More

    ಒಂದೇ ಸೂರಿನಡಿ ಸಕಲ ಸೇವೆ

    ಶಿರಸಿ: ಅಡಕೆ ಬೆಳೆಗಾರರ ಹಾಗೂ ಸಂಸ್ಥೆಯ ಸದಸ್ಯರ ಹಿತರಕ್ಷಣೆ ಮಾಡುತ್ತಿರುವ ಸಂಸ್ಥೆ ದಿ ತೋಟಗಾರ್ಸ್ ಕೋ- ಆಪರೇಟಿವ್ ಸೇಲ್ ಸೊಸೈಟಿ. ಇದಕ್ಕೆ 96 ವರ್ಷಗಳ ಯಶಸ್ವಿ ಇತಿಹಾಸವಿದೆ. ಸ್ಥಾಪಿತ ಉದ್ದೇಶದ ಜೊತೆಯಲ್ಲಿ ಸದಸ್ಯರ ಅಗತ್ಯಗಳ ಈಡೇರಿಕೆಗಾಗಿ ವೈವಿಧ್ಯಮಯ ಸೇವೆಗಳನ್ನು ಯಶಸ್ವಿಯಾಗಿ ನೀಡುತ್ತಿರುವುದರಿಂದಾಗಿ ಟಿಎಸ್​ಎಸ್ ಉಳಿದ ಸಹಕಾರ ಸಂಘಗಳಿಂದ ಪ್ರತ್ಯೇಕವಾಗಿ ನಿಲ್ಲುತ್ತದೆ.

    ಸಂಘವು ಅಡಕೆ, ಕಾಳುಮೆಣಸು, ಏಲಕ್ಕಿ ಇತ್ಯಾದಿ ತೋಟದ ಬೆಳೆಗಳಿಗೆ ಪಾರದರ್ಶಕ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಿದೆ. ಇದರ ಜತೆಗೆ ಅಡಕೆ ದರ ಸ್ಥಿರೀಕರಣಕ್ಕಾಗಿ ಸಂಸ್ಥೆಯೂ ಟೆಂಡರ್​ನಲ್ಲಿ ಭಾಗವಹಿಸಿ ಖರೀದಿಸುತ್ತಿದೆ. ಅಡಕೆಯ ಆರೋಗ್ಯಕರ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಅಡಕೆ ಮೌಲ್ಯವರ್ಧನೆ ಮಾಡಿ ಸಿಹಿ ಅಡಕೆ ಪುಡಿ ತಯಾರಿಸಿ ವಿವಿಧ ಬ್ರ್ಯಾಂಡ್​ನಲ್ಲಿ ಮಾರಾಟ ಮಾಡುತ್ತಿದೆ. ಸದಸ್ಯರು ಸಂಘದ ಮೂಲಕ ಮಾಡುವ ವಿಕ್ರಿ ಆಧರಿಸಿ ಸಾಲ ಸೌಲಭ್ಯ, ಸದಸ್ಯರಿಂದ ಆಕರ್ಷಕ ಬಡ್ಡಿ ದರದಲ್ಲಿ ಠೇವಣಿ ಸಂಗ್ರಹಣೆ, ಅಡಕೆ ವಿಕ್ರಿಯ ಮೇಲೆ ಸಂಚಯಿತಾ ಠೇವು ಸಂಗ್ರಹಣೆ ಮಾಡುತ್ತಿದೆ.

    ಮೊದಲಿನಿಂದಲೂ ಸದಸ್ಯರಿಗೆ ದಿನಸಿ ಸಾಮಗ್ರಿಗಳನ್ನು ಪೂರೈಸುತ್ತಿದ್ದ ಕಿರಾಣಿ ಹಾಗೂ ಕೃಷಿ ವಿಭಾಗವನ್ನು ಮೇಲ್ದರ್ಜೆಗೇರಿಸಿ ಟಿಎಸ್​ಎಸ್ ಸೂಪರ್ ಮಾರ್ಕೆಟ್ ಆರಂಭಿಸಲಾಗಿದೆ. ಸೂಪರ್ ಮಾರ್ಕೆಟ್​ನಲ್ಲಿ ದಿನಸಿ ಸಾಮಗ್ರಿ, ಕೃಷಿ ಸಲಕರಣೆ, ರಸಗೊಬ್ಬರ ಹಾಗೂ ಕೀಟನಾಶಕ, ನೀರಾವರಿ ಯಂತ್ರೋಪಕರಣ, ಪೈಪ್, ರೂಫಿಂಗ್ ಶೀಟ್, ಗೃಹೋಪಯೋಗಿ ಸಲಕರಣೆ, ಬಟ್ಟೆ, ಸ್ಟೀಲ್ ಸಾಮಗ್ರಿ, ಬೆಳ್ಳಿ ಸಾಮಗ್ರಿ, ಪಾದರಕ್ಷೆ, ಔಷಧ, ಕಟ್ಟಡ ನಿರ್ಮಾಣ ಸಾಮಗ್ರಿ, ರೈತರ ಪಹಣಿ ಪತ್ರಿಕೆ ಪೂರೈಕೆ, ಪಾನ್ ಕಾರ್ಡ್, ಟಿಕೆ ಬುಕಿಂಗ್, ಮೊಬೈಲ್ ಹಾಗೂ ಡಿಟಿಎಚ್ ರೀಚಾರ್ಜ್, ಹೀಗೆ ಎಲ್ಲವೂ ಲಭ್ಯವಿದೆ. ಅದೂ ಅತ್ಯಂತ ಕಡಿಮೆ ದರದಲ್ಲಿ!

    ಈ ವಿಭಾಗದಲ್ಲಿ ಸದಸ್ಯರ ಸಾಮರ್ಥ್ಯಕ್ಕನುಗುಣವಾಗಿ ಉದ್ರಿ ಸೌಲಭ್ಯವನ್ನೂ ನೀಡಲಾಗುತ್ತಿದೆ. ಅಕ್ಕಿಗಿರಣಿ ವ್ಯವಸ್ಥೆ, ಅತಿಥಿಗೃಹ ವ್ಯವಸ್ಥೆ, ರೈತ ಆರೋಗ್ಯ ಕೇಂದ್ರ, ಜನೌಷಧ ಕೇಂದ್ರ, ಸಮರ್ಪಣ ಪಶು ಆಸ್ಪತ್ರೆ, ಸ್ಪರ್ಧಾತ್ಮಕ ದರದಲ್ಲಿ ಸರಕು ಸಾಗಾಣಿಕೆ ವಾಹನಗಳ ವ್ಯವಸ್ಥೆ, ಮಾರುಕಟ್ಟೆ ಮಾಹಿತಿ ಪಡೆಯಲು ಎಸ್​ಎಂಎಸ್ ಸೇವೆ, ಹೀಗೆ ಸಂಘವು ನೀಡುತ್ತಿರುವ ಸೇವೆಗಳ ಯಾದಿ ಬೆಳೆಯುತ್ತಲೇ ಹೋಗುತ್ತದೆ.

    ಸಂಘವು ಯಾವುದೇ ಸೇವೆಯನ್ನು ಆರಂಭಿಸಿದರೂ ಅದನ್ನು ಪರಿಪೂರ್ಣವಾಗಿಯೇ ಸದಸ್ಯರಿಗೆ ನೀಡುತ್ತದೆ. ಸಂಘವು ಸಿದ್ದಾಪುರ, ಯಲ್ಲಾಪುರ ಹಾಗೂ ಮುಂಡಗೋಡನಲ್ಲಿ ಶಾಖೆ ಹೊಂದಿದೆ. ತನ್ನ ಎಲ್ಲ ಶಾಖೆಗಳಲ್ಲೂ ಶಿರಸಿಯ ಮಾದರಿಯಲ್ಲೇ ಸದಸ್ಯರಿಗೆ ಸೇವೆಗಳನ್ನು ಒದಗಿಸುತ್ತಿದೆ.

    ಫ್ರ್ಯಾಂಚೈಸಿ ವ್ಯವಹಾರಕ್ಕೆ ಸಿದ್ಧತೆ: ಮುಂದಿನ ದಿನಗಳಲ್ಲಿ ಸಂಘವು ತಮ್ಮ ವ್ಯವಹಾರವನ್ನು ವಿಸ್ತರಿಸುವ ಉದ್ದೇಶದಿಂದ ಫ್ರ್ಯಾಂಚೈಸಿ ವ್ಯವಹಾರ ನಡೆಸಲು ತೀರ್ವನಿಸಿದೆ. ಫ್ರ್ಯಾಂಚೈಸಿ ವ್ಯವಹಾರದಲ್ಲಿ ಉದ್ದಿಮೆದಾರರು ಜಾಗ, ಕಟ್ಟಡ, ಇತರ ಅಗತ್ಯಗಳ ಮೇಲೆ ಹೂಡಿಕೆ ಮಾಡುತ್ತಾರೆ. ಸಂಘವು ಉದ್ದಿಮೆದಾರರಿಗೆ ದೈನಂದಿನ ವ್ಯವಹಾರಗಳನ್ನು ನಡೆಸಲು ತನ್ನ ಅಮೂಲ್ಯ ಸಲಹೆಗಳನ್ನು ನೀಡುತ್ತದೆ. ಇದರಿಂದ ಸಂಘವು ವ್ಯವಹಾರದಲ್ಲಿ ಬಂಡವಾಳ ಹೂಡದೆ ಕೇವಲ ಸಲಹೆಗಳನ್ನು ನೀಡುವುದರ ಮೂಲಕ ಆದಾಯಗಳಿಸಲಿದೆ. ಫ್ರ್ಯಾಂಚೈಸಿ ವ್ಯವಹಾರ ನಡೆಸುವಂತೆ ಸಂಘಕ್ಕೆ ಗದಗ, ಕುಮಟಾ, ಹೊನ್ನಾವರ, ಮುದೋಳದಿಂದ ಪ್ರಸ್ತಾವ ಬಂದಿದೆ. ಇದರ ಜೊತೆ ಸಂಘವು ಶಿರಸಿಯಲ್ಲಿ ಫ್ರ್ಯಾಂಚೈಸಿ ತೆರೆಯುವ ಉದ್ದೇಶ ಹೊಂದಿದೆ. ಈ ಮೂಲಕ ಮುಂದಿನ ದಿನಗಳಲ್ಲಿ ಸಂಘದ ಸೇವೆ ರಾಜ್ಯದ ಎಲ್ಲ ಕಡೆ ದೊರಕಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts