More

    ಇಂಜಿನಿಯರ್‌ಗೆ ಬ್ಲ್ಯಾಕ್ ಫಂಗಸ್?

    ಅಥಣಿ: ಕರೊನಾ ಹಾವಳಿ ಮಧ್ಯೆಯೇ ಜನರಲ್ಲಿ ಆತಂಕ ಸೃಷ್ಟಿಸಿರುವ ಬ್ಲಾೃಕ್ ಫಂಗಸ್ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಪಂಚಾಯಿತಿಯ ನರೇಗಾ ಯೋಜನೆಯ ಸಹಾಯಕ ಅಭಿಯಂತರೊಬ್ಬರಲ್ಲಿ ಪತ್ತೆಯಾಗಿದೆ. ಮೂಲತಃ ರಾಯಬಾಗ ತಾಲೂಕಿನ ಖೇಮಲಾಪುರ ಗ್ರಾಮದ ಆನಂದ ಕುಲಾಲಿ (30) ಬ್ಲ್ಯಾಕ್ ಫಂಗಸ್ ರೋಗಕ್ಕೆ ತುತ್ತಾದವರು. ಮಹಾರಾಷ್ಟ್ರದ ಮಿರಜ್ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಆನಂದ ಅವರಿಗೆ ಮೇ 5ರಂದು ಕೋವಿಡ್-19 ಟೆಸ್ಟ್ ಮಾಡಿಸಲಾಗಿತ್ತು. ಮೇ 7ರಂದು ಕರೊನಾ ಸೋಂಕು ದೃಢಪಟ್ಟು, ಉಸಿರಾಟದ ಸಮಸ್ಯೆ ಕಾಣಿಸಿದ್ದರಿಂದ ಹುಕ್ಕೇರಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ಬೇರೆ ಕಡೆ ಶಿಫಾರಸು ಮಾಡಿದ್ದರಿಂದ ಮೇ 10ರಂದು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

    ವೈದ್ಯರ ಸ್ಪಷ್ಟನೆ: ಮುಖ ಬಾವು ಬಂದಿದ್ದರಿಂದ ಇಎನ್‌ಟಿ ತಜ್ಞರ ಬಳಿ ಪರೀಕ್ಷೆ ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದರು. ಬಳಿಕ ಮಹಾರಾಷ್ಟ್ರದ ಮಿರಜ್ ಖಾಸಗಿ ಆಸ್ಪತ್ರೆಗೆ ದಾಖಲಾದ ಆನಂದ ಅವರಿಗೆ ಕೆಲ ಪರೀಕ್ಷೆ ನಡೆಸಿದಾಗ ಬ್ಲ್ಯಾಕ್ ಫಂಗಸ್ ಇರುವುದು ಗೊತ್ತಾಗಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದರು. ಅಲ್ಲದೆ, ಕೋವಿಡ್‌ನಿಂದ ಗುಣಮುಖನಾದ ಬಳಿಕ ಸರ್ಜರಿ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ.

    ಸವದಿ ಭರವಸೆ: ಸರ್ಜರಿ ಮಾಡಿಸಲು ಹಣವಿಲ್ಲದೆ ಆನಂದ ಕುಟುಂಬಸ್ಥರು ರಾಜ್ಯ ಸರ್ಕಾರ ತಮ್ಮ ನೆರವಿಗೆ ಬರುವಂತೆ ಮನವಿ ಮಾಡಿದ್ದರು. ಹೀಗಾಗಿ ಅಥಣಿ ತಾಲೂಕು ಪಂಚಾಯಿತಿ ಸಿಬ್ಬಂದಿ ಆನಂದ ಕುರಿತು ವಿವರ ಪಡೆದ ಡಿಸಿಎಂ ಲಕ್ಷ್ಮಣ ಸವದಿ, ಸರ್ಜರಿ ಹಾಗೂ ಚಿಕಿತ್ಸೆಗೆ ತಗಲುವ ಸಂಪೂರ್ಣ ವೆಚ್ಚ ಭರಿಸುವುದಾಗಿ ಭರವಸೆ ನೀಡಿದ್ದಾರೆ. ಆನಂದನನ್ನು ಸೋಮವಾರ ಬೆಂಗಳೂರಿಗೆ ಶಿಫ್ಟ್ ಮಾಡಲು ಡಿಸಿಎಂ ಸವದಿ ಸೂಚನೆ ನೀಡಿದ್ದು, ಬೆಂಗಳೂರಿನಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗಾಗಿಯೇ ಆರಂಭಗೊಳ್ಳುತ್ತಿರುವ ಪ್ರತ್ಯೇಕ ಆಸ್ಪತ್ರೆಯಲ್ಲೇ ಚಿಕಿತ್ಸೆ ಕೊಡಿಸುವುದಾಗಿ ತಿಳಿಸಿದ್ದಾರೆ.

    ಜಿಲ್ಲೆಯಲ್ಲಿಲ್ಲ ಕಪ್ಪು ಶಿಲೀಂಧ್ರ ಪ್ರಕರಣ

    ಬೆಳಗಾವಿ: ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡಿರುವ ಬಗ್ಗೆ ಈವರೆಗೂ ಖಚಿತ ಮಾಹಿತಿ ಇಲ್ಲ. ಖಾಸಗಿ ವ್ಯಕ್ತಿಗಳು ಹಾಗೂ ಸಂಬಂಧಿಕರು ಈ ರೀತಿಯ ಸುದ್ದಿ ಹರಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಹೇಳಿದ್ದಾರೆ. ನಗರದಲ್ಲಿ ಭಾನುವಾರ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆ ಆಗಿರುವ ಬಗ್ಗೆ ಕೆಲ ಮಾಧ್ಯಮ ಹಾಗೂ ಪತ್ರಿಕೆಗಳ ವರದಿ ನೋಡಿದ್ದೇನೆ. ಈ ಬಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಬಳಿ ಮಾತನಾಡಿದಾಗ ಬ್ಲ್ಯಾಕ್ಫಂ ಗಸ್ ಪ್ರಕರಣ ಇರುವ ಬಗ್ಗೆ ವರದಿ ಆಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಹೀಗಾಗಿ, ಜಿಲ್ಲೆಯ ಜನ ಹೆದರಬೇಕಿಲ್ಲ ಎಂದು ಅವರು ಮನವಿ ಮಾಡಿದ್ದಾರೆ.

    ಆನಂದ ಕುಲಾಲಿ ಎಂಬುವರು ಬ್ಲ್ಯಾಕ್ ಫಂಗಸ್‌ನಿಂದ ಬಳಲುತ್ತಿರುವ ಕುರಿತು ಮಾಧ್ಯಮಗಳಲ್ಲಿ ಬಂದ ವರದಿಯಿಂದ ತಿಳಿದುಕೊಂಡಿದ್ದೇನೆ. ಈಗಾಗಲೇ ಅವರ ಕುಟುಂಬದೊಂದಿಗೆ ಮಾತನಾಡಿದ್ದು, ಮೇ 17ರಂದು ಬೆಂಗಳೂರಿನಲ್ಲಿ ಪ್ರಾರಂಭವಾಗುತ್ತಿರುವ ಬ್ಲ್ಯಾಕ್ ಫಂಗಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇನೆ. ಸಚಿವ ಸುಧಾಕರ್ ಅವರೊಂದಿಗೆ ಮಾತನಾಡಿದ್ದು, ಚಿಕಿತ್ಸಾ ವೆಚ್ಚ ನೋಡಿಕೊಳ್ಳಲಾಗುವುದು.
    | ಲಕ್ಷ್ಮಣ ಸವದಿ ಉಪ ಮುಖ್ಯಮಂತ್ರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts