More

    ಇಬ್ಬರಲ್ಲಿ ಸೋಂಕಿಲ್ಲ, ಒಬ್ಬರ ವರದಿ ಬಂದಿಲ್ಲ

    ಹಾವೇರಿ: ಶಂಕಿತ ಕರೊನಾ ಸೋಂಕು ಲಕ್ಷಣ ಕಂಡು ಬಂದ ಹಿನ್ನೆಲೆಯಲ್ಲಿ ಶಿವಮೊಗ್ಗ ಪ್ರಯೋಗಾಲಯಕ್ಕೆ ಕಳುಹಿ ಸಲಾಗಿದ್ದ ಜಿಲ್ಲೆಯ ಮೂವರ ರಕ್ತ ಹಾಗೂ ಕಫ ಮಾದರಿ ಪರೀಕ್ಷೆಯಲ್ಲಿ ಇಬ್ಬರಲ್ಲಿ ಸೋಂಕು ಕಂಡುಬಂದಿಲ್ಲ. ಇನ್ನೊಬ್ಬರ ವರದಿ ಬುಧವಾರ ಬರಲಿದೆ.

    ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಕರೊನಾ ಶಂಕಿತ ವ್ಯಕ್ತಿಗಳು ಪತ್ತೆಯಾಗಿದ್ದರಿಂದ ಜಿಲ್ಲಾದ್ಯಂತ ಭೀತಿ ಆವರಿಸಿತ್ತು. ಇದೀಗ ಶಂಕಿತ ವ್ಯಕ್ತಿಗಳು ಕಡಿಮೆಯಾಗಿರುವುದರಿಂದ ಜನ ನಿಟ್ಟುಸಿರು ಬಿಡುವಂತಾಗಿದೆ. ಈವರೆಗೆ ಜಿಲ್ಲೆಗೆ ವಿದೇಶದಿಂದ ಬಂದ 32 ಜನರು ಹಾಗೂ ಇವರ ಸಂಪರ್ಕಕ್ಕೆ ಬಂದ 133ಜನ ಸೇರಿ ಒಟ್ಟು 165 ಜನರ ಆರೋಗ್ಯ ತಪಾಸಣೆ ಮಾಡಲಾಗಿದೆ. 164 ಜನರನ್ನು ಅವರ ಮನೆಯಲ್ಲಿಯೇ ಇಟ್ಟು ನಿಗಾ ವಹಿಸಲಾಗಿದೆ. ಒಬ್ಬರನ್ನು ಜಿಲ್ಲಾಸ್ಪತ್ರೆಯ ವಾರ್ಡ್​ನಲ್ಲಿರಿಸಲಾಗಿದೆ. ರಟ್ಟಿಹಳ್ಳಿಯಿಂದ ಶಿವಮೊಗ್ಗಕ್ಕೆ ತೆರಳಿದ್ದ ಶಂಕಿತ ವ್ಯಕ್ತಿಯ ತಪಾಸಣೆ ವರದಿಯೂ ನೆಗೆಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಜೇಂದ್ರ ದೊಡ್ಡಮನಿ ತಿಳಿಸಿದ್ದಾರೆ.

    ಮುಂದುವರಿದ ಹೈ ಅಲರ್ಟ್: ಕರೊನಾ ವೈರಸ್ ನಿಯಂತ್ರಣ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹೈಅಲರ್ಟ್ ಮಾತ್ರ ಮುಂದುವರಿದಿದೆ. ಬಸ್ ನಿಲ್ದಾಣದಲ್ಲಿ ಶಂಕಿತರ ತಪಾಸಣೆ ಹಾಗೂ ಜಾಗೃತಿ ಮೂಡಿಸಲು ನರ್ಸಿಂಗ್ ವಿದ್ಯಾರ್ಥಿಗಳ ತಂಡವನ್ನು ಇರಿಸಲಾಗಿದೆ. ಕೋಳಿ ಮಾರಾಟ ಸ್ಥಗಿತಗೊಳಿಸಲಾಗಿದೆ. ಪ್ರವಾಸಿ ತಾಣಗಳನ್ನು ಮಾ. 20ರವರೆಗೆ ಬಂದ್ ಮಾಡಿಸಲಾಗಿದೆ.

    ಮಾರುಕಟ್ಟೆಯಲ್ಲಿನ ವ್ಯಾಪಾರ ವಹಿವಾಟಿಗೆ ಯಾವುದೇ ತೊಂದರೆಯಾಗಿಲ್ಲ. ಎಂದಿನಂತೆ ಜನಜೀವನವೂ ಸಹಜವಾಗಿದೆ. ಬೆಂಗಳೂರಿಗೆ ತೆರಳುವ ಬಸ್​ಗಳನ್ನು ಡಿಪೋಗೆ ಒಂದರಂತೆ ರದ್ದುಗೊಳಿಸಿರುವುದು ಮುಂದುವರಿದಿದೆ. ಬೆಂಗಳೂರು, ಕಲಬುರಗಿಗೆ ಸಂಚರಿಸುವ ಬಸ್​ಗಳನ್ನು ನಿತ್ಯ ಸ್ವಚ್ಛಗೊಳಿಸಲಾಗುತ್ತಿದೆ.

    ಬಂದ್ ಘೊಷಿಸಿದ್ದರೂ ನಡೆದ ಸಂತೆ
    ಬಂಕಾಪುರ:
    ಪುರಸಭೆ ಮುಖ್ಯಾಧಿಕಾರಿ ರೇಣುಕಾ ದೇಸಾಯಿ ಅವರು ವಾರದ ಸಂತೆಯನ್ನು ರದ್ದು ಪಡಿಸಿದ್ದರೂ ವ್ಯಾಪಾರಸ್ಥರು ಸ್ಪಂದಿಸದ ಕಾರಣ ಮಂಗಳವಾರ ಸಂತೆ ಎಂದಿನಂತೆ ಜರುಗಿತು. ಪುರಸಭೆಯವರು ಸಂತೆ ಬಂದ್ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳದ ಕಾರಣ ವ್ಯಾಪಾರಸ್ಥರು ಎಂದಿನಂತೆ ತಮ್ಮ ಅಂಗಡಿಗಳನ್ನು ತೆರೆದು ವ್ಯಾಪಾರ ನಡೆಸಿದರು. ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಸೋಮವಾರ ಒಬ್ಬರ ಕಫ ಮತ್ತು ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೂ ಪುರಸಭೆ ಕರೊನಾ ವೈರಸ್ ಕುರಿತು ಮುಂಜಾಗ್ರತೆಗೆ ಸೂಕ್ತ ಕ್ರಮಗೊಳ್ಳದೆ ಕಾಟಾಚಾರದ ಆದೇಶ ಮಾಡಿ ನಿರ್ಲಕ್ಷಿಸಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

    ಸಾಮೂಹಿಕ ವಿವಾಹ ರದ್ದು ಪುಣ್ಯಾರಾಧನೆ ಸರಳ ಆಚರಣೆ
    ರಟ್ಟಿಹಳ್ಳಿ:
    ಶ್ರೀ ಜಯಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಪುಣ್ಯಾರಾಧನೆ ನಿಮಿತ್ತ ಪ್ರತಿ ವರ್ಷ ಏ. 30 ಮತ್ತು ಮೇ 1ರಂದು ಕಬ್ಬಿಣಕಂತಿಮಠದಲ್ಲಿ ಆಯೋಜಿ ಸುತ್ತಿದ್ದ ಸಾಮೂಹಿಕ ವಿವಾಹ ಮಹೋತ್ಸವವನ್ನು ಈ ವರ್ಷ ರದ್ದು ಮಾಡಲಾಗುತ್ತಿದೆ. ಶ್ರೀಗಳ ಪುಣ್ಯಾರಾಧನೆಯನ್ನು ಸರಳವಾಗಿ ಆಚರಿಸಲಾಗುತ್ತದೆ ಎಂದು ಮಠದ ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

    ಮಠದ ಸಮುದಾಯ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀಗಳು, ಜಗತ್ತಿನಾದ್ಯಂತ ಕರೊನಾ ವೈರಸ್ ಹರಡುತ್ತಿರುವುದು ಅಪಾಯಕಾರಿ. ಮುಂಜಾಗ್ರತೆ ಕ್ರಮವಾಗಿ ಸಾಮೂಹಿಕ ವಿವಾಹ ಮಹೋತ್ಸವದ ಬಗ್ಗೆ ಭಕ್ತರ ಸಮ್ಮುಖದಲ್ಲಿ ಸಭೆ ನಡೆಸಲಾಯಿತು. ಸಾರ್ವಜನಿಕರ ಹಿತದೃಷ್ಟಿಯಿಂದ ಮತ್ತು ರಾಜ್ಯ ಸರ್ಕಾರದ ಆದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹವನ್ನು ರದ್ದು ಮಾಡಲು ತೀರ್ವನಿ ಸಲಾಯಿತು. ಸಾರ್ವ ಜನಿಕರು ಸಹಕರಿ ಸಬೇಕು ಎಂದು ಶ್ರೀ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು. ಸಭೆಯಲ್ಲಿ ಎಸ್.ಬಿ. ಪಾಟೀಲ, ಯು.ಯು. ಬಣಕಾರ, ವಸಂತ ದ್ಯಾವಕ್ಕಳವರ, ಸುರೇಶ ಬೆಣ್ಣಿ, ಬಸಯ್ಯ ಕಬ್ಬಿಣಕಂತಿಮಠ, ಇತರ ಭಕ್ತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts