More

    ಕಟ್ಟುನಿಟ್ಟಾದ ನಾಕಾಬಂದಿ, ಪೊಲೀಸರಿಂದ ಜಾಗೃತಿ

    ಹಳಿಯಾಳ: ಲಾಕ್​ಡೌನ್ ನಿಯಮವನ್ನು ಸ್ಥಳೀಯರು ಕಟ್ಟು ನಿಟ್ಟಾಗಿ ಪಾಲಿಸದ ಕಾರಣ ತಾಲೂಕು ಆಡಳಿತ ಬುಧವಾರ ರಾತ್ರಿಯಿಂದಲೇ ಬಿಗಿ ಪೊಲೀಸ್ ಬಂದೋಬಸ್ತ್ ಆರಂಭಿಸಿದೆ. ಗುರುವಾರ ಪೊಲೀಸರು ಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಸಿ ಲಾಕ್​ಡೌನ್ ಕುರಿತು ಜಾಗೃತಿ ಮೂಡಿಸಿದರು.

    ಗ್ರಾಮಾಂತರ ಭಾಗದಿಂದ ಹಳಿಯಾಳಕ್ಕೆ ಅನಗತ್ಯವಾಗಿ ಬರುತ್ತಿದ್ದ ಗ್ರಾಮಸ್ಥರು, ಯುವಕರು ಪಟ್ಟಣದತ್ತ ಬರದಂತೆ ತಡೆಯಲು ಪಟ್ಟಣಕ್ಕೆ ಪ್ರವೇಶ ಕಲ್ಲಿಸುವ ಸಂಪರ್ಕ ರಸ್ತೆ, ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮುಖ್ಯ ರಸ್ತೆಗಳಲ್ಲಿ ನಾಕಾಬಂದಿ ಮಾಡಲಾಗಿದೆ.

    ಧಾರವಾಡ ರಸ್ತೆಯಲ್ಲಿ ಉಳವಿ ಸ್ವಾಗತ ಕಮಾನು, ಅಳ್ನಾವರ ರಸ್ತೆ ಕೃಷಿ ಇಲಾಖೆ ಬಳಿ, ಯಡೋಗಾ ರಸ್ತೆ, ದಾಂಡೇಲಿ ರಸ್ತೆ ರುಡಸೆಟ್ ಬಳಿ, ಚಿಬ್ಬಲಗೇರಿ ರಸ್ತೆ ಕೈಗಾರಿಕಾ ಪ್ರದೇಶ ಬಳಿ ರಸ್ತೆಗೆ ಬ್ಯಾರಿ ಕೇಡ್ ಹಾಕಿ ಜನ ವಾಹನ ಸಂಚಾರ ನಿಲ್ಲಿಸಲಾಯಿತು. ತಹಸೀಲ್ದಾರ್ ವಿದ್ಯಾಧರ ಗುಳಗುಳೆ, ಸಿಪಿಐ ಬಿ.ಎಸ್. ಲೋಕಾಪುರ, ಮುಖ್ಯಾಧಿಕಾರಿ ಕೇಶವ ಚೌಗಲೆ, ಪಿಎಸೈ ಯಲ್ಲಾಲಿಂಗ ಕೊಣ್ಣೂರ, ರ‍್ಯಾಲಿ ನಡೆಸಿ ಮನೆ ಬಿಟ್ಟು ಹೊರಬರದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

    ತರಕಾರಿ, ಹಣ್ಣು ಹಂಪಲು, ದಿನಸಿ ಇತ್ಯಾದಿಗಳ ಮಾರಾಟ ಮಾಡಲು ಪಾಸ್ ಪಡೆದು ದುರುಪಯೋಗ ಮಾಡುತ್ತಿರುವುದು ಕಂಡು ಬಂದಿದ್ದರಿಂದ ಪುರಸಭೆ ಹಾಗೂ ತಾಲೂಕಾಡಳಿತ ಅನಗತ್ಯವಾದ ಮತ್ತು ಹೆಚ್ಚುವರಿ ಪಾಸ್​ಗಳ್ನು ಮರಳಿ ಪಡೆಯಿತು.

    ಇಂದು ದೇಶಪಾಂಡೆ ಸಭೆ: ಲಾಕ್ ಡೌನ್ ಘೊಷಣೆಯಾದ ನಂತರ ಬೆಂಗಳೂರಿನಿಂದ ಮೊದಲ ಬಾರಿಗೆ ಶುಕ್ರವಾರ ಪಟ್ಟಣಕ್ಕೆ ಆಗಮಿಸಲಿರುವ ಶಾಸಕ ಆರ್.ವಿ. ದೇಶಪಾಂಡೆ ಸಂಜೆ 4 ಗಂಟೆಗೆ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಹಳಿಯಾಳ ದಾಂಡೇಲಿ ತಾಲೂಕಿನಲ್ಲಿ ಕರೊನಾ ನಿಯಂತ್ರಣ ಕ್ರಮ, ಆರೋಗ್ಯ ಚಿಕಿತ್ಸೆ ಸೇರಿ ಬೇಸಿಗೆಯಲ್ಲಿ ಗ್ರಾಮಾಂತರ ಭಾಗದಲ್ಲಿ ಎದುರಾಗಲಿರುವ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಸಭೆಯನ್ನು ನಡೆಸಲಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts