More

    ಇಬ್ಬರು ವ್ಯಾಪಾರಿಗಳಿಗೆ ಸೋಂಕು ದೃಢ

    ಹಾವೇರಿ: ಜಿಲ್ಲೆಯಲ್ಲಿ ಮಂಗಳವಾರ ಮತ್ತಿಬ್ಬರಿಗೆ ಕರೊನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 43ಕ್ಕೇರಿದೆ. ಇದರಲ್ಲಿ ಮಂಗಳವಾರ ಒಬ್ಬ ಸೇರಿ ಒಟ್ಟು 24 ಜನರು ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಉಳಿದ 19 ಪ್ರಕರಣಗಳು ಸಕ್ರಿಯವಾಗಿವೆ ಎಂದು ಅಪರ ಜಿಲ್ಲಾಧಿಕಾರಿ ಎಂ. ಯೋಗೇಶ್ವರ ತಿಳಿಸಿದ್ದಾರೆ.

    ರಾಣೆಬೆನ್ನೂರಿನ 38 ವರ್ಷದ ಬಟ್ಟೆ ವ್ಯಾಪಾರಿ ಹಾಗೂ ಶಿಗ್ಗಾಂವಿಯ 37 ವರ್ಷದ ಪಿಗ್ಮಿ ಏಜೆಂಟ್ ಕೂಡ ಆಗಿರುವ ಸಕ್ಕರೆ ವ್ಯಾಪಾರಿಗೆ ಮಂಗಳವಾರ ಸೋಂಕು ದೃಢಪಟ್ಟಿದೆ.

    ಟ್ರಾವೆಲ್ ಹಿಸ್ಟರಿ: ರಾಣೆಬೆನ್ನೂರಿನ 38 ವರ್ಷದ ಬಟ್ಟೆ ವ್ಯಾಪಾರಿ ತಂದೆ, ತಾಯಿ ಹಾಗೂ ಪತ್ನಿಯೊಂದಿಗೆ ಮಾರುತಿ ನಗರದ ಕಾಳಿಕಾದೇವಿ ದೇವಸ್ಥಾನದ ಮುಂಭಾಗದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಬಟ್ಟೆ ವ್ಯಾಪಾರ ಮಾಡುತ್ತಿದ್ದ ಈತ ಬಟ್ಟೆ ಖರೀದಿಗೆ ಜೂ. 9ರಂದು ಕಾರಿನಲ್ಲಿ ಬೆಂಗಳೂರು ಚಿಕ್ಕಪೇಟೆ ಹೋಲ್​ಸೇಲ್ ಬಟ್ಟೆ ಅಂಗಡಿಗೆ ಭೇಟಿ ನೀಡಿ ಜೂ. 11ರಂದು ಮರಳಿ ರಾಣೆಬೆನ್ನೂರಿಗೆ ಬಂದಿದ್ದಾನೆ. ಜೂ. 17ರಂದು ಬಟ್ಟೆ ಖರೀದಿಗೆ ದಾವಣಗೆರೆಗೆ ಹೋಗಿ ಬಂದಿದ್ದಾನೆ. ನಂತರ ಜ್ವರ, ಕೆಮ್ಮು, ನೆಗಡಿ ಹಾಗೂ ಸುಸ್ತಿನಿಂದ ಬಳಲುತ್ತಿದ್ದಾಗ ರಾಣೆಬೆನ್ನೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ. ಜೂ. 20ರಂದು ಜ್ವರ, ಕೆಮ್ಮು, ನೆಗಡಿ ಕಾರಣ ಪುನಃ ಆಸ್ಪತ್ರೆಗೆ ತೆರಳಿದಾಗ ವೈದ್ಯರು ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಿದ್ದರು. ಜೂ. 22ರಂದು ವರದಿ ಪಾಸಿಟಿವ್ ಬಂದಿದೆ.

    ಪಿಗ್ಮಿ ಸಂಗ್ರಹಿಸುತ್ತಿದ್ದ ಶಿಗ್ಗಾಂವಿ ಪಟ್ಟಣದ 37ವರ್ಷದ ಪುರುಷ ತಂದೆ-ತಾಯಿಯೊಂದಿಗೆ ಶಿಗ್ಗಾಂವಿ ಪಟ್ಟಣದ ಅಪಾರ್ಟ್​ವೆುಂಟ್​ನಲ್ಲಿ ವಾಸವಾಗಿದ್ದ. ಪಿಗ್ಮಿಯಿಂದ ಸಂಗ್ರಹವಾದ ಹಣವನ್ನು ಶಿಗ್ಗಾಂವಿಯ ಕಿತ್ತೂರ ರಾಣಿ ಚೆನ್ನಮ್ಮ ಕೋ ಆಪರೇಟಿವ್ ಸೊಸೈಟಿಗೆ ಜಮಾ ಮಾಡುತ್ತಿದ್ದ. ಅಲ್ಲದೆ ಈತ ಅಂಗಡಿಗಳಿಗೆ ಸಕ್ಕರೆ ಸರಬರಾಜು ಮಾಡುವ ವೃತ್ತಿಯಲ್ಲಿ ತೊಡಗಿದ್ದ. ಜೂ. 17ರಂದು ಬಂಕಾಪುರ ಪಟ್ಟಣದ 11 ಹೋಲ್​ಸೇಲ್ ಅಂಗಡಿಗಳಿಗೆ ಸಕ್ಕರೆ ಸರಬರಾಜು ಮಾಡಿದ್ದಾನೆ. ಜೂ. 12ರಂದು ಹುಲಗೂರನ 12, ಶಿಗ್ಗಾಂವಿಯ ಆರು ಅಂಗಡಿಗಳಿಗೆ ಸಕ್ಕರೆ ಪೂರೈಸಿದ್ದಾನೆ. ಕಂಟೇನ್ಮೆಂಟ್ ಜೋನ್ ಸಂಪರ್ಕ ಹೊಂದಿದ್ದರಿಂದ ಜೂ. 20ರಂದು ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಜೂ. 22ರಂದು ವರದಿ ಪಾಸಿಟಿವ್ ಬಂದಿದೆ. ಸೋಂಕಿತ ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಕಂಟೇನ್ಮೆಂಟ್ ಜೋನ್…

    ಮಂಗಳವಾರ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ರಾಣೆಬೆನ್ನೂರು ನಗರದ ಮಾರುತಿ ನಗರದ ಕಾಳಿಕಾದೇವಿ ದೇವಸ್ಥಾನ ಹಾಗೂ ಶಿಗ್ಗಾಂವಿ ಜಯನಗರ ರಸ್ತೆ ಪ್ರದೇಶಗಳನ್ನೊಳಗೊಂಡ 100 ಮೀ. ಪ್ರದೇಶವನ್ನು ಕಂಟೇನ್ಮೆಂಟ್ ವಲಯ ಹಾಗೂ 200 ಮೀ. ಪ್ರದೇಶವನ್ನು ಬಫರ್ ಜೋನ್ ಆಗಿ ಪರಿವರ್ತಿಸಲಾಗಿದೆ. ಇನ್ಸಿಡೆಂಟ್ ಕಮಾಂಡರ್ ಆಗಿ ಮಾರುತಿ ನಗರಕ್ಕೆ ಹಾವೇರಿ ಉಪವಿಭಾಗಾಧಿಕಾರಿಗಳನ್ನು, ಶಿಗ್ಗಾಂವಿ ಜಯನಗರಕ್ಕೆ ಸವಣೂರ ಉಪವಿಭಾಗಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

    ಬ್ಯಾಡಗಿಯ ಪೊಲೀಸ್ ಕಾನ್​ಸ್ಟೇಬಲ್ ಚೇತರಿಕೆ

    ಕರೊನಾ ಸೋಂಕಿತನಾಗಿದ್ದ ಬ್ಯಾಡಗಿ ಪೊಲೀಸ್ ಠಾಣೆ ಕಾನ್​ಸ್ಟೇಬಲ್ ಕದರಮಂಡಲಗಿಯ 41 ವರ್ಷದ ಪುರುಷ ಗುಣವಾಗಿದ್ದು, ಮಂಗಳವಾರ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಯಿತು.

    ಎಸ್​ಪಿ ಕೆ.ಜಿ. ದೇವರಾಜ್, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ ಇತರರು ಹೂಗುಚ್ಛ ನೀಡಿ, ಪುಷ್ಪವೃಷ್ಟಿಗೈದು ಬೀಳ್ಕೊಟ್ಟರು. ಪೊಲೀಸ್ ವಾಹನದಲ್ಲಿ ಮನೆಗೆ ಕಳುಹಿಸಲಾಯಿತು. ಇವರಿಗೆ ಜೂ. 15ರಂದು ಸೋಂಕು ದೃಢಪಟ್ಟಿತ್ತು. ಸಂರ್ಪತ ಎಲ್ಲ ವ್ಯಕ್ತಿಗಳ ವರದಿ ನೆಗಟಿವ್ ಬಂದಿದೆ.

    ಎಸ್​ಪಿ ಕೆ.ಜಿ. ದೇವರಾಜ್ ಮಾತನಾಡಿ, ಇಂದಿನಿಂದ ಬ್ಯಾಡಗಿ ಪೊಲೀಸ್ ಠಾಣೆ ಸೀಲ್​ಡೌನ್ ತೆರವುಗೊಳಿಸಿ ಎಂದಿನಂತೆ ಕಚೇರಿ ಕೆಲಸ ಆರಂಭಿಸಲಾಗುವುದು ಎಂದರು.

    ಡಿವೈಎಸ್ ವಿಜಯಕುಮಾರ ಸಂತೋಷ, ಸಿಪಿಐಗಳಾದ ಸಂತೋಷ ಪವಾರ, ಮಂಜಣ್ಣ ಟಿ., ಪಿಎಸ್​ಐಗಳಾದ ಎಂ.ಎಂ. ಮಹಾಂತೇಶ, ಜಿ.ಬಿ. ನಾವಿ, ಪಿ.ಜಿ. ನಂದಿ, ಎಂ.ಡಿ. ಬೆಟಗೇರಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಪಿ.ಆರ್. ಹಾವನೂರ, ಡಾ. ಸುರೇಶ ಪೂಜಾರ, ಡಾ. ನಿರಂಜನ ಬಣಕಾರ, ಡಾ. ವಿಶ್ವನಾಥ ಸಾಲಿಮಠ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts