More

    ಆತ್ಮಹತ್ಯೆ ಮಾಡಿಕೊಂಡ ಓಂಕಾರ ಕುಟುಂಬಕ್ಕೆ ಪರಿಹಾರ, ಸರ್ಕಾರಿ ನೌಕರಿ ಕೊಡಿ

    ಬೀದರ್: ಪರಿಶಿಷ್ಟ ಪಂಗಡ (ಎಸ್ಟಿ) ಗೊಂಡ ಸಿಂಧುತ್ವ ಪ್ರಮಾಣಪತ್ರ ದೊರೆಯದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಸಾರಿಗೆ ನೌಕರ ಓಂಕಾರ ಶೇರಿಕಾರ ಕುಟುಂಬಕ್ಕೆ ಪರಿಹಾರ ಹಾಗೂ ಸರ್ಕಾರಿ ನೌಕರಿ ಕೊಡಬೇಕೆಂದು ಆಗ್ರಹಿಸಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘ ನಗರದಲ್ಲಿ ಸೋಮವಾರ ಧರಣಿ ನಡೆಸಿತು.

    ಜಿಲ್ಲಾ ಉಸ್ತುವಾರಿ ಕಚೇರಿ ಎದುರು ಹೋರಾಟ ಮಾಡಿದ ಪ್ರಮುಖರು, ಭಾಲ್ಕಿ ಬಸ್ ಡಿಪೋದಲ್ಲಿ ಚಾಲಕ ಕಮ್ ನಿರ್ವಾಹಕರಾಗಿದ್ದ ಹುಮನಾಬಾದ್ ತಾಲೂಕಿನ ಕುಮಾರಚಿಂಚೋಳಿ ನಿವಾಸಿ ಓಂಕಾರಗೆ ಸಿಂಧುತ್ವ ಪ್ರಮಾಣಪತ್ರ ಸಲ್ಲಿಸುವಂತೆ ಅಧಿಕಾರಿಗಳು ಪದೇಪದೆ ಕಿರುಕುಳ ನೀಡುತ್ತಿದ್ದರು. ಸಿಂಧುತ್ವಕ್ಕಾಗಿ ಅರ್ಜಿ ಸಲ್ಲಿಸಿದರೂ ಒಂದು ವರ್ಷದಿಂದ ಸಂಬಂಧಿತರು ಸತಾಯಿಸುತ್ತಿದ್ದರು. ಇದರಿಂದ ಮನನೊಂದು ನೇಣು ಬಿಗಿದುಕೊಂಡಿದ್ದು, ಈ ಸಾವಿಗೆ ಸಕರ್ಾರವೇ ಹೊಣೆ ಎಂದು ದೂರಿದರು.

    ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ವರದಿ ಕಡ್ಡಾಯಗೊಳಿಸಿದ ಆದೇಶ ರದ್ದುಗೊಳಿಸಿ, ಮೊದಲಿನಂತೆ ಸರಳವಾಗಿ ಸಿಂಧುತ್ವ ಪ್ರಮಾಣಪತ್ರ ನೀಡುವಂತೆ ವರ್ಷದಿಂದ ಹೋರಾಟ ಮಾಡಲಾಗುತ್ತಿದೆ. ಆದರೆ ಸಕರ್ಾರ ನಿರ್ಲಕ್ಷ್ಯ ವಹಿಸಿದ ಕಾರಣ ಓಂಕಾರ ಸಾವಿಗೆ ಶರಣಾಗಬೇಕಾಯಿತು ಎಂದು ಆರೋಪಿಸಿದರು.

    ಮೃತರ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ಹಾಗೂ ಅವರ ನಾಲ್ವರು ಮಕ್ಕಳ ಪೈಕಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು. ಸಿಂಧುತ್ವ ಪಡೆಯಲು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ವರದಿ ಕಡ್ಡಾಯದ ಆದೇಶ ರದ್ದುಗೊಳಿಸಿ ಮೊದಲಿನಂತೆ ಸರಳವಾಗಿ ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

    ಸಂಘದ ಜಿಲ್ಲಾಧ್ಯಕ್ಷ ಸಂತೋಷ ಜೋಳದಾಪಕೆ, ಜಿಪಂ ಮಾಜಿ ಸದಸ್ಯ ಅಮೃತರಾವ ಚಿಮಕೋಡೆ, ಪ್ರಮುಖರಾದ ಬಸವರಾಜ ಮಾಳಗೆ, ರಮೇಶ ಡಾಕುಳಗಿ, ಮಾಳಪ್ಪ ಅಡಸಾರೆ, ಬಾಬುರಾವ ಸಂಗೋಳಗಿ, ಸುನೀಲ ಭಾವಿಕಟ್ಟಿ, ತುಕಾರಾಮ ಕರಾಟೆ, ಲೋಕೇಶ ಮಜರ್ಾಪುರ, ಸುನೀಲ ಚಿಲ್ಲಗರ್ಿ, ರವಿ ಸಿರ್ಸಿ, ಮಲ್ಲಿಕಾರ್ಜುನ ತಾಳಮಡಗಿ, ಗೋವಿಂದರಾವ ಗೋರಚಿಂಚೋಳಿ, ಬಕ್ಕಪ್ಪ ನಾಗೂರೆ, ಸಚಿನ್ ಮಲ್ಕಾಪುರೆ, ಸುನೀಲ ಖಾಶೆಂಪುರ, ಚಂದ್ರಕಾಂತ ಬೇಮಳಖೇಡ, ನಂದಕುಮಾರ ಜಂಬಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts