More

    ಎಸ್ಪಿ ಹೆಸರಲ್ಲೇ ನಕಲಿ ಖಾತೆ!

    ಬೆಳಗಾವಿ: ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿ ಡಾ.ಸಂಜೀವ ಪಾಟೀಲ ಹೆಸರಲ್ಲೇ ವಂಚಕರು ನಕಲಿ ಇನ್ಸ್‌ಸ್ಟಾಗ್ರಾಂ ಖಾತೆ ತೆರೆದು ಹಣಕ್ಕೆ ಬೇಡಿಕೆ ಇಟ್ಟಿರುವುದು ಶನಿವಾರ ಬೆಳಕಿಗೆ ಬಂದಿದೆ.

    ನಕಲಿ ಖಾತೆಯಿಂದ ಹಣ ಕೇಳಿರುವ ಸಂದೇಶ ಹಾಗೂ ನಕಲಿ ಖಾತೆ ಕುರಿತು ಎಸ್‌ಪಿ ಪೋಸ್ಟ್ ಮಾಡಿರುವ ಮಾಹಿತಿಯ ಸ್ಕ್ರೀನ್‌ಶಾಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಎಸ್‌ಪಿ ಹೆಸರಿನಲ್ಲಿ ಅವರ ಸ್ನೇಹಿತರಿಗೆ, ಪರಿಚಯಸ್ಥರಿಗೆ ಮೆಸೇಜ್ ಕಳುಹಿಸಿ, ತಮಗೆ ತುರ್ತಾಗಿ ಹಣಬೇಕೆಂದು ಅನೇಕರಿಗೆ ಹಣ ಕೇಳಿದ್ದು, ಗೂಗಲ್ ಪೇ ಮೂಲಕ ಹಣ ವರ್ಗಾಯಿಸುವಂತೆ ಶುಕ್ರವಾರ ಮನವಿ ಮಾಡಿದ್ದಾರೆ. ವಂಚಕರಿಂದ ಸಂದೇಶ ಸ್ವೀಕರಿಸಿದ ಸ್ನೇಹಿತರು ಡಾ.ಸಂಜೀವ ಪಾಟೀಲ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಎಸ್ಪಿ ಅವರು ಕಾನೂನು ಕ್ರಮ ಜರುಗಿಸುವುದರ ಜತೆಗೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿನ ಖಾತೆಗಳಲ್ಲಿ ಪೋಸ್ಟ್ ಹಾಕುವ ಮೂಲಕ ಈ ಬಗ್ಗೆ ಎಚ್ಚರ ವಹಿಸುವಂತೆ ಮನವಿ ಮಾಡಿದ್ದಾರೆ.

    ನನ್ನ ಹೆಸರು ಮತ್ತು ಫೋಟೋ ಬಳಸಿ ಯಾರೋ ಇನ್‌ಸ್ಟಾಗ್ರಾಂ ನಕಲಿ ಖಾತೆ ತೆರೆದು ಸಾರ್ವಜನಿಕರಲ್ಲಿ ಹಣ ಕೇಳುತ್ತಿರುವುದು ಕಂಡುಬಂದಿದ್ದು, ಕೃತ್ಯ ಎಸಗಿದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಸಾರ್ವಜನಿಕರು ಇಂತಹ ಖಾತೆಗಳ ಮನವಿ ತಿರಸ್ಕರಿಸಿ, ಎಚ್ಚರ ವಹಿಸಿ ಎಂದು ಎಸ್‌ಪಿ ಡಾ.ಸಂಜೀವ ಪಾಟೀಲ ತಮ್ಮ ಅಧಿಕೃತ ಖಾತೆಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಹಲವರು, ‘ಸರ್ ನಿಮ್ಮನ್ನೇ ಬಿಡುತ್ತಿಲ್ಲ ಅಂದ್ರೆ, ನಮ್ಮಂಥ ಸಾಮಾನ್ಯ ಜನರ ಪಾಡೇನು? ಅವರೆಂತಹ ಖದೀಮರು ಇರಬೇಕು? ಇನ್ನೆಷ್ಟು ಜನರ ಹೆಸರಲ್ಲಿ ನಕಲಿ ಖಾತೆ ತೆರದಿರಬಹುದು ಎಂಬ ಆತಂಕವ್ಯಕ್ತಪಡಿಸಿದ್ದಾರೆ. ಸೈಬರ್ ಕ್ರೈಂನ ಸಿಐಡಿ ಅಧಿಕಾರಿಗಗಳು ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts