಿದ್ದು ಈ ನೆಪದಲ್ಲಿ ಜನರನ್ನು ಭಿಕ್ಷುಕರನ್ನಾಗಿ ಮಾಡುವ ಪ್ರಯತ್ನ ನಡೆದಿದೆ. ಆದರೆ ಸರ್ಕಾರ ಜನರ ಪ್ರತಿಭೆಯನ್ನು ಗುರುತಿಸಿ ಅವರನ್ನು ಮೇಲೆತ್ತಲು ಪೂರಕ ವಾತಾವರಣ ನಿರ್ಮಿಸಬೇಕು ಎಂದು ಹೇಳಿದರು.
    ಶಾಸಕಿ ಬಳ್ಳಾರಿ ಸಿದ್ದಮ್ಮನವರ ಮೊಮ್ಮಗ ಸಿ.ವಿ. ಶಿವಕುಮಾರ್, ಬ್ರಹ್ಮಪ್ಪ ತವನಪ್ಪ ಮನೆತನದ ಉಷಾ ಜಯಪ್ರಕಾಶ್, ಚಿಗಟೇರಿ ಮನೆತನದ ಜಯಪ್ರಕಾಶ್ ಚಿಗಟೇರಿ, ಕೆ.ಎಚ್.ಮಂಜುನಾಥ್, ಗಣೇಶ ಶೆಣೈ ಕಾರ್ಯಕ್ರಮದಲ್ಲಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts