More

    ಆರೋಗ್ಯ ಭಾಗ್ಯ ಯೋಜನೆಗೆ ಯುನೈಟೆಡ್ ಆಸ್ಪತ್ರೆ ಆಯ್ಕೆ

    ಡಾ.ವಿಕ್ರಮ ಸಿದ್ದಾರೆಡ್ಡಿ ಮಾಹಿತಿ | ಪೊಲೀಸರು ಕುಟುಂಬದವರು ಚಿಕಿತ್ಸೆ ಪಡೆಯಲು ಡಿಪಿಜಿ ಸುತ್ತೋಲೆ

    ವಿಜಯವಾಣಿ ಸುದ್ದಿಜಾಲ ಕಲಬುರಗಿ
    ರಾಜ್ಯ ಸರ್ಕಾರದ ಆರೋಗ್ಯ ಭಾಗ್ಯ ಯೋಜನೆಯಡಿ ಆರೋಗ್ಯ ಸೇವೆ ನೀಡುತ್ತಿರುವ ಸಂಸ್ಥೆಗಳ ಪಟ್ಟಿಗೆ ಕಲ್ಯಾಣ ಕರ್ನಾಟಕದ ಪ್ರಮುಖ ಆರೋಗ್ಯ ಸೇವಾ ಕೇಂದ್ರವಾಗಿರುವ  ಇಲ್ಲಿನ ಯುನೈಟೆಡ್ ಆಸ್ಪತ್ರೆಯನ್ನು ಸೇರ್ಪಡೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ಸರ್ಕಾರಿ ಉದ್ಯೋಗಿಗಳಿಗೆ ತುರ್ತು ಚಿಕಿತ್ಸೆ ಪಡೆದುಕೊಳ್ಳಲು ಸಹಕಾರಿಯಾಗಲಿದೆ.
    ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು  ಈ ಆಸ್ಪತ್ರೆಯನ್ನು ಕೇಂದ್ರದ ಸಿಜಿಎಚ್‌ಎಸ್ ಯೋಜನೆಯಡಿ ಆರೋಗ್ಯ ಸೇವೆ ನೀಡಲು ಆಯ್ಕೆ ಮಾಡಿತ್ತು. ಈಗ ರಾಜ್ಯ ಸರ್ಕಾರವೂ ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಸೇವೆ ನೀಡಲು ಆಯ್ಕೆ ಮಾಡಿದೆ.
    ಯುನೈಟೆಡ್ ಆಸ್ಪತ್ರೆಯು ಆರೋಗ್ಯ ಭಾಗ್ಯ ಯೋಜನೆಗೆ ಆಯ್ಕೆಯಾಗಿದ ಬೆನ್ನಲ್ಲಿಯೇ  ರಾಜ್ಯ ಪೊಲೀಸ್ ಮಹಾನಿರ್ದೇಶಕರು ಆಸ್ಪತ್ರೆಯ ಅಧೀP್ಷÀಕರಿಗೆ ಹಾಗೂ ಜಿ¯್ಲÁ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ  ಹಾಗೂ ಅವರ ಕುಟುಂಬ ಸದಸ್ಯರು ಮತ್ತು ಅವಲಂಬಿತರು 1963ರ ಕರ್ನಾಟಕ ಸರ್ಕಾರಿ ನೌಕರರ (ವೈದ್ಯಕೀಯ ಮತ್ತು ಹಾಜರಾತಿ) ನಿಯಮಗಳ ಪ್ರಕಾರ ಯುನೈಟೆಡ್ ಆಸ್ಪತ್ರೆಯಲ್ಲಿ ಕೇಂದ್ರ ಸರ್ಕಾರದ ಆರೋಗ್ಯ ಯೋಜನೆ (ಸಿಜಿಎಚ್‌ಎಸ್) ನಿಗದಿಪಡಿಸಿದ ದರಗಳ ಪ್ರಕಾರ ಚಿಕಿತ್ಸೆ ಪಡೆಯಬಹುದು ಎಂದು ತಿಳಿಸಿz್ದÁರೆ.
    ಈ ಕುರಿತು ಪ್ರತಿಕ್ರಿಯಿಸಿದ ಯುನೈಟೆಡ್ ಆಸ್ಪತ್ರೆಯ ಅಧ್ಯP್ಷÀ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ. ವಿಕ್ರಮ ಸಿz್ದÁರೆಡ್ಡಿ, ಆರೋಗ್ಯ ಭಾಗ್ಯ ಯೋಜನೆಯಡಿಯಲ್ಲಿ ಸೇವೆ ನೀಡಲು ತಮ್ಮ ಆಸ್ಪತ್ರೆಯನ್ನು ಆಯ್ಕೆಯಾಗಿರುವುದು, ಆಸ್ಪತ್ರೆಯಲ್ಲಿ ನೀಡಲಾಗುತ್ತಿರುವ ಅತ್ಯುತ್ತಮ ಗುಣಮಟ್ಟದ ಹೈಟೆಕ್ ಆರೋಗ್ಯ ಸೇವೆಗಳನ್ನು ಸರ್ಕಾರವೇ ಗುರುತಿಸಿದೆ ಎಂದು ಸಂತಸ ವ್ಯಕ್ತಪಡಿಸಿz್ದÁರೆ.
    ಯುನೈಟೆಡï ಆಸ್ಪತ್ರೆಯು ವಿಶ್ವದರ್ಜೆಯ ಮೂಲಸೌಕರ್ಯ, ಅತ್ಯಾಧುನಿಕ ಯಂತ್ರೋಪಕರಣಗಳನ್ನು, ಪರಿಣಿತ ವೈದ್ಯರ ತಂಡ  ನುರಿತ ಶುಶ್ರೂಷಕರನ್ನು ಹಾಗೂ ಆಧುನಿಕ ತಂತ್ರe್ಞÁನಗಳನ್ನು ಹೊಂದಿರುವ ಅತ್ಯುನ್ನತ ಗುಣಮಟ್ಟದ ಆರೋಗ್ಯ ಸೇವೆ ಕೈಗೆಟುಕುವ ದರದಲ್ಲಿ ನೀಡುವುದಕ್ಕೆ ಹೆಸರುವಾಸಿಯಾಗಿದೆ. ಈಗ ಸರ್ಕಾರ ಅದನ್ನು ಗುರುತಿಸಿ ಆರೋಗ್ಯ ಭಾಗ್ಯ ಯೋಜನೆಯಡಿ ಸೇವೆ ನೀಡಲು ಅವಕಾಶ ಕೊಟ್ಟಿದೆ. ಅದಕ್ಕಾಗಿ ಸರ್ಕಾರಕ್ಕೆ  ಹಾಗೂ ಪೊಲೀಸ್ ಇಲಾಖೆಗೂ ಕೃತಜ್ಞತೆ ಸಲ್ಲಿಸುವೆ.
    ಜೀವದ ಹಂಗು ತೊರೆದು ಸಮಾಜಕ್ಕಾಗಿ ಹಗಲಿರುಳು ದುಡಿಯುವ ಪೊಲೀಸ್ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಅವರ ಕುಟುಂಬ ಸದಸ್ಯರು, ಅವಲಂಬಿತರಿಗೆ ತುರ್ತು ಹೊತ್ತಿನಲ್ಲಿ ನಮ್ಮ ಆಸ್ಪತ್ರೆಯಲ್ಲಿ ಸಿಗುವ ವಿಶ್ವಗುಣಮಟ್ಟದ ಆರೋಗ್ಯ ಸೇವೆಗಳನ್ನು ಸರ್ಕಾರದ ಆರೊಗ್ಯ ಭಾಗ್ಯ ಯೋಜನೆಯಡಿ ಪಡೆದುಕೊಳ್ಳಬೇಕು ಎಂದು ಡಾ.ಸಿದ್ದಾರಡ್ಡಿ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts