More

    ಅರಣ್ಯ ಸಂಶೋಧನೆಗೆ ಅತ್ಯುನ್ನತ ಪ್ರಶಸ್ತಿ

    ಶಿರಸಿ: ಡೆಹರಾಡೂನ್​ನ ಭಾರತೀಯ ಅರಣ್ಯ ಸಂಶೋಧನೆ ಮತ್ತು ಶಿಕ್ಷಣ ಪರಿಷತ್ ವಾರ್ಷಿಕವಾಗಿ ಅರಣ್ಯ ಸಂಶೋಧನೆಗೆ ನೀಡುವ ಅತ್ಯುನ್ನತ ಪ್ರಶಸ್ತಿಯನ್ನು ಇಲ್ಲಿನ ಶಿರಸಿ ಕಾಲೇಜ್​ಗೆ ಘೊಷಿಸಲಾಗಿದೆ.

    ದೇಶದ 30 ಅರಣ್ಯ ಕಾಲೇಜ್, ಅರಣ್ಯ ಸಂಶೋಧನಾ ಕೇಂದ್ರಗಳ ವಿವಿಧ ಚಟುವಟಿಕೆಗಳನ್ನು ಆಧರಿಸಿ ಅತ್ಯಂತ ಗಮನಾರ್ಹ ಸಂಶೋಧನೆಗಳನ್ನು ಕೈಗೊಂಡು ಉನ್ನತ ಸಾಧನೆ ಮಾಡಿರುವ ಅರಣ್ಯ ಕಾಲೇಜಿಗೆ ಪ್ರಶಸ್ತಿಯನ್ನು ಘೊಷಿಸಲಾಗಿದೆ. ಕಾಲೇಜು ನಡೆಸಿರುವ ಸಂಶೋಧನಾ ಚಟುವಟಿಕೆಗಳು, ಕಾಲೇಜಿನ ವಿದ್ಯಾರ್ಥಿಗಳು ಅರಣ್ಯ ಸಂರಕ್ಷಣೆ, ವನ್ಯಜೀವಿ ಸಂರಕ್ಷಣೆ ಕಾರ್ಯಗಳಲ್ಲಿ ಕೈಗೊಂಡ ಕೆಲಸಗಳು, ಪ್ರಕಟಗೊಂಡ ಸಂಶೋಧನಾ ಲೇಖನಗಳು, ಕಾಲೇಜಿನ ಸಿಬ್ಬಂದಿ ವರ್ಗದವರಿಗೆ ದೊರಕಿರುವ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾನ್ಯತೆ, ರಾಷ್ಟ್ರೀಯ ಅರಣ್ಯ ನೀತಿ, ರಾಷ್ಟ್ರೀಯ ಪರಿಸರ ನೀತಿ ಇವುಗಳನ್ನು ರೂಪಿಸಲು ಸಿಬ್ಬಂದಿ ವರ್ಗದವರು ಮಾಡಿರುವ ಪರಿಶ್ರಮ ಆಧರಿಸಿ ಈ ಪ್ರಶಸ್ತಿಯನ್ನು ಘೊಷಿಸಲಾಗಿದೆ. ಈ ಪ್ರಶಸ್ತಿಯು 25 ಸಾವಿರ ರೂ. ನಗದು ಜತೆ ರಾಷ್ಟ್ರೀಯ ಫಲಕವನ್ನು ಹೊಂದಿರುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts