More

    ಎಲ್ಲ ಸಂತ್ರಸ್ಥರಿಗೂ ಕೂಡಲೇ ಪರಿಹಾರ ವಿತರಿಸಿ

    ಭಾಲ್ಕಿ: ತಾಲೂಕಿನ ವಿವಿಧೆಡೆ ಮಳೆಗೆ ಭಾಗಶಃ ಮನೆ ಕುಸಿದಿವೆ. ಇನ್ನು ಕೆಲವು ಕಡೆಗಳಲ್ಲಿ ಮೇಲ್ಛಾವಣಿ, ಗೋಡೆ ಕುಸಿತ ಕಂಡಿದ್ದು, ಬಡ ಜನರು ಸಂಕಷ್ಟದಲ್ಲಿದ್ದಾರೆ. ಕೂಡಲೇ ಅಂಥವರನ್ನು ಗುರುತಿಸಿ ತಲಾ 10 ಸಾವಿರ ರೂ. ತಾತ್ಕಾಲಿಕ ಪರಿಹಾರ ಕೊಡಬೇಕು ಎಂದು ಶಾಸಕ ಈಶ್ವರ ಖಂಡ್ರೆ ಸೂಚನೆ ನೀಡಿದರು.

    ಪಟ್ಟಣದ ತಹಸಿಲ್ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಕರೆದಿದ್ದ ತುತರ್ುಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪಟ್ಟಣ ಸೇರಿ ಗಣೇಶಪುರ ವಾಡಿ, ಅಂಬೇಸಾಂಗವಿ, ಸಾಯಿಗಾಂವ, ಬೋಳೆಗಾಂವ ಸೇರಿ ವಿವಿಧೆಡೆ ಭೇಟಿ ನೀಡಿ ಮಳೆಗೆ ಮನೆ ಕುಸಿತ ಕಂಡಿರುವುದು, ಮನೆಗಳಿಗೆ ನೀರು ನುಗ್ಗಿರುವುದನ್ನು ವೀಕ್ಷಿಸಿ ಸಂತ್ರಸ್ತರಿಗೆ ತಾತ್ಕಾಲಿಕವಾಗಿ ಪರಿಹಾರ ನೀಡುವ ಭರವಸೆ ನೀಡಿದ್ದೇನೆ. ಹಾಗಾಗಿ ಮನೆ ಕುಸಿತ ಕಂಡಿರುವ ಎಲ್ಲ ಸಂತ್ರಸ್ತರ ಪಟ್ಟಿ ಸಿದ್ಧಪಡಿಸಿ ಶೀಘ್ರ ಪರಿಹಾರ ಕೊಡಬೇಕು ಎಂದು ತಹಸೀಲ್ದಾರ್ಗೆ ನಿದರ್ೇಶಿಸಿದರು.

    ಪಟ್ಟಣ ಸೇರಿ ವಿವಿಧೆಡೆ ಕಳವು ಪ್ರಕರಣ ಹೆಚ್ಚಾಗುತ್ತಿದ್ದು ಸಿಸಿ ಕ್ಯಾಮರಾ ಸೇರಿ ಆಧುನಿಕ ತಂತ್ರಜ್ಞಾನ ಬಳಸಿ ಪ್ರಕರಣಗಳನ್ನು ನಿಯಂತ್ರಿಸಬೇಕು. ಪಟ್ಟಣದಲ್ಲಿ ಫಟರ್ಿಲೈಸರ್ ಅಂಗಡಿಯಲ್ಲಿ ಕಳವು ಆಗಿದೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೂ ಧಕ್ಕೆ ಉಂಟಾಗುತ್ತಿದೆ. ಕಳ್ಳರಿಗೆ ಭಯ ಇಲ್ಲದಂತಾಗಿದೆ. ರಾಜಾರೋಷವಾಗಿ ಕಳ್ಳತನ ನಡೆಯುತ್ತಿದೆ. ಜನನಿಬೀಡ ಪ್ರದೇಶಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ರಾತ್ರಿ ಪಾಳಯದಲ್ಲಿ ಪೊಲೀಸ್ ಸಿಬ್ಬಂದಿ ಹೆಚ್ಚಿಸಬೇಕು. ಜತೆಗೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಟ್ರಾಫಿಕ್ ಕಿರಿಕಿರಿ ಉಂಟಾಗಿದ್ದು ನಿಯಂತ್ರಿಸಬೇಕು ಎಂದರು.

    ಜಲ ಜೀವನ ಮಿಷನ್(ಜೆಜೆಎಂ) ಕಾಮಗಾರಿ ಅವೈಜ್ಞಾನಿಕವಾಗಿ ನಡೆಯುತ್ತಿದೆ. ಸಾಕಷ್ಟು ಮುತುವಜರ್ಿವಹಿಸಿ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ರಸ್ತೆ ಮಾಡಲಾಗುತ್ತಿದೆ. ಆದರೆ ಜೆಜೆಎಂ ಪೈಪ್ಲೈನ್ ಕಾಮಗಾರಿ ಕೈಗೊಳ್ಳಲು ಎಲ್ಲೆಂದರಲ್ಲಿ ರಸ್ತೆ ಅಗೆದು ಹಾಳು ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಅಧಿಕಾರಿಗಳು ಅಗೆದ ರಸ್ತೆಗಳನ್ನು ಸಂಬಂಧಿತ ಗುತ್ತಿಗೆದಾರರಿಂದ ಸರಿಪಡಿಸಿಕೊಳ್ಳಬೇಕು. ಇನ್ಮುಂದೆ ಬೇಕಾಬಿಟ್ಟಿ ಅಗೆಯದಂತೆ ಎಚ್ಚರ ವಹಿಸಬೇಕು ಎಂದು ಸೂಚನೆ ನೀಡಿದರು.

    ತಹಸೀಲ್ದಾರ್ ಕೀತರ್ೀ ಚಾಲಕ್, ತಾಪಂ ಇಒ ದೀಪಿಕಾ ನಾಯ್ಕರ್ ಇತರರಿದ್ದರು.

    ಭಾಟಸಾಂಗವಿ, ಗೋರಚಿಂಚೋಳಿ ಸೇರಿ ಮುಂತಾದ ಕಡೆಗಳಲ್ಲಿ ಕಿರಾಣಾ ಅಂಗಡಿ, ಹೋಟೆಲ್ ಸೇರಿ ಎಲ್ಲೆಂದರಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವ ಬಗ್ಗೆ ಮಹಿಳೆಯರು ದೂರು ನೀಡುತ್ತಿದ್ದಾರೆ. ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಸಾರಾಯಿ ಮಾರಾಟ ಮಾಡುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು.
    | ಈಶ್ವರ ಖಂಡ್ರೆ, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts