More

    ಎನ್​ಆರ್​ಯುುಸಿಸಿಗೆ ಭರತ್​ಕುಮಾರ ಆಯ್ಕೆ

    ಹುಬ್ಬಳ್ಳಿ: ಜೀತೋ ಬೆಂಗಳೂರ ಶಾಖೆಯ ಆಡಳಿತ ಮಂಡಳಿ ಸದಸ್ಯ ಭರತ್​ಕುಮಾರ ಬಿ. ಜೈನ್ ಅವರು ನ್ಯಾಷನಲ್ ರೈಲ್ವೆ ಬಳಕೆದಾರರ ಸಲಹಾ ಸಮಿತಿಗೆ (ಎನ್​ಆರ್​ಯುುಸಿಸಿ) ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

    ನಗರದಲ್ಲಿ ಮಂಗಳವಾರ ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ (ಜೆಡ್​ಆರ್​ಯುುಸಿಸಿ) ಸಭೆಯ ನಂತರ ಜರುಗಿದ ಚುನಾವಣೆಯಲ್ಲಿ ಇವರು ಶೇ. 81ರಷ್ಟು ಮತಗಳೊಂದಿಗೆ ಆಯ್ಕೆಯಾದರು.

    ಈ ಮೂಲಕ ರೈಲ್ವೆ ಸಚಿವರು ಅಧ್ಯಕ್ಷರಾಗಿರುವ ಎನ್​ಆರ್​ಯುುಸಿಸಿಯ ಸದಸ್ಯರಾದ ಇವರು, ಸಮಿತಿಯಲ್ಲಿ ನೈಋತ್ಯ ರೈಲ್ವೆ ವಲಯವನ್ನು ಪ್ರತಿನಿಧಿಸಲಿದ್ದಾರೆ.

    ನೈಋತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಸಂಜೀವ ಕಿಶೋರ್ ಅಧ್ಯಕ್ಷತೆಯಲ್ಲಿ ಜರುಗಿದ 22ನೇ ಜೆಡ್​ಆರ್​ಯುುಸಿಸಿ ಸಭೆಯಲ್ಲಿ ಸಂಸದರಾದ ಪಿ.ಸಿ. ಗದ್ದಿಗೌಡರ, ಶಿವಕುಮಾರ ಉದಾಶಿ, ಗೋವಾ ಸಚಿವ ನಿಲೇಶ ಕೆ., ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ಎಫ್​ಕೆಸಿಸಿಐ ಅಧ್ಯಕ್ಷ ಗೋಪಾಲ ರೆಡ್ಡಿ ಸೇರಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.

    48 ಜನ ಸದಸ್ಯರನ್ನು ಹೊಂದಿರುವ ಜೆಡ್​ಆರ್​ಯುುಸಿಸಿಯಲ್ಲಿ 33 ಸದಸ್ಯರು ಸಭೆಗೆ ಹಾಜರಾಗಿ, ಮತದಾನ ಮಾಡಿದರು. ಮೂವರು ಚುನಾವಣೆಗೆ ಸ್ಪರ್ಧಿಸಿದ್ದರು. ಇದರಲ್ಲಿ ಭರತ್​ಕುಮಾರ ಜೈನ್ 27, ಕೃಷ್ಣಮೂರ್ತಿ 5 ಹಾಗೂ ಬಾಲಚಂದ್ರ ಅವರು ಒಂದು ಮತ ಪಡೆದರು ಎಂದು ತಿಳಿಸಲಾಗಿದೆ.

    ಪ್ರಮುಖರಾದ ದಾಮೋದರ ರಾಟಿ, ರತನಚಂದ್, ಚಿದಾನಂದ ಚಲವಾದಿ, ಸುರೇಶ ಜೈನ್, ಅಶೋಕ ಅಮಿನಗಡ, ಬಾಬುಲಾಲ್ ಜೈನ್, ಲಲಿತ ಜೈನ್, ಭವರಲಾಲ್ ಜೈನ್, ಗೋಪಾಲ ರೆಡ್ಡಿ, ಇತರರು ಭರತ್​ಕುಮಾರ ಅವರನ್ನು ಪುಷ್ಪಗುಚ್ಛ ನೀಡಿ, ಅಭಿನಂದಿಸಿದರು.

    ಆಯ್ಕೆಯಾದ ನಂತರ ಮಾತನಾಡಿದ ಭರತ್​ಕುಮಾರ ಅವರು, ಸದ್ಯ ಡಿಆರ್​ಯುುಸಿಸಿ, ಜೆಡ್​ಆರ್​ಯುುಸಿಸಿ ಹಾಗೂ ಎನ್​ಆರ್​ಯುುಸಿಸಿ ಇವುಗಳ ಅಧಿಕಾರವಧಿ ಒಂದೇ ತೆರನಾಗಿಲ್ಲ. ಇದರಿಂದ ರೈಲ್ವೆ ಬಳಕೆದಾರರ ಸಮಸ್ಯೆಗಳಿಗೆ ಸಮರ್ಪಕ ಪರಿಹಾರ ಸಿಗುತ್ತಿಲ್ಲ. ಹಾಗಾಗಿ, ಈ ಮೂರು ಸಮಿತಿಗಳ ಅಧಿಕಾರವಧಿಯಲ್ಲಿ ಸಮನ್ವಯತೆ ಸಾಧಿಸಲು ಸಂಬಂಧಪಟ್ಟವರ ಜತೆ ರ್ಚಚಿಸುವುದಾಗಿ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts