More

    ಆರೋಗ್ಯ ಸ್ಥಿತಿಗನುಸಾರ ಪ್ರತ್ಯೇಕಿಸಿ ನಿಗಾ ವಹಿಸಿ

    ಹಾವೇರಿ: ಸಾಂಸ್ಥಿಕ ಕ್ವಾರಂಟೈನ್​ನಲ್ಲಿರುವವರನ್ನು ಅವರ ಆರೋಗ್ಯ, ವಯೋಮಾನಕ್ಕನುಗುಣವಾಗಿ ಪ್ರತ್ಯೇಕವಾಗಿಸಿ ನಿಗಾವಹಿಸಲು ರಾಜ್ಯ ಸರ್ಕಾರದ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚಿಸಿದರು.

    ಕರೊನಾ ವೈರಸ್ ನಿಯಂತ್ರಣ ಕುರಿತು ನೋಡಲ್ ಅಧಿಕಾರಿಗಳೊಂದಿಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಹೊರ ರಾಜ್ಯ ಹಾಗೂ ಹೊರ ಜಿಲ್ಲೆಯಿಂದ ಬರುವವರ ಸಂಖ್ಯೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ತೀವ್ರ ನಿಗಾವಹಿಸಬೇಕು. ಆರೋಗ್ಯ ಇಲಾಖೆ ಹಾಗೂ ಗ್ರಾಪಂ ಮಟ್ಟದ ಅಧಿಕಾರಿಗಳು ಸಮನ್ವಯ ಹಾಗೂ ಚುರುಕಿನಿಂದ ಕಾರ್ಯನಿರ್ವಹಿಸಬೇಕು. ಕ್ವಾರಂಟೈನ್​ನಲ್ಲಿರುವ ಪ್ರತಿಯೊಬ್ಬರ ಹೆಲ್ತ್ ಪ್ರೊಪೈಲ್ ಚೆಕ್​ವಾಡಿ, 55ರಿಂದ 60 ವರ್ಷಕ್ಕಿಂತ ಹೆಚ್ಚು ವಯಸ್ಸಾದವರು, 10 ವರ್ಷದೊಳಗಿನ ಮಕ್ಕಳು, ಗರ್ಭಿಣಿಯರು, ಬಿಪಿ, ಶುಗರ್, ಹೃದಯ ಸಂಬಂಧಿ ಕಾಯಿಲೆಗಳು, ವಿವಿಧ ಶಸ್ತ್ರ ಚಿಕಿತ್ಸೆಗೆ ಒಳಗಾದವರನ್ನು ಕ್ವಾರಂಟೈನ್ ಕೇಂದ್ರದಲ್ಲಿ ಪ್ರತ್ಯೇಕಿಸಿ ಅವರ ಆರೋಗ್ಯ ತಪಾಸಣೆಗೆ ತೀವ್ರ ಕಾಳಜಿ ವಹಿಸಬೇಕು. ಆರೋಗ್ಯವಂತರೊಂದಿಗೆ ಅವರನ್ನು ಸೇರಿಸದೇ ಪ್ರತ್ಯೇಕಿಸಬೇಕು ಎಂದರು.

    ಡಿಎಚ್​ಒ, ಜಿಲ್ಲಾ ಶಸ್ತ್ರ ಚಿಕಿತ್ಸಕರು, ಸರ್ವಲೆನ್ಸ್ ಅಧಿಕಾರಿಗಳು ಹಾಗೂ ತಾಲೂಕು ಆರೋಗ್ಯಾಧಿಕಾರಿಗಳು ಪರಸ್ಪರ ಸಮನ್ವಯದಿಂದ ಮಾಹಿತಿ ವಿನಮಯ ಮಾಡಿಕೊಳ್ಳಬೇಕು. ಪ್ರತಿದಿನದ ಪ್ರತಿಕ್ಷಣದ ಮಾಹಿತಿಗಳನ್ನು ಅಪ್​ಡೇಟ್ ಮಾಡಿಕೊಳ್ಳಬೇಕು. ಕ್ವಾರಂಟೈನ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುವವರೊಂದಿಗೆ ಸಮನ್ವಯ ಹೊಂದಿ ಕ್ವಾರಂಟೈನ್​ಗೆ ಒಳಗಾದವರು ಅವಧಿ ಪೂರ್ಣಗೊಳಿಸಿ ಬಿಡುಗಡೆ ಹೊಂದಿದವರು ಹೋಮ್ ಕ್ವಾರಂಟೈನ್​ನಲ್ಲಿ ಇರುವವರ ದಿನದ ಮಾಹಿತಿ ಪಡೆಯಬೇಕು ಎಂದರು.

    ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಫಾಮರ್ಸಿಗಳ ಚಟುವಟಿಕೆಗಳ ದೈನಂದಿನ ಮಾಹಿತಿ ಪಡೆಯಬೇಕು. ಆರೋಗ್ಯ ಇಲಾಖೆ ಹಾಗೂ ಜಿಲ್ಲಾ ಫಾರ್ವಸಿಸ್ಟ್, ಕೆಮ್ಮು, ಜ್ವರ, ನೆಗಡಿಗೆ ನಿರಂತರವಾಗಿ ಔಷಧ ಪಡೆದಿರುವವರ ಮಾಹಿತಿ ಪಡೆದು ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದರು.

    ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಎಸ್​ಪಿ ಕೆ.ಜಿ. ದೇವರಾಜ್, ಎಎಸ್​ಪಿ ಮಲ್ಲಿಕಾರ್ಜುನ ಬಾಲದಂಡಿ, ಎಸಿಗಳಾದ ಡಾ. ದಿಲೀಪ್ ಶಶಿ, ಅನ್ನಪೂರ್ಣ ಮುದಕಮ್ಮನವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts