More

    ಆಟದ ಮೈದಾನದಲ್ಲಿ ನಾಡಕಚೇರಿ ಕಟ್ಟಡ ನಿರ್ಮಾಣಕ್ಕೆ ವಿರೋಧ

    ಆಲ್ದೂರು: ಪಟ್ಟಣದ ಸರ್ಕಾರಿ ಶಾಲೆ ಆಟದ ಮೈದಾನದ ಜಾಗದಲ್ಲಿ ನಾಡಕಚೇರಿ ಕಟ್ಟಡ ನಿರ್ಮಾಣಕ್ಕೆ ಕೈಗೊಂಡಿರುವ ನಿರ್ಣಯ ವಿರೋಧಿಸಿ ಸೋಮವಾರ ಗ್ರಾಪಂನಿಂದ ಸಾರ್ವಜನಿಕರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಸಭೆ ನಡೆಸಿದರು.
    ಗ್ರಾಮ ಪಂಚಾಯತಿ ಸದಸ್ಯ ನವರಾಜ್ ಮಾತನಾಡಿ, ಪಟ್ಟಣದ ವಾಸಿ ನಿವೃತ್ತ ಶಿಕ್ಷಕ ದಿವಂಗತ ಸಿದ್ದಲಿಂಗಯ್ಯ ಅವರು ಸುಮಾರು ಒಂದೂವರೆ ಎಕರೆ ಜಾಗವನ್ನು ಪ್ರಾಥಮಿಕ ಶಾಲೆಗೆ ದಾನವಾಗಿ ನೀಡಿದ್ದರು. ಈ ಜಾಗದಲ್ಲಿ 1937ರಲ್ಲಿ ಸರ್ಕಾರಿ ಶಾಲೆ ಕಟ್ಟಡ ನಿರ್ಮಿಸಿ ಉಳಿದ ಜಾಗವನ್ನು ಆಟದ ಮೈದಾನವಾಗಿ ಪರಿವರ್ತಿಸಲಾಗಿತ್ತು. ಆದರೆ ಈ ಜಾಗವನ್ನು ಸರ್ಕಾರಿ ಶಾಲೆ ಯವರು ದಾಖಲೆ ಮಾಡಿಕೊಳ್ಳಲು ವಿಲವಾಗಿದ್ದರಿಂದ ಜಾಗ ನಮ್ಮ ಕೈತಪ್ಪಿದೆ. ಶಾಲಾ ಮೈದಾನಕ್ಕೆ ತೊಂದರೆಯಾದರೆ ಈ ವಿಚಾರವನ್ನು ಶಾಲಾ ಮಕ್ಕಳ ಜತೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಲಾಗುವುದು ಎಂದರು.
    ಗ್ರಾಪಂ ಅಧ್ಯಕ್ಷೆ ಜಯಶೀಲಾ ಮಾತನಾಡಿ, ಈ ಹಿಂದೆ ದಾನಿಗಳ ನೆರವಿನಿಂದ ನಿರ್ಮಿಸಿದ ಕಟ್ಟಡವನ್ನು ನಾಡಕಚೇರಿಗೆ ಕಾರ್ಯ ನಿರ್ವಹಿಸಲು ಬಿಟ್ಟುಕೊಡಲಾಗಿತ್ತು. ಆದರೆ ಕಚೇರಿ ಇಲಾಖೆ ಪಕ್ಕದಲ್ಲೇ ಇರುವ ಶಾಲೆಗೆ ಸಂಭಂದಪಟ್ಟ ಜಾಗವನ್ನು ಗ್ರಾಪಂ ಗಮನಕ್ಕೂ ಬಾರದಂತೆ ಕಂದಾಯ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ಹೆಸರಿಗೆ ದಾಖಲೆ ಮಾಡಿಕೊಂಡಿರುವುದು ತಪ್ಪು ಎಂದು ಆಕ್ಷೇಪಿಸಿದರು.
    ಪಟ್ಟಣದ ವರ್ತಕರ ಸಂಘದ ಸದಸ್ಯರಾದ ಬಿ.ಎಸ್.ರಾಜೀವ್, ರವಿಕುಮಾರ್ ಮಾತನಾಡಿ, ಪಟ್ಟಣದಲ್ಲಿ ಇರುವುದು ಒಂದೇ ಮೈದಾನ. ಆ ಜಾಗವನ್ನು ಕಂದಾಯ ಇಲಾಖೆ ಹೆಸರಿಗೆ ದಾಖಲೆ ಮಾಡಿಕೊಂಡಿರುವುದು ತಪ್ಪು. ನಾಡ ಕಚೇರಿಗೆ ಬೇರೆ ಜಾಗ ನೀಡಿ ಶಾಲಾ ಮೈದಾನ ಉಳಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
    ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷ ಡಿ.ಬಿ.ಅಶೋಕ್, ದಲಿತ ಸಂಘರ್ಷ ಸಮಿತಿ ಗೌರವ ಅಧ್ಯಕ್ಷ ಹೊನ್ನಪ್ಪ, ಎಸ್‌ಡಿಎಂಸಿ ಅಧ್ಯಕ್ಷ ಇಬ್ರಾಹಿಂ, ಪರಮೇಶ್, ಗ್ರಾಪಂ ಸದಸ್ಯರಾದ ಲಕ್ಷ್ಮಣ್, ಗಿರೀಶ್, ಲಿಯಾಕತ್ ಅಲಿ, ಶ್ರೀದೇವಿ ಕುಮಾರಸ್ವಾಮಿ, ಮಮತಾ, ಬಾಬರ್ ಪಾಷ, ಗೋಪಾಲ್, ಸರೋಜಮ್ಮ, ಗೆಳೆಯರ ಬಳಗ ಆಟೋ ಸಂಘದ ವೈಲಾ ರವಿ, ಕಸಾಪ ಹೋಬಳಿ ಅಧ್ಯಕ್ಷ ನೂರ್ ಮಹಮದ್, ಶಾಲೆ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts