More

    ಉದ್ಯಮಿ ಕೃಷ್ಣೇಗೌಡ ಹತ್ಯೆ ಪ್ರಕರಣದಲ್ಲಿ ಮತ್ತೆ 7 ಜನರ ಸೆರೆ: ಎಸ್ ಪಿ

    ಹಾಸನ: ಹಾಸನ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಆ.9ರಂದು ನಡೆದ ಉದ್ಯಮಿ ಹಾಗೂ ಜೆಡಿಎಸ್ ಮುಖಂಡ ಕೃಷ್ಣೇಗೌಡ ಹತ್ಯೆ ಪ್ರಕರಣ ಸಂಬಂಧ ಮತ್ತೆ 7 ಜನರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಒಟ್ಟು 13 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ತಿಳಿಸಿದರು.

    ಆರೋಪಿಗಳಾದ ಚಂದನ್ (27) ಆಟೋ ಚಾಲಕ, ಗುಡ್ಡೆನಹಳ್ಳಿ ಹಾಸನ, ಚೇತನ್ (22) ಸೆಂಟ್ರಂಗ್ ಕೆಲಸ, ಗೊರವನಹಳ್ಳಿ ಕಸಬಾ ಹೋಬಳಿ ಚನ್ನರಾಯಪಟ್ಟಣ ತಾಲೂಕು, ಪ್ರದೀಪ್ (27) ಮೆಕಾನಿಕ್, ಬಾಗೂರು ಗ್ರಾಮ ಚನ್ನರಾಯಪಟ್ಟಣ ತಾಲೂಕು ಇವರನ್ನು ಆ.23ರಂದು ಬಂಧಿಸಲಾಗಿದೆ. ಮಣಿಕಂಠ (27) ಗಾರೆ ಕೆಲಸ, ಬಾಗೂರು ಗ್ರಾಮ ಚನ್ನರಾಯಪಟ್ಟಣ ತಾಲೂಕು, ಮಧುಸೂದನ್ (21) ಬ್ಯಾಡರಹಳ್ಳಿ ಗ್ರಾಮ, ದೇವನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ಧನಂಜಯ್ (21) ಪೆಟ್ರೋಲ್ ಬಂಕ್‌ನಲ್ಲಿ ಕೆಲಸ ಬೊಮ್ಮೇನಹಳ್ಳಿ, ಇಲವಾಲ ಹೋಬಳಿ, ಮೈಸೂರು ಜಿಲ್ಲೆ, ಶಿವಪ್ರಸಾದ್ (20) ಬೊಮ್ಮೇನಹಳ್ಳಿ, ಇಲವಾಲ ಹೋಬಳಿ, ಮೈಸೂರು ಜಿಲ್ಲೆ ಇವರನ್ನು 24ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿ ತನಿಖೆ ಸಂಬಂಧ ಪೊಲೀಸ ವಶಕ್ಕೆ ಪಡೆಯಲಾಗಿದೆ. ಕೊಲೆ ಪ್ರಕರಣ ಸಂಬಂಧ ಈಗಾಗಲೇ ಆರು ಜನರ ಬಂಧಿಸಲಾಗಿದೆ. ಇದೀಗ ಮತ್ತೆ ಏಳು ಜನರನ್ನು ಬಂಧಿಸಿ ತನಿಖೆಗೆ ಒಳಪಡಿಸಲಾಗಿದೆ ಎಂದು ಎಸ್‌ಪಿ ಶುಕ್ರವಾರ ಮಾಹಿತಿ ನೀಡಿದರು.

    ಪ್ರಕರಣದ ಪ್ರಮುಖ ಆರೋಪಿಯಾಗಿರುವ ಯೋಗಾನಂದ್ ಜತೆ ಕೃಷ್ಣೇಗೌಡರು ಜಗಳ ಮಾಡಿಕೊಂಡಿದ್ದರು. ಹಣದ ವಿಚಾರವಾಗಿ 2022ರ ನವೆಂಬರ್‌ನಲ್ಲಿ ಯೋಗಾನಂದ್‌ನನ್ನ ಅಪಹರಿಸಿ ಹಲ್ಲೆ ಮಾಡಿದ್ದ ಬಗ್ಗೆ ಹಾಸನ ಗ್ರಾಮಾಂತರ ಠಾಣೆಗೆ ಯೋಗಾನಂದ್ ದೂರು ನೀಡಿದ್ದರು. ಇದರ ಪ್ರತಿಯಾಗಿ ಯೋಗಾನಂದ್ ವಿರುದ್ಧ ವಂಚನೆ ಆರೋಪದಲ್ಲಿ ಕೃಷ್ಣೇಗೌಡ ಕೂಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಕೃಷ್ಣೇಗೌಡರನ್ನು ಕೊಲೆ ಮಾಡಿಸಿದರೆ ಹಣ ಕೊಡುವುದು ತಪ್ಪುತ್ತದೆ ಎಂದು ಯೋಗಾನಂದ್ ಯೋಚಿಸಿದ್ದಾರೆ. ಆರು ತಿಂಗಳಿಂದ ಸಂಚು ರೂಪಿಸಿ, ಹತ್ಯೆಗೆ ಸುಪಾರಿ ಕೊಟ್ಟಿದ್ದಾನೆ. ಅದರಂತೆ ಸುಪಾರಿ ಪಡೆದವರು ಆ.9ರಂದು ಮಧ್ಯಾಹ್ನ ಆರೋಪಿಗಳು ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದರು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts