More

    ಆಕ್ಸಿಜನ್ ಸಿಗದೆ ಸೋಂಕಿತನ ನರಳಾಟ

    ಗದಗ: ಕರೊನಾ ಸೋಂಕಿತ ತಮ್ಮ ಸೋದರ ಉಸಿರಾಟದ ತೊಂದರೆಯಿಂದ ನರಳುತ್ತಿದ್ದರೂ ಇಲ್ಲಿನ ಜಿಮ್್ಸ ಆಸ್ಪತ್ರೆ ವೈದ್ಯರು ಆಕ್ಸಿಜನ್ ವ್ಯವಸ್ಥೆ ಮಾಡದೆ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕರೊನಾ ಸೋಂಕಿತ ಮಹಿಳೆಯೊಬ್ಬರು ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ ಮಾಡಿ ಮಾಧ್ಯಮಗಳ ಪ್ರತಿನಿಧಿಗಳಿಗೆ ರವಾನಿಸಿದ್ದಾರೆ.

    ಸೋಂಕಿಗೆ ಒಳಗಾಗಿರುವ ನರಗುಂದ ಪಟ್ಟಣದ ಗಾಡಿ ಓಣಿಯ ನಿವಾಸಿ 38 ವರ್ಷದ ಪುರುಷ ಜೂ. 30ರಂದು ಜಿಮ್್ಸ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವರು ಹುಬ್ಬಳ್ಳಿಯ ಹೊಸೂರು ಡಿಪೋದಲ್ಲಿ ಚಾಲಕ ಕಂ ನಿರ್ವಾಹಕರಾಗಿ ಕಾರ್ಯ ನಿರ್ವಹಿಸುತ್ತಾರೆ. ಕಳೆದ ಮೂರು ದಿನಗಳಿಂದ ಇವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡರೂ ವೈದ್ಯರು ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ ಎಂದು ಇವರ ಸಹೋದರಿ ವಿಡಿಯೋದಲ್ಲಿ ಆಪಾದಿಸಿದ್ದಾರೆ.

    ‘ನನ್ನ ಸಹೋದರ ಸರ್ಕಾರಿ ನೌಕರನಾಗಿದ್ದು, ಆತನ ಜೀವ ಇದೀಗ ಅಪಾಯಕ್ಕೆ ಸಿಲುಕಿದೆ ಎಂಬ ಆತಂಕ ಶುರುವಾಗಿದೆ. ಆಕ್ಸಿಜನ್ ಅಳವಡಿಸಿ ಉಸಿರಾಟದ ತೊಂದರೆ ನೀಗಿಸಿ ಎಂದು ಬೇಡಿಕೊಂಡರೂ ವೈದ್ಯರು ನಿರ್ಲಕ್ಷ್ಯ ತೋರಿದ್ದಾರೆ. ಸಹೋದರನಿಗೆ ಪತ್ನಿ, ಮೂವರು ಮಕ್ಕಳಿದ್ದಾರೆ. ಸರ್ಕಾರಿ ನೌಕರಿ ಮಾಡಿ ಆತನಿಗೆ ಸೋಂಕು ತಗುಲಿದೆ. ಹೀಗಿದ್ದರೂ ಅವರ ಆರೋಗ್ಯದ ಕಡೆಗೆ ಯಾರೂ ಕಾಳಜಿ ತೋರಿಸುತ್ತಿಲ್ಲ. ದಯಮಾಡಿ ಕೂಡಲೇ ಅವರಿಗೆ ಆಕ್ಸಿಜನ್ ಅಳವಡಿಸಿ, ಆರೋಗ್ಯ ಕಾಪಾಡಿ’ ಎಂದು ಇವರು ವಿಡಿಯೋದಲ್ಲಿ ಗೋಳು ತೋಡಿಕೊಂಡಿದ್ದಾರೆ. ಅಂಗನವಾಡಿ ಕಾರ್ಯಕರ್ತೆಯಾಗಿರುವ ಈಕೆಗೂ ಕರೊನಾ ಸೋಂಕು ತಗುಲಿದ್ದು, ಸೋದರನ ಜತೆಯಲ್ಲಿಯೇ ಜಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಮಹಿಳೆ ಆರೋಪ ಸುಳ್ಳು: ಕರೊನಾ ಸೋಂಕಿತನಿಗೆ ಆಕ್ಸಿಜನ್ ವ್ಯವಸ್ಥೆ ಮಾಡಲಾಗಿಲ್ಲ ಎಂದು ಮಾಡಿರುವ ಆರೋಪ ಸುಳ್ಳಾಗಿದೆ. ಆಸ್ಪತ್ರೆಯಲ್ಲಿ ಸೋಂಕಿತರ ಉಪಚಾರಕ್ಕೆ ಯಾವುದೇ ತೊಂದರೆಯೂ ಇಲ್ಲ. ಜಿಮ್್ಸ ಆಸ್ಪತ್ರೆಯಲ್ಲಿರುವ ಎಲ್ಲ 28 ವೆಂಟಿಲೇಟರ್​ಗಳು ಖಾಲಿ ಇವೆ. ಅಗತ್ಯವಿದ್ದವರಿಗೆ ಮಾತ್ರ ವೆಂಟಿಲೇಟರ್ ಅಳವಡಿಸಲಾಗುತ್ತದೆ ಎಂದು ಜಿಮ್್ಸ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ಹೇಳಿದ್ದಾರೆ. ಈ ಮಹಿಳೆ ಪ್ರಚಾರಕ್ಕಾಗಿ ವಿಡಿಯೋ ಮಾಡಿದ್ದಾರೆ. ರೋಗಿಗಳಿಗೆ ಆಕ್ಸಿಜನ್ ಆಳವಡಿಸುವ ಕುರಿತು ವೈದ್ಯರು ನಿರ್ಧರಿಸುತ್ತಾರೆ. ಯಾರೋ ಹೇಳಿದ್ದನ್ನು ಆಕ್ಸಿಜನ್ ಆಳವಡಿಸಲಾಗುವುದಿಲ್ಲ. ಸದ್ಯಕ್ಕೆ ಜಿಮ್ಸ್​ನಲ್ಲಿ ಯಾವ ಕೊರತೆಗಳೂ ಇಲ್ಲ ಎಂದು ಡಾ. ಭೂಸರೆಡ್ಡಿ ತಿಳಿಸಿದ್ದಾರೆ.

    ತಾಯಿಗೆ ಪಾಸಿಟಿವ್, ಮಗುವಿಗೆ ನೆಗೆಟಿವ್

    ಗದಗ: ಲಕ್ಷ್ಮೇಶ್ವರ ತಾಲೂಕಿನ ಗೊಜನೂರು ಗ್ರಾಮದ ಸೋಂಕಿತ ಮಹಿಳೆ ಜನ್ಮ ನೀಡಿದ್ದ ಹೆಣ್ಣು ಮಗುವಿನ ವೈದ್ಯಕೀಯ ವರದಿಯಲ್ಲಿ ಕರೊನಾ ವೈರಸ್ ನೆಗೆಟಿವ್ ಬಂದಿದೆ. ಕಳೆದ ಗುರುವಾರ ನಗರದ ಹೆರಿಗೆ ಆಸ್ಪತ್ರೆಗೆ ಗರ್ಭಿಣಿ ತಪಾಸಣೆಗೆ ಆಗಮಿಸಿದ್ದ ಸಂದರ್ಭದಲ್ಲಿ ಕೆಮ್ಮು, ಜ್ವರದ ಲಕ್ಷಣಗಳು ಕಂಡು ಬಂದ ನಂತರ ಅವರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಕೋವಿಡ್ -19 ಪರೀಕ್ಷೆಗೆ ಒಳಪಡಿಸಲಾಯಿತು. ಶುಕ್ರವಾರ ಮಹಿಳೆಗೆ ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಶನಿವಾರ ಮಹಿಳೆಗೆ ಹೆರಿಗೆಯಾಯಿತು. ಆದರೆ, ತಾಯಿಗೆ ಕರೊನಾ ಸೋಂಕು ಇರುವುದರಿಂದ ನವಜಾತ ಶಿಶುವನ್ನು ಕೋವಿಡ್-19 ಎನ್​ಐಸಿಯು ಘಟಕದಲ್ಲಿರಿಸಿ ಉಪಚಾರ ಮಾಡಲಾಗಿತ್ತು. ಅದೇ ದಿನ ಮಗುವಿನ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಮಂಗಳವಾರ ಮಗುವಿನ ವೈದ್ಯಕೀಯ ವರದಿ ಬಂದಿದ್ದು, ಕರೊನಾ ನೆಗೆಟಿವ್ ಇದೆ ಎಂದು ಜಿಮ್ಸ್ ನಿರ್ದೇಶಕ ಡಾ. ಪಿ.ಎಸ್. ಭೂಸರಡ್ಡಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts