More

    ಆಶ್ರಯ ಮನೆ ಯೋಜನೆಗೆ 4 ಸಾವಿರ ಅರ್ಜಿ ಅರ್ಹ

    ತುಮಕೂರು : ನಗರದಲ್ಲಿ ಆಶ್ರಯ ಮನೆ ಯೋಜನೆಯಡಿ ಆನ್‌ಲೈನ್‌ನಲ್ಲಿ 22 ಸಾವಿರಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿದ್ದು, ಇದರಲ್ಲಿ 4 ಸಾವಿರ ಅರ್ಜಿಗಳು ಅರ್ಹವಾಗಿವೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.

    ನಗರದ ಟೌನ್‌ಹಾಲ್‌ನಲ್ಲಿರುವ ಶಾಸಕರ ಕಚೇರಿಯಲ್ಲಿ ಶುಕ್ರವಾರ ನಗರ ಆಶ್ರಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಬಗ್ಗೆ ನಮಗೆ ವಾಹಿತಿಯಿಲ್ಲ. ನಮಗೂ ಅರ್ಜಿ ಸಲ್ಲಿಸಲು ಅವಕಾಶ ಕೊಡಿ, ನಾವು ಅರ್ಹರು ಎಂದು ನೂರಾರು ಸಾರ್ವಜನಿಕರು ನನ್ನ ಬಳಿ ಬಂದು ಅಳಲು ತೋಡಿಕೊಂಡಿದ್ದಾರೆ ಎಂದರು.

    ಜನರ ಮನವಿ ಹಿನ್ನೆಲೆಯಲ್ಲಿ ಅರ್ಹ ಫಲಾನುಭವಿಗಳಿಗೆ ಆಶ್ರಯ ಮನೆ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ವಾಡಿಕೊಡಲು ವಸತಿ ಸಚಿವ ವಿ.ಸೋಮಣ್ಣ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.

    ತುಮಕೂರು ನಗರದಲ್ಲಿ ಸೈಟ್ ಹಂಚಿಕೆ ವಾಡಲು ಸಾಧ್ಯವಿಲ್ಲ, ಸರ್ಕಾರಿ ಜಮೀನುಗಳ ಬಗ್ಗೆ ವಾಹಿತಿ ಪಡೆದುಕೊಳ್ಳುತ್ತಿದ್ದು, ಜಿ+2 ಮನೆಗಳನ್ನು ನಿರ್ವಾಣ ವಾಡಲಾಗುವುದು. 4 ಕಡೇ ಸರ್ಕಾರಿ ಜಮೀನು ಗುರುತಿಸಲಾಗಿದ್ದು, ಸರ್ಕಾರಿ ಜಮೀನುಗಳಿಗೆ ಜಿ.ಪಿ.ಎಸ್.ಕೋಆರ್ಡಿನೇಟರ್ ಸರ್ವೇ ನಡೆಸಿ ಎಂದರು.
    ಮೇಯರ್ ಬಿ.ಜಿ.ಕೃಷ್ಣಪ್ಪ, ಆಯುಕ್ತೆ ರೇಣುಕಾ, ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ ರಂಗಸ್ವಾಮಿ, ತಹಶೀಲ್ದಾರ್ ಮೋಹನಕುಮಾರ್, ಸದಸ್ಯರಾದ ಸರೋಜಗೌಡ, ವಿಜಯ್ ಪ್ರಕಾಶ್, ಸಿದ್ದಗಂಗಯ್ಯ, ಸ್ಲಂ ಬೋರ್ಡ್ ಎಇಇ ಲೋಕೇಶ್ವರಪ್ಪ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts