More

    ಉತ್ತಮ ಪರಿಸರಕ್ಕಾಗಿ ನಿಸ್ವಾರ್ಥ ಸೇವೆ ಮಾಡಿ, ಮಾಜಿ ಸಚಿವ ಸುರೇಶ್ ಕುಮಾರ್ ಕರೆ

    ಗೌರಿಬಿದನೂರು: ಅಧಿಕಾರ ಮತ್ತು ಅಂತಸ್ತು ಶಾಶ್ವತವ್ಲ, ಪ್ರತಿಯೊಬ್ಬರೂ ಸಮಾಜ ಹಾಗೂ ಪ್ರಕೃತಿಗಾಗಿ ಮಾಡುವ ನಿಸ್ವಾರ್ಥ ಸೇವೆಯೇ ಕೊನೆಯವರೆಗೂ ಉಳಿಯುವುದು ಎಂದು ಮಾಜಿ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

    ಗಂಗಸಂದ್ರ ಗ್ರಾಪಂನ ಮುದುಗಾನಕುಂಟೆಯ ಗಂಗಾಭಾಗೀರಥಿ ದೇವಾಲಯಕ್ಕೆ ಶನಿವಾರ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಅವರು, ಗೌರಿಬಿದನೂರು ಸೇವಾ ಪ್ರತಿಷ್ಠಾನ ಯುವಕರ ತಂಡ ನಿರ್ಮಿಸಿರುವ ಕೆರೆ ಕಾಮಗಾರಿ ಪರಿಶೀಲಿಸಿ, ಅವುಗಳ ಕಾರ್ಯಚಟುವಟಿಕೆಗಳು ಹಾಗೂ ಭವಿಷ್ಯದ ಉಪಯೋಗಗಳ ಮಾಹಿತಿ ಪಡೆದರು.

    ಯುವಕರ ತಂಡದ ಜಲ ಸಂರಕ್ಷಣಾ ಕಾರ್ಯಗಳು ರೈತರ ಬದುಕಿನಲ್ಲಿ ಭರವಸೆಯ ಬೆಳಕು ಚೆಲ್ಲುವ ಕಾರ್ಯ ನಿಜಕ್ಕೂ ಅರ್ಥಪೂರ್ಣವಾಗಿದೆ ಎಂದರು. ಸರ್ಕಾರಿ ಭೂಮಿ ಉಳಿಸುವ ಉದ್ದೇಶದಿಂದ ಗಿಡ ನೆಟ್ಟು ಸಸ್ಯ ಕ್ಷೇತ್ರವನ್ನಾಗಿಸಿ ಪ್ರಕೃತಿ ಹಾಗೂ ಮಳೆ ನೀರಿನ ಸಂರಕ್ಷಣೆಗಾಗಿ ಕಲ್ಯಾಣಿ ನಿರ್ಮಾಣ ಅದ್ಭುತವಾಗಿದೆ. ನಾವು ಸುತ್ತಲಿನ ಪರಿಸರದಲ್ಲಿ ಭವಿಷ್ಯಕ್ಕೆ ಆಸರೆಯಾಗುವಂತಹ ಕಾರ್ಯ ಮಾಡಲು ಸ್ವ ಇಚ್ಛೆಯಿಂದ ಮುಂದಾಗಬೇಕಾಗಿದ್ದು, ಇದರಿಂದ ಸಾರ್ಥಕ ಬದುಕು ಕಾಣಲು ಸಾಧ್ಯ ಎಂದರು.

    ಕಾಲ್ನೃಡಿಗೆಯಲ್ಲಿ ಸುಮಾರು 8 ಕಿ.ಮೀ ದೂರದ ಸಾರಗೊಂಡ್ಲು ಹೊರವಲಯದಲ್ಲಿನ ಕೆರೆ ಸ್ವಚ್ಛತಾ ಕಾರ್ಯ ಪರಿಶೀಲಿಸಿದ ಸುರೇಶ್ ಕುಮಾರ್, ಈ ಎಲ್ಲ ಸಂರಕ್ಷಣಾ ಕಾರ್ಯಗಳಿಗೆ ಸಹಕರಿಸಿದ್ದ್ದ ಹಿರಿಯ ಕೆಎಎಸ್ ಅಧಿಕಾರಿ ಬಿ.ಎನ್.ವರಪ್ರಸಾದರೆಡ್ಡಿ ಕಾರ್ಯವನ್ನು ಶ್ಲಾಸಿದರು.

    ಮಾರ್ಗಮಧ್ಯೆ ಕಡಬೂರು ಸರ್ಕಾರಿ ಶಾಲೆಗೆ ಭೇಟಿ ನೀಡಿ ಶಿಕ್ಷಕರು, ಮಕ್ಕಳೊಂದಿಗೆ ಚರ್ಚಿಸಿದರು. ಮಂಚೇನಹಳ್ಳಿ ಆರ್ಕುಂದ ಗ್ರಾಮದಲ್ಲಿ ಜಲ ಸಂರಕ್ಷಣೆಗಾಗಿ ನಿರ್ಮಿಸಿದ್ದ ಕಲ್ಯಾಣಿ ವೀಕ್ಷಿಸಿ, ಸಮೀಪದ ಸಸ್ಯೋದ್ಯಾನಕ್ಕೆ ಭೇಟಿ ನೀಡಿ ಗಿಡ ನೆಟ್ಟರು.

    ರಾಜ್ಯ ಕೆಎಎಸ್ ಅಧಿಕಾರಿಗಳ ಸಂದ ಅಧ್ಯಕ್ಷ ಬಿ.ಎನ್.ವರಪ್ರಸಾದರೆಡ್ಡಿ, ಎಕನಾಮಿಕ್ ಟೈಮ್ಸ್ ಮುಖ್ಯ ಸಂಪಾದಕ ಬಾಲಚಂದರ್, ಹಿರಿಯ ಕೆಎಎಸ್ ಅಧಿಕಾರಿ ಮೋಹನ್‌ರಾಜ್, ತಾಪಂ ಇಒ ಎನ್.ಮುನಿರಾಜು, ಲಯನ್ಸ್ ಸಂಸ್ಥೆಯ ಮಾಜಿ ಅಧ್ಯಕ್ಷ ಆರ್.ಜೆ.ಶ್ರೇಣಿಕ್, ಸೇವಾ ಪ್ರತಿಷ್ಠಾನದ ಮುಖ್ಯಸ್ಥ ಡಿ.ಆರ್.ದಯಾನಂದ್, ಉಪೇಂದ್ರ, ಶಿವಾರೆಡ್ಡಿ, ಜಯರಾಮರೆಡ್ಡಿ, ಸಂಜೀವರೆಡ್ಡಿ, ಶಿವಕುಮಾರ್, ಮೂರ್ತಿ, ವೇಣುಗೋಪಾಲ್, ಎಂ.ಟಿ. ಹನುಮಂತರೆಡ್ಡಿ, ಪ್ರಭುರಾಜ್, ಎಸ್.ವೆಂಕಟೇಶ್, ಮುರಳೀಧರ್, ದೇವರಾಜ್, ಪದ್ಮರಾಜ್ ಸೇರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts