More

    ಇಂದಿನಿಂದ ಪಂದ್ಯಾವಳಿ ಆರಂಭ

    ಯಾದಗಿರಿ: ಮಹಾನ್ ಕ್ರಾಂತಿಕಾರಿ ನೇತಾಜಿ ಸುಭಾಶ್ಚಂದ್ರ ಬೋಸ್ರ ಜಯಂತಿ ನಿಮಿತ್ತ ಸೋಮವಾರಿಂದ ಆಯೋಜಿಸಲಾಗಿರುವ ಖೋಖೋ ಮತ್ತು ಕ್ರಿಕೆಟ್ ಪಂದ್ಯಾವಳಿ ಸಿದ್ಧತೆಯನ್ನು ಭಾನುವಾರ ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ್ ಪರಿಶೀಲಿಸಿದರು.


    ಈ ವೇಳೆ ಮಾತನಾಡಿದ ಅವರು, ನೇತಾಜಿ ಜಯಂತ್ಯುತ್ಸವ ಸಮಿತಿಯಿಂದ ಕಾರ್ಯಕ್ರಮ ನಡೆಯಲಿದ್ದು, ನಗರದ ಎಪಿಎಂಸಿ ಮುಂಭಾಗದಲ್ಲಿನ ಆಟದ ಮೈದಾನದಲ್ಲಿ ಡಿ.26 ರಂದು ಮಧ್ಯಾಹ್ನ 1 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಜಿಲ್ಲಾಕಾರಿ ಸ್ನೇಹಲ್, ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಡಾ.ಸಿ.ಬಿ.ವೇದಮೂತರ್ಿ, ಶಾಸಕ ವೆಂಕಟರಡ್ಡಿ ಮುದ್ನಾಳ್ ಸೇರಿದಂತೆ ಇನ್ನಿತರ ಗಣ್ಯರು ಆಗಮಿಸಲಿದ್ದಾರೆ. ಯಾದಗಿರಿ ಮತ್ತು ಗುರಮಠಕಲ್ ಕ್ಷೇತ್ರದ 7 ಹೋಬಳಿಗಳಲ್ಲಿ ಪಂದ್ಯಗಳು ಆರಂಭಗೊಳ್ಳಲಿವೆ. ವಿಜೇತ ಕ್ರಿಕೆಟ್ ತಂಡಕ್ಕೆ ಮೊದಲ ಬಹುಮಾನ 1 ಲಕ್ಷ ರೂ. 2ನೇ ಬಹುಮಾನ 51 ಸಾವಿರ ಮತ್ತು ಮೂರನೇ ಬಹುಮಾನ 25 ಸಾವಿರ ನಗದು ಹಾಗೂ ಸ್ಮರಣಿಗೆ ಒಳಗೊಂಡಿರುತ್ತದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ನಗರಸಭೆ ಸದಸ್ಯ ಹಣಮಂತ ಇಟಗಿ, ಮಾರುತಿ ಕಲಾಲ್, ರಮೇಶ ದೊಡ್ಮನಿ, ಮಂಜುನಾಥ ಜಡಿ, ಶರಣಗೌಡ ಕಾಳೆಬೆಳಗುಂದಿ ಇದ್ದರು.

    ಅಸ್ಪ್ರಶ್ಯತಾ ನಿವಾರಣಾ ಹೋರಾಟದ ರೂವಾರಿ, ಸ್ವಾತಂತ್ರ್ಯ ಹೋರಾಟಗಾರ ದಿ.ವಿಶ್ವನಾಥರಡ್ಡಿ ಮುದ್ನಾಳ್ರ ಜನ್ಮದಿನ ಸೋಮವಾರ ನಗರದ ವೀರನಿಕೇತನದಲ್ಲಿ ಆಯೋಜಿಸಲಾಗಿದೆ. ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ನಡೆಯಲಿದ್ದು, ಮುದ್ನಾಳ್ ಅಭಿಮಾನಿಗಳು, ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮಹೇಶರಡ್ಡಿ ಮುದ್ನಾಳ್ ಕೋರಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts