More

    ಈ ರಸ್ತೆಯಲ್ಲಿ ಸಂಚರಿಸುವುದೆಲ್ಲಿ?

    ಹನೂರು: ಪಟ್ಟಣದ ಆರ್.ಎಸ್. ದೊಡ್ಡಿ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ತೆರಳುವ ರಸ್ತೆ ಮಳೆ ಬಿದ್ದ ವೇಳೆ ಕೆಸರು ಗದ್ದೆಯಂತಾಗುತ್ತಿದೆ. ಇದರಿಂದ ರೈತರು ಒಂದು ವರ್ಷದಿಂದ ತುಂಬ ತೊಂದರೆ ಎದುರಿಸುವಂತಾಗಿದೆ.

    ಆರ್.ಎಸ್. ದೊಡ್ಡಿ ಬಳಿಯ ಮೆಟ್ರಿಕ್ ನಂತರದ ಬಾಲಕಿಯರ ಹಾಸ್ಟೆಲ್ ಸಮೀಪದಲ್ಲಿ ಕಳೆದ ವರ್ಷ ಏಪ್ರಿಲ್‌ನಲ್ಲಿ ನೂತನ ಕಟ್ಟಡವನ್ನು ನಿರ್ಮಿಸಿ ರೈತ ಸಂಪರ್ಕ ಕೇಂದ್ರವನ್ನು ತೆರೆಯಲಾಗಿದೆ. ಈ ಕೇಂದ್ರಕ್ಕೆ ಮಲೆ ಮಹದೇಶ್ವರಬೆಟ್ಟ ಮುಖ್ಯರಸ್ತೆಯಿಂದ ಸಂಪರ್ಕ ಕಲ್ಪಿಸಲಾಗಿದ್ದು, ಮಣ್ಣಿನ ರಸ್ತೆಯಿಂದ ಕೂಡಿದೆ. ಆದರೆ ಮಳೆಗಾಲದ ವೇಳೆ ಈ ರಸ್ತೆ ಕೆಸರು ಗದ್ದೆಯಂತಾಗುತ್ತದೆ. ಇದರಿಂದ ಕೆಲಸ ಕಾರ್ಯಗಳ ನಿಮಿತ್ತ ಹೋಬಳಿ ವ್ಯಾಪ್ತಿಯ ಜನರು ಕೇಂದ್ರಕ್ಕೆ ತೆರಳಬೇಕಾದರೆ ಆಸುಪಾಸಿನ ಜಮೀನಿನ ಮೇಲೆ ನಡೆದುಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೆಲ ಬೈಕ್ ಸವಾರರು ಕೆಸರಿನಲ್ಲಿ ಹರ ಸಾಹಸಪಟ್ಟು ತೆರಳುತ್ತಿದ್ದು, ಈ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿರುವ ಘಟನೆಗಳು ನಡೆಯುತ್ತಲೇ ಇವೆ. ಇನ್ನು ಈ ರಸ್ತೆಯಲ್ಲಿ ತೆರಳಲು ಸಾಧ್ಯವಿಲ್ಲ ಎಂಬುದನ್ನು ಮನಗಂಡ ರೈತರು ಬೈಕ್‌ಗಳನ್ನು ಮ.ಬೆಟ್ಟದ ಮುಖ್ಯರಸ್ತೆಯ ಬದಿಯಲ್ಲಿ ನಿಲ್ಲಿಸಿ ತೆರಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಈ ಕೇಂದ್ರದಿಂದ ಬಿತ್ತನೆ ಬೀಜ, ರಸಗೊಬ್ಬರ, ಕೃಷಿ ಪರಿಕರಗಳು ಸೇರಿದಂತೆ ಸರ್ಕಾರದಿಂದ ಸಿಗುವ ಸವಲತ್ತುಗಳ ಸಾಮಗ್ರಿಗಳನ್ನು ಗೂಡ್ಸ್ ವಾಹನದಲ್ಲಿ ಕೊಂಡೊಯ್ಯಬೇಕಾದರೆ ತುಂಬ ತೊಂದರೆಪಡಬೇಕಿದೆ. ಇತ್ತ ಈ ಹದಗೆಟ್ಟ ರಸ್ತೆಯಿಂದ ಕೆಲ ಆಟೋದವರು ಸಹ ಬರುತ್ತಿಲ್ಲ ಎಂಬುದಾಗಿ ರೈತರು ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts