More

    ಎಪಿಎಂಸಿ ವ್ಯಾಪಾರ-ವಹಿವಾಟು ಚುರುಕು

    ರಾಣೆಬೆನ್ನೂರ: ಲಾನ್​ಡೌನ್ ನಡುವೆಯೂ ಇಲ್ಲಿಯ ಎಪಿಎಂಸಿಯಲ್ಲಿ ಸೋಮವಾರ ಉತ್ತಮ ವ್ಯಾಪಾರ-ವಹಿವಾಟು ನಡೆಯಿತು.

    1130 ಹತ್ತಿ ಅಂಡಿಗೆಗಳು, 1597 ಚೀಲ ಶೇಂಗಾ, 2128 ಚೀಲ ಉಳ್ಳಾಗಡ್ಡಿ, 1 ಸಾವಿರಕ್ಕೂ ಅಧಿಕ ಕ್ವಿಂಟಾಲ್​ನಷ್ಟು ಮೆಕ್ಕೆಜೋಳ ಆವಕವಾಗಿದೆ.

    ಬೆಲೆಯಲ್ಲೂ ಕೊಂಚ ಏರಿಕೆಯಾಗಿದ್ದು, 1 ಕ್ವಿಂಟಾಲ್ ಹತ್ತಿ 4686 ರೂ., ಶೇಂಗಾ 5329 ರೂ., ಉಳ್ಳಾಗಡ್ಡಿ 1 ಸಾವಿರ ರೂ. ಹಾಗೂ ಮೆಕ್ಕೆಜೋಳ ಕ್ವಿಂಟಾಲ್​ಗೆ 1390 ರೂ.ನಂತೆ ಮಾರಾಟವಾಗಿದೆ. ಲಾಕ್​ಡೌನ್​ನಿಂದಾಗಿ ಸಂಪೂರ್ಣ ಮಾರುಕಟ್ಟೆ ಬಂದ್ ಆಗಿದ್ದರಿಂದ ರೈತರು ಉತ್ಪನ್ನ ಮಾರಾಟ ಮಾಡಲಾಗಿದೆ ಪರದಾಡುತ್ತಿದ್ದರು.

    ಎರಡನೇ ಲಾಕ್​ಡೌನ್ ಆರಂಭದಲ್ಲಿ ಎಪಿಎಂಸಿ ವಹಿವಾಟಿಗೆ ಅವಕಾಶ ಕಲ್ಪಿಸಿದ್ದರೂ ಹೆಚ್ಚಿನ ಪ್ರಮಾಣದಲ್ಲಿ ರೈತರು ಉತ್ಪನ್ನ ಮಾರಾಟಕ್ಕೆ ಬರುತ್ತಿರಲಿಲ್ಲ. ಇದೀಗ ಲಾಕ್​ಡೌನ್ 3.0 ಮುಂದುವರಿದಿದ್ದು, ಎಪಿಎಂಸಿಗೆ ಹತ್ತಿ, ಶೇಂಗಾ, ಮೆಕ್ಕೆಜೋಳ ಆವಕದಲ್ಲಿ ಏರಿಕೆಯಾಗಿದೆ. ಮಹಾರಾಷ್ಟ್ರ, ತಮಿಳನಾಡು, ಕೇರಳದಿಂದ ವ್ಯಾಪಾರಸ್ಥರು ಬಂದು ಖರೀದಿ ಮಾಡುತ್ತಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts