More

    ಎಲ್ಲಾ ಜ್ಞಾನಗಳ ಮೂಲ ಜಾನಪದ ಸಾಹಿತ್ಯ: ಡಾ. ರಾಜಶೇಖರ ದಾನರಡ್ಡಿ

    ವಿಜಯವಾಣಿ ಸುದ್ದಿಜಾಲ ಗದಗ
    ನಗರದ ಕೆ.ಎಲ್​.ಇ. ಸಂಸ್ಥೆಯ ತೋಂಟದಾರ್ಯ ಮಹಾವಿದ್ಯಾಲಯದಲ್ಲಿ ಸೋಮವಾರ ರಾಜ್ಯ ಮಟ್ಟದ ಒಂದು ದಿನದ ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ವಿಚಾರ ಸಂಕಿರಣದಲ್ಲಿ “ಸಂಶೋಧನಾ ವಿಧಾನ ಮತ್ತು ಆಕರ ಸಾಮಗ್ರಿಗಳು’ ಎಂಬ ವಿಷಯದ ಕುರಿತು ಡಾ. ಕಲ್ಲಯ್ಯ ಹಿರೇಮಠ ಉಪನ್ಯಾಸ ನೀಡಿ ಮಾತನಾಡಿದರು. ಸಂಶೋಧಕ ಲೇಖಕ ಹಾಗೂ ವಿಮರ್ಶಕ ಆಗಿರಬೇಕು. ತಾಳ್ಮೆ, ಸಹನೆ, ಸಮಯಪ್ರಜ್ಞೆ ಮತ್ತು ೇತ್ರಕಾರ್ಯದ ಜ್ಞಾನ ಹೊಂದಿರಬೇಕು ಎಂದರು.
    “ಜ್ಞಾನ ಪರಂಪರೆ ಮತ್ತು ಜಾನಪದ ಸಾಹಿತ್ಯ ಪ್ರಕಾರಗಳು’ ಎಂಬ ವಿಷಯದ ಕುರಿತು ಡಾ. ರಾಜಶೇಖರ ದಾನರಡ್ಡಿ ಉಪನ್ಯಾಸ ನೀಡಿ ಮಾತನಾಡಿ, ಎಲ್ಲ ಜ್ಞಾನಗಳ ಮೂಲ ಜಾನಪದ ಸಾಹಿತ್ಯವಾಗಿದೆ. ಕನ್ನಡ ಜಾನಪದ ಸಾಹಿತ್ಯ ಪ್ರಕಾರಗಳಯ ವೈಶಿಷ್ಠತೆ ಮತ್ತು ವೈವಿಧ್ಯತೆಯಿಂದ ಕೂಡಿದೆ. ಜಾನಪದ ಸಾಹಿತ್ಯ ನಮ್ಮ ಬದುಕಿನ ಪ್ರತಿ ಹಂತದಲ್ಲು ಮಾರ್ಗದಶಿರ್ಯಾಗಿ ನಿಂತಿದೆ ಎಂದರು.
    ಡಾ. ಅಂದಯ್ಯ ಅರವಟಗಿಮಠ ಮಾತನಾಡಿದರು. ಪ್ರೊ. ಜಿ ವಿಶ್ವನಾಥ, ಡಾ. ನಾಗರಾಜ ಬಳಿಗೇರ, ಪ್ರೊ. ಶಂಭು ತಮ್ಮನಗೌಡ್ರ, ಸುಶ್ಮೀತಾ ಪೂಜಾರ, ಸೀಮಾ ಕೊಪ್ಪದ, ಸುನೀಲಕುಮಾರ ನರಗುಂದ, ವಿಜಯಲಕ್ಷಿ$್ಮ ಸಂಕನಗೌಡ್ರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts