More

    ಇನ್ನೆರಡು ದಿನಗಳಲ್ಲಿ ಲಾಕ್​ಡೌನ್?

    ಗದಗ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕರೊನಾ ವೈರಸ್ ಆರ್ಭಟ ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಕೋವಿಡ್-19 ನಿಯಂತ್ರಣಕ್ಕಾಗಿ ಮತ್ತೊಮ್ಮೆ ಲಾಕ್​ಡೌನ್ ಮಾಡುವ ಕುರಿತು ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ಣಯ ಕೈಗೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.

    ಬೆಂಗಳೂರು ಸೇರಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಕರೊನಾ ಸೋಂಕು ಹಿಡಿತಕ್ಕೆ ಸಿಗದ ಹಿನ್ನೆಲೆಯಲ್ಲಿ ಸರ್ಕಾರ ಮಂಗಳವಾರದಿಂದ ಒಂದು ವಾರ ಮತ್ತೊಮ್ಮೆ ಲಾಕ್​ಡೌನ್ ಘೊಷಿಸಲು ತೀರ್ವನಿಸಿದೆ. ಎಲ್ಲ ಜಿಲ್ಲೆಗಳ ಜಿಲ್ಲಾಧಿಕಾರಿ ಜತೆಗಿನ ವಿಡಿಯೋ ಸಂವಾದ ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ಕರೊನಾ ಕುರಿತು ಆಯಾ ಜಿಲ್ಲೆಯ ಪರಿಸ್ಥಿತಿ ಅವಲೋಕಿಸಿ ಲಾಕ್​ಡೌನ್ ಬೇಕು, ಬೇಡ ಎಂಬ ಕುರಿತು ನಿರ್ಧಾರ ಕೈಗೊಳ್ಳಬೇಕು. ಲಾಕ್​ಡೌನ್ ಘೊಷಿಸುವ ಜವಾಬ್ದಾರಿಯನ್ನು ಆಯಾ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವಿವೇಚನೆಗೆ ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನೆರಡು ದಿನ ಕಾದು ನೋಡಿ ಸರ್ವ ಪಕ್ಷಗಳ ಜನಪ್ರತಿನಿಧಿಗಳ ಸಭೆ ಕರೆದು ಸುದೀರ್ಘವಾಗಿ ರ್ಚಚಿಸಿ ಅಂತಿಮ ನಿರ್ಣಯ ಕೈಗೊಳ್ಳಲು ಗದಗ ಜಿಲ್ಲಾಡಳಿತ ತೀರ್ವನಿಸಿದೆ.

    ಕಳೆದ 13 ದಿನಗಳಲ್ಲಿ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ ತ್ರೀ ಶತಕ ಬಾರಿಸಿದೆ. ಇಲ್ಲಿವರೆಗೆ 315 ಜನರು ಸೋಂಕಿಗೆ ತುತ್ತಾಗಿದ್ದಾರೆ. 165 ಜನರು ಸೋಂಕಿನಿಂದ ಗುಣವಾಗಿದ್ದಾರೆ. ಜಿಲ್ಲೆಯಲ್ಲಿ ಗುಣವಾಗಿರುವವರ ಸಂಖ್ಯೆ ಹೆಚ್ಚಿದ್ದರೂ ಸೋಂಕಿತರ ಸಂಖ್ಯೆ ದ್ವಿಗುಣಗೊಳ್ಳುತಿರುವುದರಿಂದ ಆತಂಕ ಮನೆ ಮಾಡಿದೆ.

    ಕರೊನಾ ಅಟ್ಟಹಾಸ ಮುಂದುವರಿದ ಬೆನ್ನಲ್ಲೇ ಆರೋಗ್ಯ ಇಲಾಖೆ ಪ್ರಕಾರ ಗದಗ ಜಿಲ್ಲೆಯೂ ಡೇಂಜರ್ ಜೋನ್​ನಲ್ಲಿ ಇದೆ. ಇದರಿಂದ ಜಿಲ್ಲೆಯ ಜನರು ನಲುಗಿ ಹೋಗಿದ್ದಾರೆ. ಹೀಗಾಗಿ ಜಿಲ್ಲೆಯಲ್ಲೂ ಒಂದು ವಾರ ಲಾಕ್​ಡೌನ್ ಹೇರಬೇಕೆಂಬ ಬಗ್ಗೆ ಚರ್ಚೆ ನಡೆದಿದೆ. ನಗರದ ಗ್ರೇನ್ ಮಾರ್ಕೆಟ್ ವ್ಯಾಪಾರಸ್ಥರು ಅರ್ಧ ದಿನ (ಮಧ್ಯಾಹ್ನ 2ರಿಂದ ರಾತ್ರಿವರೆಗೆ) ತಮ್ಮ ಅಂಗಡಿ-ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ನಿರ್ಧರಿಸಿದ್ದಾರೆ. ಮಂಗಳವಾರದಿಂದ ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಲಾಕ್ ಡೌನ್ ಹೇರಿದ್ದರಿಂದ ಗದಗ ಜಿಲ್ಲೆಯಲ್ಲೂ ಲಾಕ್​ಡೌನ್ ಘೊಷಿಸಬಹುದೆಂಬ ಕಾರಣದಿಂದ ಜನರು ವಿವಿಧ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದು ಕಂಡುಬಂತು. ಕರೊನಾ ಹಾವಳಿ ಹೆಚ್ಚುತ್ತಿದ್ದರೂ ಜನರು ಮಾತ್ರ ಮುಖಕ್ಕೆ ಮಾಸ್ಕ್ ಧರಿಸಿರಲಿಲ್ಲ.

    ದಿನಸಿ ಖರೀದಿಗೆ ಮುಗಿಬಿದ್ದ ಜನ: ಲಕ್ಷೆ್ಮೕಶ್ವರ: ರಾಜ್ಯಾದ್ಯಂತ ಜು. 14ರಿಂದ ಮತ್ತೆ ಲಾಕ್​ಡೌನ್ ಘೊಷಣೆಯಾಗುತ್ತದೆ ಎಂಬ ಸುದ್ದಿ ಹಿನ್ನೆಲೆಯಲ್ಲಿ ಪಟ್ಟಣದ ಮಾರುಕಟ್ಟೆಯಲ್ಲಿ ಜನತೆ ಸೋಮವಾರ ಜೀವನಾವಶ್ಯಕ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದರು. ಭಾನುವಾರದ ಕರ್ಫ್ಯೂನಿಂದಾಗಿ ವ್ಯಾಪಾರ-ವಹಿವಾಟು ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ಜನಸಂದಣಿ ಹೆಚ್ಚಲು ಕಾರಣವಾಗಿತ್ತು. ತಾಲೂಕಿನಲ್ಲಿ ಈಗಾಗಲೇ 17 ಕರೊನಾ ಪ್ರಕರಣಗಳು ಕಂಡುಬಂದಿದ್ದರೂ ಪಟ್ಟಣದಲ್ಲಿ ನಿತ್ಯ ಸಂತೆ, ಜಾತ್ರೆ, ಹಬ್ಬದಂಥ ವಾತಾವರಣ ಕಂಡು ಬರುತ್ತಿದೆ. ಇದರಿಂದ ಕರೊನಾ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.

    ಆರು ಜನರಿಗೆ ಕರೊನಾ: ಗದಗ ಜಿಲ್ಲೆಯಲ್ಲಿ 6 ಜನರಿಗೆ ಕೋವಿಡ್-19 ಸೋಂಕು ಸೋಮವಾರ ದೃಢಪಟ್ಟಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 321ಕ್ಕೆ ಏರಿಕೆಯಾಗಿದೆ.

    ರೋಣ ತಾಲೂಕಿನ ಹುಲ್ಲೂರು ಗ್ರಾಮದ ನಿವಾಸಿ 26 ವರ್ಷದ ಪುರುಷನಿಗೆ ಸೋಂಕು ತಗುಲಿದ್ದು, ಸೋಂಕಿನ ಪತ್ತೆ ಕಾರ್ಯ ನಡೆದಿದೆ.

    ಕೆಮ್ಮು ಹಾಗೂ ಜ್ವರ ರೋಗ ಲಕ್ಷಣದಿಂದ ಬಳಲುತ್ತಿದ್ದ ಗದಗ ಜಿಮ್ಸ್ ಆಸ್ಪತ್ರೆಯ 22 ವರ್ಷದ ಮಹಿಳೆ ಹಾಗೂ ಗದಗ ನಗರದ ಕಳಸಾಪುರ ರಸ್ತೆಯ ಬ್ಲೂಸ್ಟಾರ್ ಬಜಾರ್ ಹತ್ತಿರದ ನಿವಾಸಿ 59 ವರ್ಷದ ಮಹಿಳೆಗೆ ಕರೊನಾ ಸೋಂಕು ದೃಢವಾಗಿದೆ. ಗದಗ-ಬೆಟಗೇರಿ ಭಜಂತ್ರಿ ಓಣಿಯ ನಿವಾಸಿ 31 ವರ್ಷದ ಪುರುಷನಿಗೆ (ಪಿ-35948 ಸಂಪರ್ಕದಿಂದ) ಹಾಗೂ ಗದಗ ಹುಡ್ಕೋ ಕಾಲನಿಯ ನಿವಾಸಿ 14 ವರ್ಷದ ಬಾಲಕನಿಗೆ (ಪಿ-31113 ಸಂಪರ್ಕದಿಂದ) ಕರೊನಾ ವೈರಸ್ ತಗುಲಿದೆ.

    ನರಗುಂದ ತಾಲೂಕಿನ ದಂಡಾಪುರದ ನಿವಾಸಿ 24 ವರ್ಷದ ಪುರುಷನಿಗೆ ಬೆಂಗಳೂರು ಪ್ರಯಾಣದಿಂದ ಕೋವಿಡ್-19 ಸೋಂಕು ದೃಢವಾಗಿದೆ. ಸೋಂಕಿತರಿಗೆ ನಿಗದಿತ ಕೋವಿಡ್-19 ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಗದಗ ಜಿಲ್ಲಾಧಿಕಾರಿ ಎಂ. ಸುಂದರೇಶ ಬಾಬು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts