More

    ಎಲ್ಲ ಸರ್ಕಾರಿ ಕಾಲೇಜ್‌ಗಳಲ್ಲಿ ಮುಕ್ತ ವಿವಿ ಕಲಿಕಾ ಕೇಂದ್ರ

    ಬೆಳಗಾವಿ: ನಗರ, ಚಿಕ್ಕೋಡಿ, ಅಥಣಿ ಹಾಗೂ ಮೂಡಲಗಿ ಪಟ್ಟಣಗಳು ಸೇರಿ ರಾಜ್ಯದಲ್ಲಿ ಒಟ್ಟು 146 ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕಲಿಕಾ ಕೇಂದ್ರಗಳಿದ್ದು, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಆರಂಭಿಸಿ, ವಿದ್ಯಾರ್ಥಿ ಸ್ನೇಹಿ ವಿಶ್ವವಿದ್ಯಾಲಯವಾಗಿ ರೂಪಿಸುವ ಗುರಿಯಿದೆ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ಹಲಸೆ ಹೇಳಿದರು.

    ನಗರದ ವಾರ್ತಾ ಇಲಾಖೆ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ 23 ಪ್ರಾದೇಶಿಕ ಕೇಂದ್ರಗಳು ಹಾಗೂ 149 ಕಲಿಕಾರ್ಥಿ ಸಹಾಯ ಕೇಂದ್ರಗಳು ಹಾಗೂ 10 ಬಿ.ಇಡಿ ಕೇಂದ್ರಗಳಿವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಮುಕ್ತ ವಿ.ವಿಯಲ್ಲಿ ನೂತನ ಶಿಕ್ಷಣ ನೀತಿ ಅನುಷ್ಠಾನ ಮಾಡಲಾಗುವುದು. ಏಕಕಾಲದಲ್ಲಿ ಎರಡು ಪದವಿ ಪಡೆಯಲು ಕರಾಮುವಿಯಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದರು.

    ವಿಶ್ವವಿದ್ಯಾಲಯದಲ್ಲಿ ಪಿಎಚ್.ಡಿ ಸೇರಿದಂತೆ ಸದ್ಯ 64 ಕೋರ್ಸ್‌ಗಳಿದ್ದು, ಬಿಎಸ್‌ಡಬ್ಲುೃ, ಎಂಎಸ್‌ಡಬ್ಲುೃ, ಭೂ ವಿಜ್ಞಾನ, ವೃತ್ತಿಪರ ಕೋರ್ಸ್ ಆರಂಭಿಸಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿರುವ ವಿದ್ಯಾರ್ಥಿನಿಯರು, ಹಾಲಿ, ಮಾಜಿ ಸೈನಿಕರ, ಆಟೋ, ಕ್ಯಾಬ್ ಚಾಲಕರು, ಸಾರಿಗೆ ನೌಕರರ ಮಕ್ಕಳಿಗೆ ಶುಲ್ಕ ವಿನಾಯಿತಿ ನೀಡಲಾಗುತ್ತದೆ. ಅದಷ್ಟೇ ಅಲ್ಲದೇ, ಕರೊನಾದಿಂದಾಗಿ ಪಾಲಕರನ್ನು ಕಳೆದುಕೊಂಡ ಮಕ್ಕಳು ಹಾಗೂ ತೃತೀಯ ಲಿಂಗಿಗಳಿಗೆ ಸಂಪೂರ್ಣ ಶುಲ್ಕ ವಿನಾಯಿತಿ ನೀಡಲಾಗುತ್ತಿದೆ. ಕೆಎಸ್‌ಒಯು ಆ್ಯಪ್, ಯುಟ್ಯೂಬ್‌ಮೂಲಕವೂ ಮಾಹಿತಿ ಒದಗಿಸಲಾಗುತ್ತಿದ್ದು, ಮೌಲ್ಯಮಾಪನ ಕಾರ್ಯವನ್ನೂ ಡಿಜಿಟಲೀಕರಣ ಮಾಡಲಾಗಿದೆ. ಪ್ರಾದೇಶಿಕ ಕೇಂದ್ರಗಳ ನಿರ್ದೇಶಕ ಎಚ್.ಮಲ್ಲಿಕಾರ್ಜುನ ಹಾಗೂ ಎಇಇ ಭಾಸ್ಕರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts