More

    ಅರಣ್ಯದೊಳಗೆ ವಿವಿಧ ಅಭಿವೃದ್ಧಿ ಕಾಮಗಾರಿ

    ನಗೋಡು: ಪರಿಸರ ಸಂರಕ್ಷಣೆಗಾಗಿ ಅರಣ್ಯ ಇಲಾಖೆ ವತಿಯಿಂದ ಕೈಗೊಂಡಿರುವ ವಿವಿಧ ಕಾಮಗಾರಿ ಹಾಗೂ ಅಭಿವೃದ್ಧಿ ಯೋಜನೆಗಳ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮಾಹಿತಿ ನೀಡುವುದರೊಂದಿಗೆ ಕಾಮಗಾರಿಗಳ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹುಣಸೂರು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ದಯಾನಂದ ತಿಳಿಸಿದರು.


    ವೀರನಹೊಸಹಳ್ಳಿ ವಲಯ ವ್ಯಾಪ್ತಿಗೆ ಬರುವ ದೊಡ್ಡಹೆಜ್ಜೂರು ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳನ್ನು ಒಳಗೊಂಡ ತಂಡವನ್ನು ವೀರನಹೊಸಹಳ್ಳಿ ವಲಯ ವ್ಯಾಪ್ತಿ ಅರಣ್ಯದಲ್ಲಿ ಇಲಾಖೆ ವತಿಯಿಂದ ಕೈಗೊಂಡಿರುವ ವಿವಿಧ ಅಭಿವೃದ್ಧಿ ಕಾರ್ಯಗಳ ವೀಕ್ಷಣೆಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.


    ಅರಣ್ಯ ಇಲಾಖೆ ವತಿಯಿಂದ ಈಗಾಗಲೇ ಕಾಡಾನೆಗಳು ಕಾಡಿನಿಂದ ಹೊರಬಾರದಂತೆ ಕೈಗೊಂಡಿರುವ 4.4 ಕಿ.ಮೀ. ಆನೆ ತಡೆಗೋಡೆ ಕಾಮಗಾರಿ, ಅರಣ್ಯದೊಳಗೆ ಬೆಳೆದಿರುವ 25 ಹೆಕ್ಟೇರ್ ಪ್ರದೇಶದಲ್ಲಿನ ಲಂಟಾನ ತೆರವು ಸೇರಿದಂತೆ ಇತರ ಕಾಮಗಾರಿಗಳು ಪ್ರಗತಿಯಲ್ಲಿವೆ. ಈ ಸಾಲಿನಲ್ಲಿ ವೀರನಹೊಸಹಳ್ಳಿ ವಲಯ ವ್ಯಾಪ್ತಿಯಲ್ಲಿ 100 ಹೆಕ್ಟೇರ್ ಪ್ರದೇಶದಲ್ಲಿದ್ದ ಲಂಟಾನ ತೆರವು, ಕಾಡಿನೊಳಗಿರುವ ಕೆರೆ-ಕಟ್ಟೆಗಳಲ್ಲಿ ತುಂಬಿರುವ ಹೂಳು ತೆಗೆಯಲು ಸ್ಥಳೀಯ ಗ್ರಾಪಂ ಆಡಳಿತ ನರೇಗಾ ಯೋಜನಡಿ ಸಹಕಾರ ನೀಡಬೇಕೆಂದು ಕೋರಿದರು.


    ವೀರನಹೊಸಹಳ್ಳಿ ವಲಯ ಅರಣ್ಯಾಧಿಕಾರಿ ನಮನಾ ನಾರಾಯಣ ನಾಯಕ್ ಮಾತನಾಡಿ, ಈಗಾಗಲೇ ಟೆಂಡರ್ ಆಗಿ ಆನೆ ತಡೆಗೋಡೆ ಸೇರಿದಂತೆ ಇತರ ಕಾಮಗಾರಿಗಳು ಅರಣ್ಯದೊಳಗೆ ನಡೆಯುತ್ತಿವೆ. ಅದನ್ನು ಸಾರ್ವಜನಿಕರು ಯಾವಾಗಲಾದರೂ ವೀಕ್ಷಿಸಬಹುದು. ಅಲ್ಲದೆ ಪರಿಸರ ಸಂರಕ್ಷಣೆಗಾಗಿ ಇಲಾಖೆಯು ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳಿಗೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯವಾಗಿದ್ದು ಎಲ್ಲರೂ ಸಹಕಾರ ನೀಡಬೇಕು. ಭಾರತ ಪರಿಸರ ಅಭಿವೃದ್ಧಿ ಯೋಜನೆಯ ಗ್ರಾಮ ಸಮಿತಿಗಳನ್ನು ಮರು ರಚಿಸಲಾಗುವುದೆಂದು ತಿಳಿಸಿದರು.


    ದೊಡ್ಡಹೆಜ್ಜೂರು ಗ್ರಾಪಂ ಅಧ್ಯಕ್ಷರಾದ ಮುದಗನೂರು ಸುಭಾಷ್, ಉಪಾಧ್ಯಕ್ಷೆ ಯಶೋದಾ ಮಂಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್, ಸದಸ್ಯರಾದ ವೆಂಕಟೇಶ್, ಲಕ್ಷ್ಮೀ ನಟರಾಜ್, ಗೀತಾ, ಶ್ರೀನಿವಾಸ್, ಸಾವಿತ್ರಮ್ಮ, ಗಣೇಶ್, ಶೈಲಾ, ಉಪವಲಯ ಅರಣ್ಯ ಅಧಿಕಾರಿಗಳಾದ ಚಂದ್ರೇಶ್, ದ್ವಾರಕಾನಾಥ್, ಸಿಬ್ಬಂದಿ ವರ್ಗದವರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts