More

    ಆಮ್ಲಜನಕಕ್ಕೆ ಉದ್ಯಮಿಗಳಿಗೆ ಮೊರೆ ; ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಸಭೆ

    ತುಮಕೂರು : ಆಮ್ಲಜನಕ ಕೊರತೆಯಾಗದಂತೆ ಪೂರೈಕೆ ವ್ಯವಸ್ಥೆ ಮಾಡುವ ನಿಟ್ಟಿನಲ್ಲಿ ಜಿಲ್ಲೆಯ ಕ್ವಾರಿ ಕ್ರಷರ್, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೋದ್ಯಮಿಗಳ ಧನ ಸಹಾಯದ ನೆರವು ಪಡೆದು ಅಗತ್ಯವಿರುವ ಆಮ್ಲಜನಕ ಸಾಂದ್ರಕ (ಕಾನ್ಸಂಟ್ರೇಟರ್) ಖರೀದಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ಸೂಚಿಸಿದರು.

    ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲೆಯ ಸ್ಟೋನ್ ಕ್ರಷರ್ ಮಾಲೀಕರು, ಕ್ವಾರಿ ಮಾಲೀಕರು, ವಸಂತನರಸಾಪುರ ಕೈಗಾರಿಕೋದ್ಯಮಿಗಳ ಸಂ, ಗ್ರಾನೈಟ್ ಅಸೋಸಿಯೇಷನ್, ಜಿಲ್ಲಾ ಇಂಡ್‌ಸ್ಟ್ರೀಸ್ ಅಸೋಸಿಯೇಷನ್ ಸೇರಿ ಜಿಲ್ಲೆಯ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೋದ್ಯಮಿಗಳೊಂದಿಗೆ ಸಭೆ ನಡೆಸಿದರು.

    ಸೋಂಕಿತರಿಗೆ ಶೇ.80 ಅಮ್ಲಜನಕದ ಕೊರತೆ ಕಂಡುಬರುತ್ತಿದೆ. ಆಮ್ಲಜನಕ ಅನಿವಾರ್ಯವಿರುವ ಕಾರಣ ಆಮ್ಲಜನಕದ ಸಾಂದ್ರಕಗಳ ಖರೀದಿಗೆ ತಾವೆಲ್ಲರೂ ನೆರವು ನೀಡಬೇಕು, ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಉದಾರ ಮನೋಭಾವದಿಂದ ದಾನದ ರೂಪವಾಗಿ ಹಣದ ಸಹಾಯಹಸ್ತ ಚಾಚಬೇಕು ಎಂದರು.

    ಆಮ್ಲಜನಕದ ಸಾಂದ್ರಕಕ್ಕೆ 75 ಸಾವಿರ ರೂ. ವೆಚ್ಚ ತಗುಲುವುದು. ಸುಮಾರು 300 ರಿಂದ 400 ಸಾಂದ್ರಕಗಳ ಖರೀದಿಗೆ ಚಿಂತನೆ ನಡೆಸಲಾಗಿದೆ. ಇದಕ್ಕೆ ಪೂರಕವಾಗಿ ಎಲ್ಲ ಮಾಲೀಕರು, ಕೈಗಾರಿಕೋದ್ಯಮಿಗಳು ನೀಡುತ್ತಿರುವ ನೆರವಿನಿಂದಾಗಿ ಸಾವುಗಳ ಪ್ರಮಾಣ ತಗ್ಗಿಸಬಹುದಾಗಿದೆ. ಸುವಾರು 2 ಕೋಟಿ ರೂ. ಹಣ ದಾನದ ರೂಪವಾಗಿ ಬರುವ ನೀರಿಕ್ಷೆ ಇದೆ. ಜಿಲ್ಲೆಗೆ 24 ಕೆಎಲ್ ಆಮ್ಲಜನಕ ಅವಶ್ಯಕತೆ ಇದೆ. ಈಗ ಕೇವಲ 16 ರಿಂದ 17 ಕೆಎಲ್ ಲಭ್ಯವಾಗುತ್ತಿದೆ, ಉಳಿದ 67 ಕೆಎಲ್ ಆಮ್ಲಜನಕ ಪೂರೈಕೆಯಾದರೆ ಜಿಲ್ಲೆಯಲ್ಲಿ 300 ಹಾಸಿಗೆಗಳನ್ನು ಆಮ್ಲಜನಕದ ಜತೆಗೆ ನಿರ್ವಹಣೆ ಮಾಡಬಹುದು ಎಂದರು.

    ಜನತಾ ಕರ್ಫ್ಯೂಗೆ ಮುಂಚಿತವಾಗಿಯೇ ಸೋಂಕಿತರ ಸಂಖ್ಯೆ ಹೆಚ್ಚಿತ್ತು, ಸೋಂಕಿತರು ಹೋಂ ಕ್ವಾರಂಟೈನ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಲಿಲ್ಲ. ಅವರು, ಸಾರ್ವಜನಿಕ ಸ್ಥಳಗಳಲ್ಲಿ ಸಂಚರಿಸುತ್ತಿದ್ದ ಪರಿಣಾಮ ಪಾಸಿಟಿವ್ ಸಂಖ್ಯೆ ಹೆಚ್ಚಾಗುತ್ತಿದೆ. ಹಾಗಾಗಿ, ಸೋಂಕಿತರನ್ನು ಕೋವಿಡ್ ಕೇರ್‌ಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

    ಜಿಲ್ಲೆಯಲ್ಲಿ ಯಾವುದೇ ರೀತಿಯ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿಲ್ಲ, ವಾರ್‌ರೂಂ ಮೂಲಕ ಸೋಂಕಿತರಿಗೆ ಸಮಸ್ಯೆಯಾಗದಂತೆ ಹಾಸಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ತಾಲೂಕುಗಳಿಂದ ಬರುವ ಸೋಂಕಿತರಿಗೆ ಗಂಭೀರತೆ ಆಧಾರದ ಮೇಲೆ ಹಾಸಿಗೆ ವ್ಯವಸ್ಥೆ ವಾಡಲಾಗುವುದು. ಖಾಸಗಿ ಆಸ್ಪತ್ರೆಗಳ ಮೇಲೆಯೂ ನಿಗಾ ವಹಿಸಲಾಗುತ್ತಿದೆ ಎಂದರು. ಸಂಸದ ಜಿ.ಎಸ್.ಬಸವರಾಜ್, ವಾಜಿ ಸಚಿವ ಸೊಗಡು ಶಿವಣ್ಣ, ಟೂಡಾ ಅಧ್ಯಕ್ಷ ಬಾವಿಕಟ್ಟೆ ನಾಗಣ್ಣ, ತುಮಕೂರು ಉಪವಿಭಾಗಾಧಿಕಾರಿ ಅಜಯ್ ಮತ್ತಿತರರು ಇದ್ದರು.

    ಬೇಕಿದೆ ನೆರವಿನ ಹಸ್ತ : ಕೈಗಾರಿಕೋದ್ಯಮಿಗಳು ಹೆಚ್ಚು ನೆರವು ನೀಡಿದಷ್ಟೂ ಹೆಚ್ಚು ಸೋಂಕಿತರಿಗೆ ನೆರವಾಗಲಿದೆ. ಹೋಂ ಐಸೋಲೇಷನ್‌ನಲ್ಲಿರುವವರಿಗೂ ಆಮ್ಲಜನಕದ ಅವಶ್ಯಕತೆಯಿದೆ. ಅಲ್ಲದೆ, ಕೋವಿಡ್ ನೆಗೆಟಿವ್ ಇದ್ದು ಶ್ವಾಸಕೋಶದ ಸಮಸ್ಯೆಗಳಿರುವವರಿಗೆ ಆಮ್ಲಜನಕದ ಅವಶ್ಯಕತೆಯಿದೆ. ಹಾಗಾಗಿ ಹೆಚ್ಚು ನೆರವಿನ ಹಸ್ತಬೇಕಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮನವಿ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts