More

    ಉಪ ಸಮರದಲ್ಲಿ ಬಿಜೆಪಿ ಗೆಲುವು ಖಚಿತ

    ಗೌರಿಬಿದನೂರು: ಶಿರಾ ಹಾಗೂ ಆರ್ ಆರ್ ನಗರದ ಎರಡು ಕ್ಷೇತ್ರಗಳಲ್ಲಿಯೂ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂದು ಜಿಲ್ಲಾ ಉಸ್ತುವಾರಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

    ನಗರದ ಸೂರ್ಯ ಕಲ್ಯಾಣ ಮಂಟಪದಲ್ಲಿ ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಪರ ಮತಯಾಚಿಸಿ ಮಾತನಾಡಿ, ಕಾಂಗ್ರೆಸ್-ಜೆಡಿಎಸ್‌ನಲ್ಲಿ ಮುಖಂಡರ ಗೊಂದಲ ಉಂಟಾಗಿದೆ. ಅವರವರಲ್ಲಿ ಆರೋಪ, ಪ್ರತ್ಯಾರೋಪ ಮೊಳಗಿದೆ. ರಾಜ್ಯ ಸರ್ಕಾರ ಅಭಿವೃದ್ಧಿಗೆ ಹೆಚ್ಚು ಗಮನಹರಿಸಿದ್ದು ಇದನ್ನೂ ಸಹಿಸದ ವಿರೋಧ ಪಕ್ಷಗಳು ಕೇವಲ ಅರೋಪದಲ್ಲಿ ಮುಳುಗಿವೆ. ಅಭಿವೃದ್ಧಿ ಸಹಿಸದ ಮುಖಂಡರು ಪೊಳ್ಳು ಆರೋಪ ಮಾಡುತ್ತಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದರು.

    ಶಿಕ್ಷಕರ ಸಮಸ್ಯೆ ಬಗೆಹರಿಸುವ ಗುರಿ: ಮತದಾರರು ಪ್ರಬುದ್ಧರಾಗಿದ್ದು, ಜಾತಿ ನೋಡದೆ ಕೇವಲ ಅಭಿವೃದ್ಧಿ ನೋಡುತ್ತಾರೆ. ಅಭಿವೃದ್ಧಿ ಮಂತ್ರದಿಂದಲೇ ಮತದಾರನ ಗೆಲುವು ಸಾಧ್ಯವಾಗಲಿದೆ. ಕಳೆದ ಬಾರಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಅಭ್ಯರ್ಥಿಯಿಂದ ಶಿಕ್ಷಣ ಕ್ಷೇತ್ರದ ಅಭಿವೃದ್ಧಿ ಶೂನ್ಯವಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದ್ದು ನಿರುದ್ಯೋಗ ಪದವೀಧರರ ಅನೇಕ ಸಮಸ್ಯೆಗಳನ್ನು ಬಗೆಹರಿಸುವ ಗುರಿ ಹೊಂದಿದ್ದಾರೆ ಎಂದರು.

    ಲೋಕಸಭಾ ಚುನಾವಣೆಯಲ್ಲಿ ಮತದಾರ ಬಿಜೆಪಿಯನ್ನೂ ಗೆಲ್ಲಿಸಿದ್ದು ಚಿಕ್ಕಬಳ್ಳಾಪುರದಲ್ಲಿ ಮೈಲಿಗಲ್ಲು ಅರಂಭವಾಗಿದೆ. ಪದವೀಧರರ ಕ್ಷೇತ್ರದಲ್ಲಿ ಪ್ರಬುದ್ಧ ಮತದಾರರಿದ್ದು ಅವರು ಬಿಜೆಪಿ ಆಯ್ಕೆ ಮಾಡುವ ಎಲ್ಲ ಲಕ್ಷಣಗಳು ಕಂಡು ಬಂದಿದೆ. ನಮ್ಮ ಪಕ್ಷದ ಅಭ್ಯರ್ಥಿ ಚಿದಾನಂದ ಆಯ್ಕೆ ಖಚಿತವಾಗಿದೆ ಎಂದು ತಿಳಿಸಿದರು.

    ವಿಧಾನ ಪರಿಷತ್ ಸದಸ್ಯ ವೈ.ನಾರಾಯಣಸ್ವಾಮಿ ಮಾತನಾಡಿ, ಪದವೀಧರ ಶಿಕ್ಷಕರಲ್ಲಿ ಅನೇಕ ಸಮಸ್ಯೆಗಳಿದ್ದು ಅವುಗಳನ್ನು ಹಂತ ಹಂತವಾಗಿ ಬಗೆಹರಿಸಲು ಮುಖ್ಯಮಂತ್ರಿಗಳ ಬಳಿ ಚರ್ಚೆ ಮಾಡುವುದಾಗಿ ಹೇಳಿದರು.

    ಬಿಜೆಪಿ ಮುಖಂಡ ಎನ್.ಎಂ.ರವಿನಾರಾಯಣರೆಡ್ಡಿ, ಮಾಜಿ ಶಾಸಕಿ ಎನ್.ಜ್ಯೋತಿರೆಡ್ಡಿ, ತಾಲೂಕು ಅಧ್ಯಕ್ಷ ರಮೇಶ್ ರಾವ್ ಶೇಳ್ಕೆ, ನಗರ ಘಟಕ ಅಧ್ಯಕ್ಷ ಮಾರ್ಕೆಟ್ ಮೋಹನ್, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ, ಜಿಪಂ ಸದಸ್ಯ ಭವ್ಯಾ ರಂಗನಾಥ್, ಮುಖಂಡ ಕೃಷ್ಣರೆಡ್ಡಿ, ಜಿಲ್ಲೆ ಸಂಘಟನಾ ಕಾರ್ಯದರ್ಶಿ ಮುರಳೀಧರ ಮತ್ತಿತರರಿದ್ದರು.

    ನಾನೇ ಶಾಸಕನಾಗಿ ಸಮಸ್ಯೆಗೆ ಸ್ಪಂದಿಸುವೆ : ಬಾಗೇಪಲ್ಲಿ ವಿಧಾನಸಭೆಯಲ್ಲಿ ಬಿಜೆಪಿ ಶಾಸಕರು ಇಲ್ಲದಿದ್ದರೂ, ನಾನೇ ಶಾಸಕನಾಗಿ ತಮ್ಮೆಲ್ಲರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ ಎಂದು ಜಿಲ್ಲಾ ಉಸ್ತುವಾರಿ, ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು. ತಾಲೂಕಿನ ಕೊಂಡಂವಾರಪಲ್ಲಿ ಎಸ್‌ಎಲ್‌ಎನ್ ಕಲ್ಯಾಣಮಂಟಪದಲ್ಲಿ ಏರ್ಪಡಿಸಿದ್ದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದರು.

    ವಿಧಾನಸಭೆಯಲ್ಲಿ ಅಂಗೀಕಾರ ಪಡೆದ ಮಸೂದೆ ವಿಧಾನ ಪರಿಷತ್ತಿನಲ್ಲಿ ಅಂಗೀಕಾರ ಪಡೆದರೆ ಮಾತ್ರ ಅದು ಶಾಸನವಾಗುತ್ತದೆ. ಆದರೆ ಅಲ್ಲಿ ಪಕ್ಷಕ್ಕೆ ಬಹುಮತ ಇರಬೇಕು, ಈ ಹಿನ್ನೆಲೆಯಲ್ಲಿ ಈ ವಿಧಾನ ಪರಿಷತ್ ಚುನಾವಣೆ ಬಹಳ ಪ್ರಾಮುಖ್ಯತೆ ಪಡೆದಿದೆ. ಬೇರು ಮಟ್ಟದಿಂದ ಬಿ.ಜೆ.ಪಿ. ಪಕ್ಷವನ್ನು ಕಟ್ಟಿ ಅಧಿಕಾರಕ್ಕೆ ತರಬೇಕಾದ ಕೆಲಸವನ್ನು ಕಾರ್ಯಕರ್ತರು ಮಾಡಬೇಕಾಗಿದೆ. ಈಗ ಆಗ್ನೇಯ ಪದವೀಧರರ ಕ್ಷೇತ್ರದಿಂದ ಸ್ಪರ್ಧಿಸಿರುವ ಚಿಂದಾನಂದ ಎಂ. ಗೌಡ ಅವರು ಸಾಕಾಷ್ಷು ಸಮಾಜಸೇವೆ ಜತೆಗೆ ನೂರಾರು ನಿರುದ್ಯೋಗ ಪದವೀಧರರಿಗೆ ಉದ್ಯೋಗಧಾತರಾಗಿದ್ದಾರೆ ಎಂದರು.

    ಬಿ.ಜೆ.ಪಿ. ಜಿಲ್ಲಾಧ್ಯಕ್ಷ ರಾಮಲಿಂಗಪ್ಪ, ಬಾಗೇಪಲ್ಲಿ ಮಂಡಲಾಧ್ಯಕ್ಷ ಪ್ರತಾಪ್, ಜಿಲಾ ್ಲಉಪಾಧ್ಯಕ್ಷ ಪಾತಪಾಳ್ಯ ಸುರೇಶ್, ಎಸಿ ್ಸಮೋರ್ಚಾ ಜಿಲ್ಲಾಧ್ಯಕ್ಷ ವೆಂಕಟೇಶ್‌ೆ, ಎಪಿಎಂಸಿ ಅಧ್ಯಕ್ಷ ಸೋಮಶೇಖರರೆಡ್ಡಿ, ಬೆಂಗಳೂರು ವಿಭಾಗಿಯ ಸಂಗಟನಾ ಕಾರ್ಯದರ್ಶಿ ಕಾಂತರಾಜು, ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ, ನಿಕಟಪೂರ್ವ ಅಧ್ಯಕ್ಷ ಎಸ್.ಟಿ. ಚಂದ್ರಮೋಹನ್, ಗುಡಿಬಂಡೆ ತಾಲೂಕು ಅಧ್ಯಕ್ಷ ಗಂಗಿರೆಡ್ಡಿ, ಪ್ರಧಾನ ಕಾರ್ಯದರ್ಶಿಗಳಾದ ಗೋಪಾಲ್ ಮತ್ತು ಪ್ರಬಾಕರ್‌ರೆಡ್ಡಿ, ಜಿಲ್ಲಾ ಕಾರ್ಯದರ್ಶಿ ಪದ್ಮಮ್ಮ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts