More

    ಆಯುಷ್ ಇಲಾಖೆಯಿಂದ ಚಿಂಚಾ ಪಾನಿಯಾ ಪರಿಚಯ ಕಾರ್ಯಕ್ರಮ/ಉತ್ತಮ ಆರೋಗ್ಯಕ್ಕೆ ಪಾನಿಯಾ ಸಹಕಾರಿ/ಜಿಲ್ಲಾಧಿಕಾರಿ ಅಕ್ರಂ ಪಾಷಾ

    ವಿಜಯವಾಣಿ ಸುದ್ದಿಜಾಲ ಕೋಲಾರ
    ಜಿಲ್ಲಾ ಆಯುಷ್ ಕಛೇರಿ ಕೋಲಾರದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯುಷ್ ಇಲಾಖೆ ಹೊರ ತಂದಿರುವ ಚಿಂಚಾ ಪಾನೀಯ ಪರಿಚಯಿಸುವ ಕಾರ್ಯಕ್ರಮವನ್ನು ಸೋಮವಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಉದ್ಘಾಟಿಸಿದರು.

    ಜಿಲ್ಲಾಧಿಕಾರಿಗಳು ಮಾತನಾಡಿ, ಚಿಂಚಾ ಪಾನಕದಲ್ಲಿ ಹುಣಸೆ ಹಣ್ಣು, ಬೆಲ್ಲದ ಪುಡಿ, ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ, ಸೈಂದವ ಲವಣ ಬಳಸುತ್ತಿದ್ದು, ಆರೋಗ್ಯಕ್ಕೆ ಹೆಚ್ಚು ಅನುಕೂಲಕರವಾಗಿದೆ ಎಂದು ಅಭಿಪ್ರಾಯಪಟ್ಟರು.

    ಜಿಲ್ಲಾ ಆಯುಷ್ ಅಧಿಕಾರಿಗಳಾದ ಶ್ರೀ ಡಾ ರಾಘವೇಂದ್ರ ಶೆಟ್ಟಿಗಾರ್, ಚಿಂಚಾ ಪಾನಕ ತಯಾರಿಕೆ ವಿಧಾನದ ಕುರಿತು ವಿವರಿಸಿ ಹುಣಸೆ ಹಣ್ಣನ್ನು ಅಗತ್ಯ ಪ್ರಮಾಣದ ನೀರಿನಲ್ಲಿ ಇಡೀ ರಾತ್ರಿ ನೆನಸಿಟ್ಟು, ಮರುದಿನ ಬೆಳಗ್ಗೆ ಅದನ್ನು ಶುದ್ದ ಕೈಗಳಿಂದ ಹಿಸುಕಿ ಶೋಧಿಸಿಕೊಳ್ಳಬೇಕು, ಗಾಢವಾದ ಹುಣಸೆ ಮಿಶ್ರಣವನ್ನು ಬಾಟಲ್‌ಗಳಲ್ಲಿ ತುಂಬಿಟ್ಟುಕೊAಡು ಪಾನಕ ತಯಾರಿಸುವಾಗ ಅಗತ್ಯವಾದಷ್ಟು ಬಳಸಿಕೊಳ್ಳಬಹುದು ಎಂದರು.

    ಅಗತ್ಯ ಪ್ರಮಾಣದಲ್ಲಿ ನೀರನ್ನು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಹುಣಸೆ ಮಿಶ್ರಣ ಹಾಕಿ ನಿರ್ಧಿಷ್ಟ ಪ್ರಮಾಣದ ಬೆಲ್ಲದಪುಡಿ ಹಾಕಿ ಕರಗಿದ ನಂತರ ಕೊನೆಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಜೀರಿಗೆ ಪುಡಿ, ಕಾಳುಮೆಣಸಿನ ಪುಡಿ, ಸೈಂದವ ಲವಣ ಸೇರಿಸಬೇಕು ಎಂದು ತಿಳಿಸಿದರು.

    ಈ ದ್ರಾವಣವನ್ನು ದಿನಕ್ಕೆ ೫೦ ರಿಂದ ೧೦೦ ಮಿಲಿ ಸೇವಿಸುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ, ಮಲಬದ್ದತೆ ನಿವಾರಣೆ, ಶರೀರದ ದಾಹ ಹಾಗೂ ಬಾಯಾರಿಕೆ ನೀಗಿಸುವುದು ಎಂದು ವಿವರಿಸಿದರು.

    ಈ ಸಂದರ್ಭದಲ್ಲಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾ ಅಧಿಕಾರಿ ಪದ್ಮ ಬಸವಂvಪ್ಪ, ಅಪರ ಜಿಲ್ಲಾಧಿಕಾರಿ ಡಾ.ಶಂಕರ್ ವಣಿಕ್ಯಾಳ್‌ಮ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ. ಸುರೇಶಬಾಬು, ಜಿಲ್ಲಾ ಕಾರ್ಯದರ್ಶಿ ಅಜಯ್‌ಕುಮಾರ್, ರಾಜ್ಯಪರಿಷತ್ ಸದಸ್ಯ ಗೌತಮ್ ಸೇರಿದಂತೆ ಸಂಘದ ಪದಾಧಿಕಾರಿಗಳು ಹಾಜರಿದ್ದು, ಪಾನಿಯಾ ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿ, ಉತ್ತಮ ಆರೋಗ್ಯಕ್ಕೆ ಹಾನಿಕಾರಕ ಪಾನಿಯಗಳನ್ನು ಸೇವಿಸಿ ತೊಂದರೆಗೊಳಗಾಗುವ ಬದಲಿಗೆ ಮನೆಯಲ್ಲೇ ಇಂತಹ ಪಾನೀಯಾ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳೋಣ ಎಂದರು.

    ಕಾರ್ಯಕ್ರಮದಲ್ಲಿ ೫೦೦ಕ್ಕೂ ಅಧಿಕ ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಕಛೇರಿ, ಎಲ್ಲಾ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಚುನಾವಣಾ ಅಧಿಕಾರಿಗಳು ಹಾಗೂ ಸಾರ್ವಜನಿಕರಿಗೆ ಚಿಂಚಾ ಪಾನೀಯ ಹಾಗೂ ಕರಪತ್ರವನ್ನು ವಿತರಿಸಲಾಯಿತು.

    ಕಾರ್ಯಕ್ರಮದಲ್ಲಿ ಆಯುಷ್ ಇಲಾಖೆಯ ಡಾ.ಕಮಲ, ಡಾ.ಉಮಾ, ಡಾ. ನಾಗಪದ್ಮ, ಡಾ.ಗೀತಾ, ಡಾ.ರೇಣುಕಾ, ಡಾ.ಬಸವರಾಜು, ಸಹಾಯಕ ಆಡಳಿತಾಧಿಕಾರಿ ನಾಗಲಕ್ಷಿö್ಮ, ವಿಶ್ವನಾಥ್ ಸೇರಿದಂತೆ ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

    ಚಿತ್ರ ೨೨ ಕೆ.ಎಲ್.ಆರ್. ೦೮ : ಕೋಲಾರ ಜಿಲ್ಲಾ ಆಯುಷ್ ಕಛೇರಿ ಕೋಲಾರದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಆಯುಷ್ ಇಲಾಖೆ ಹೊರ ತಂದಿರುವ ಚಿಂಚಾ ಪಾನೀಯ ಪರಿಚಯಿಸುವ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಅಕ್ರಂ ಪಾಷ ಉದ್ಘಾಟಿಸಿದರು.

    ಆಯುಷ್ ಇಲಾಖೆಯಿಂದ ಚಿಂಚಾ ಪಾನಿಯಾ ಪರಿಚಯ ಕಾರ್ಯಕ್ರಮ/ಉತ್ತಮ ಆರೋಗ್ಯಕ್ಕೆ ಪಾನಿಯಾ ಸಹಕಾರಿ/ಜಿಲ್ಲಾಧಿಕಾರಿ ಅಕ್ರಂ ಪಾಷಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts