More

    ಏತ ನೀರಾವರಿ ಯೋಜನೆ ರೈತರಿಗೆ ವರದಾನ

    ಶಿಕಾರಿಪುರ: ತಾಲೂಕಿನಲ್ಲಿ ಐದು ಹೋಬಳಿ ವ್ಯಾಪ್ತಿಯಲ್ಲಿ ನಡೆಯá-ತ್ತಿರá-ವ ನೀರಾವರಿ ಕಾಮಗಾರಿಯಿಂದ ಅಂತರ್ಜಲ ಮಟ್ಟ ವೃದ್ಧಿಯಾಗಿ ರೈತರಿಗೆ ಅನá-ಕೂಲವಾಗಲಿದೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ವೀರೇಂದ್ರ ಪಾಟೀಲ್ ಹೇಳಿದರು.

    ಹೊಸೂರಿನ ಶ್ರೀ ವೀರಭದ್ರೇಶ್ವರ ಸಮುದಾಯ ಭವನದಲ್ಲಿ ಮಂಗಳವಾರ ಬಿಜೆಪಿ ರೈತ ಮೋರ್ಚಾ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಯೋಜನೆ ಪೂರ್ಣಗೊಂಡರೆ ಎಂಥದ್ದೇ ಬರಗಾಲ ಬಂದರೂ ಕುಡಿಯುವ ನೀರು ಮತ್ತು ಜಾನುವಾರುಗಳಿಗೆ ಯಾವುದೇ ತೊಂದರೆ ಆಗುವದಿಲ್ಲ ಎಂದರು.

    ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ರೈತಪರವಾದ ಕಳಕಳಿಯನ್ನು ನಾವು ಅರ್ಥ ಮಾಡಿಕೊಳ್ಳಬೇಕು. ತಾಲೂಕಿನಲ್ಲಿ ಹಿಂದೆಂದೂ ಕಾಣದಷ್ಟು ಸಮಗ್ರ ಅಭಿವೃದ್ಧಿ ಕಾರ್ಯಗಳಾಗಿವೆ. ಹಾಗಾಗಿ ಗ್ರಾಪಂ ಚುನಾವಣೆಯಲ್ಲಿ ಬೆಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.

    ಜಿಪಂ ಸದಸ್ಯೆ ಮಮತಾ ಸಾಲಿ ಮಾತನಾಡಿ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿಯಿಂದ ರೈತರ ಜಮೀನುಗಳು ಕೈತಪ್ಪಿ ಹೋಗುವದಿಲ್ಲ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ರೈತರು ಬೆಳೆದ ಬೆಳೆಗೆ ತಾವೇ ಬೆಲೆ ನಿಗದಿ ಮಾಡಿ ಮಾರಾಟ ಮಾಡಲು ಮುಕ್ತ ಅವಕಾಶವಿದೆ ಎಂದು ಹೇಳಿದರು.

    ಹೊಸೂರು ಹೋಬಳಿ ಪ್ರಗತಿಪರ ಕೃಷಿಕರಾದ ಸಂಗಪ್ಪ ಮುದ್ದನಹಳ್ಳಿ, ಪರುಶುರಾಮ್ ಬೆಂಡೆಕಟ್ಟೆ, ನಿಜಲಿಂಗಪ್ಪ ಗೊಗ್ಗ, ರವಿಕುಮಾರ್ ಹೊಸೂರು(ಅರಳೇಹಳ್ಳಿ), ಸೋಮಶೇಖರಪ್ಪ ನಳ್ಳಿನಕೊಪ್ಪ, ಬೈರನಹಳ್ಳಿ, ಬಾಳೆಕೊಪ್ಪದ ಕುಬೇರ ಗೌಡ, ಆರಾಧನಾ ಸಮಿತಿ ಸದಸ್ಯ ಆನಂದಪ್ಪ ಹೊಸೂರು ಅವರನ್ನು ಸನ್ಮಾನಿಸಲಾಯಿತು.

    ರೈತ ಮೋರ್ಚಾ ತಾಲೂಕು ಅಧ್ಯಕ್ಷ ಕುಮಾರ್ ಗೌಡ, ಎಪಿಎಂಸಿ ಅಧ್ಯಕ್ಷ ರುದ್ರಮುನಿ, ಮೆಸ್ಕಾಂ ನಿರ್ದೇಶಕ ರುದ್ರೇಶ್, ತಾಲೂಕು ಬಿಜೆಪಿ ಉಪಾಧ್ಯಕ್ಷ ಸಂಕ್ಲಾಪುರ ಹನುಮಂತಪ್ಪ, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ರಾಜಶೇಖರ್, ಪ್ರಧಾನ ಕಾರ್ಯದರ್ಶಿ ಗುರುರಾಜ್, ಗಿರೀಶ್ ಧಾರವಾಡ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts