More

    ಒಳ್ಳೆಯ ಕೆಲಸ ಮಾಡವವರನ್ನು ನೈತಿಕವಾಗಿ ಗುರುತಿಸುವ ವ್ಯವಸ್ಥೆ ಬೇಕು: ರಂಗಕರ್ಮಿ ಪ್ರಸನ್ನ

    ಸಾಗರ: ಉನ್ನತಿ ಎಂಬ ಯೋಜನೆ ಪ್ರಸ್ತುತ ಸ್ಥಿತಿಗಿಂತ ಮೇಲಕ್ಕೆ ಹೋಗುವ ಮೂಲಕ ಬದುಕು ಹಾಗೂ ಕೆಲಸದಲ್ಲಿ ಪ್ರಗತಿ ಸಾಧಿಸುವುದು ಎಂದರ್ಥ ಎಂದು ರಂಗಕರ್ಮಿ ಪ್ರಸನ್ನ ಹೇಳಿದರು.
    ಹೊನ್ನೇಸರದ ಶ್ರಮಜೀವಿ ಆಶ್ರಮದಲ್ಲಿ ಆಯೋಜಿಸಿರುವ ಚರಕ ಉತ್ಸವದ ಎರಡನೇ ದಿನವಾದ ಭಾನುವಾರ ತಾವು ಬರೆದಿರುವ ಗ್ರಾಮೀಣ ಉದ್ಯಮಗಳಲ್ಲಿ ಗುಣಮಟ್ಟದ ನಿರ್ವಹಣೆ ಹೇಗೆ? ಪುಸ್ತಕ ಬಿಡುಗಡೆ ಕಾರ್ಯಕ್ರಮ ಹಾಗೂ ವಿಚಾರ ಮಂಥನವನ್ನು ಉದ್ದೇಶಿಸಿ ಮಾತನಾಡಿದರು.
    ಉನ್ನತಿ ಕಡೆ ಸಾಗುವಾಗ ಎರಡು ಸಂಗತಿಗಳು ಅಗತ್ಯ. ಒಂದು ಕಾಯಕ ಮತ್ತು ಕಾಯಕ ಜೀವಿಗಳ ಮಹತ್ವ . ಹೀಗೆ ನಮ್ಮ ನಡುವೆ ಬಹಳಷ್ಟು ಜನರು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರನ್ನು ನೈತಿಕವಾಗಿ ಗುರುತಿಸಿ ಹಾಗೂ ಅದಕ್ಕೆ ಬೇಕಾದ ವ್ಯವಸ್ಥೆ ರೂಪಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
    ಮಾರುಕಟ್ಟೆಯಲ್ಲಿ ಉನ್ನತ ಗುಣಮಟ್ಟದ ಪದಾರ್ಥಗಳು ಕೈಯಲ್ಲಿ ತಯಾರಿಸಿದರೆ ಆ ಕೆಲಸವನ್ನು ಗ್ರಾಹಕರ ರೂಪದಲ್ಲಿ ಬಂದು ದೇವರು ಹರಸುತ್ತಾರೆ. ಹಾಗಾಗಿ ಗ್ರಾಹಕರೇ ದೇವರು, ಬೇರಾರೂ ಅಲ್ಲ. ಗ್ರಾಹಕರು ಗುಣಮಟ್ಟದ ಪದಾರ್ಥಗಳನ್ನು ಬಯಸುತ್ತಾರೆ. ಮಾಡುವ ಕೆಲಸದಲ್ಲಿ ನಿಷ್ಠೆ, ಸತ್ಯ ಇದ್ದರೆ ಮನುಷ್ಯ ತನ್ನಿಂತಾನೆ ಯಶಸ್ಸು ಕಾಣುತ್ತಾನೆ. ಕೈ ಉತ್ಪನ್ನಗಳ ಕೆಲಸ ಮಾನಸಿಕವಾಗಿ, ದೈಹಿಕವಾಗಿ ಸ್ವಾಸ್ಥ್ಯವನ್ನು ಮೂಡಿಸುತ್ತದೆ ಎಂದರು.
    ಪುಸ್ತಕ ಬಿಡುಗಡೆಗೊಳಿಸಿದ ಹಿರಿಯ ಪತ್ರಕರ್ತ ಕೃಷ್ಣಪ್ರಸಾದ್, ನಾವು ಎಲ್ಲ ವಿಚಾರಗಳಲ್ಲಿ ಗುರಿ ಇಟ್ಟುಕೊಳ್ಳುತ್ತೇವೆ. ಅದು ಮಕ್ಕಳ ಓದಿನ ಮೂಲಕ ಗಳಿಸುವ ಅಂಕದಿಂದಲೇ ಆರಂಭವಾಗುತ್ತದೆ. ನಮ್ಮ ಉನ್ನತಿ ಎಂದರೆ ಇರುವುದಕ್ಕಿಂತ ನಾಳೆ ಉತ್ತಮ ಸ್ಥಿತಿಯಲ್ಲಿ ಬದುಕುವುದು ಎಂದು. ಚರಕ ಸಂಸ್ಥೆಯಲ್ಲಿ ಎಲ್ಲ ಮಹಿಳೆಯರು ಕೈ ಉತ್ಪನ್ನಗಳ ಮೂಲಕ ಕಾಯಕದಲ್ಲಿ ತೊಡಗಿಕೊಂಡಿದ್ದಾರೆ. ಒಂದು ಯಂತ್ರ ಕೆಲಸ ಮಾಡುವುದಕ್ಕು ಒಬ್ಬ ವ್ಯಕ್ತಿ ಕೆಲಸ ಮಾಡುವುದಕ್ಕೂ ವಿಭಿನ್ನ ಮತ್ತು ವ್ಯತ್ಯಾಸ ಎರಡೂ ಇರುತ್ತದೆ. ಶ್ರಮವಹಿಸಿ ಮಾಡುವ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದರು.
    ಕವಿ ಕಾವ್ಯ ಟ್ರಸ್ಟ್ ಭೀಮನಕೋಣೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯ ಬೆಂಗಳೂರು ಆಯೋಜಿಸಿದ್ದ ಎರಡು ದಿನದ ಚರಕ ಉತ್ಸವದಲ್ಲಿ ರಾಜ್ಯದ ವಿವಿಧ ಮೂಲೆಗಳಿಂದ ನೇಕಾರರು ಪಾಲ್ಗೊಂಡು ಉದ್ಯಮದ ಹೊಸ ಸಾಧ್ಯತೆಗಳ ಬಗ್ಗೆಯೂ ಚಿಂತನ-ಮಂಥನ ನಡೆಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts