More

    ಅಭಿವೃದ್ಧಿ ಜತೆ ಸಮಾಜಮುಖಿ ಕಾರ್ಯ ಕೈಗೊಳ್ಳಿ

    ರಾಮದುರ್ಗ, ಬೆಳಗಾವಿ: ಸಂಘ ಸಂಸ್ಥೆಗಳು ಅಭಿವೃದ್ಧಿ ಜತೆ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಲ್ಲಿ ಸರ್ವರ ಸಹಕಾರ ದೊರೆತು ಸಂಘ ಹೆಮ್ಮರವಾಗಿ ಬೆಳೆಯಲು ಸಾಧ್ಯ ಎಂದು ಮರಾಠ ಕೋ-ಆಪ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ಹಾಗೂ ನ್ಯಾಯವಾದಿ ಪಿ.ಎಂ.ಜಗತಾಪ ಅಭಿಮತ ವ್ಯಕ್ತಪಡಿಸಿದರು.

    ಪಟ್ಟಣದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ದಿ.ಮರಾಠ ಅರ್ಬನ್ ಕೋ-ಅಪ್ ಕ್ರೆಡಿಟ್ ಸೊಸೈಟಿಯ 22ನೇ ವಾರ್ಷಿಕ ಸರ್ವ ಸಾಧಾರಣ ಸಭೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

    ಪಾಲಕರು ತಮ್ಮ ಮಕ್ಕಳ ಶಿಕ್ಷಣದ ಬಗೆಗೆ ಕಾಳಜಿ ವಹಿಸಬೇಕು. ಮರಾಠ ಸಮಾಜದ ಅಭಿವೃದ್ಧಿಗೆ ಸರ್ವರೂ ಒಗ್ಗಟ್ಟಿನಿಂದ ಶ್ರಮಿಸಿದಲ್ಲಿ ಮಾತ್ರ ಸರ್ಕಾರದ ಸೌಲಭ್ಯ ಪಡೆಯುವ ಜತೆಗೆ ಸಮಾಜಮುಖಿ ಕಾರ್ಯಕ್ರಮ ಹಮ್ಮಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.

    ಸೊಸೈಟಿ ಉಪಾಧ್ಯಕ್ಷ ಆರ್.ಎಸ್. ಶೀರ್ಕೆ, ಪುರಸಭೆ ಅಧ್ಯಕ್ಷ ರಘುನಾಥ ರೇಣಕೆ, ಸಹಕಾರಿ ಅಭಿವೃದ್ಧಿ ಅಧಿಕಾರಿ ಗಿರೀಶ ಯಾವಗಲ್ ಮಾತನಾಡಿ, ಸಂಘದ ಸದಸ್ಯರು ವಾರ್ಷಿಕ ಮಹಾಸಭೆಗೆ ಹಾಜರಾಗಿ ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಅಭಿವೃದ್ಧಿಗೆ ರೂಪರೇಷೆಯೊಂದಿಗೆ ಸೂಕ್ತ ಸಲಹೆ ಸೂಚನೆ ನೀಡಬೇಕು ಎಂದರು. ಮುಖ್ಯ ಕಾರ್ಯನಿರ್ವಾಹಕಿ ಮಂಜುಳಾ ಪಟ್ಟಣ ವಾರ್ಷಿಕ ವರದಿ ಓದಿದರು.

    ಹಿರಿಯ ನಾಗರಿಕರು, ನಿವೃತ್ತರು, ಎಸ್.ಎಸ್.ಎಲ್.ಸಿ ಯಲ್ಲಿ ಹಾಗೂ ಪಿಯುಸಿ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು. ಆಡಳಿತ ಮಂಡಳಿ ಸದಸ್ಯರಾದ ಎಸ್.ಕೆ. ನಲವಡೆ, ಪಿ.ಬಿ. ಬರ್ಗೆ, ಎಸ್.ಕೆ. ಕರಾಂಡೆ, ಎಫ್.ಕೆ. ಮಾದರ, ಕೆ.ಬಿ. ಹೂವನ್ನವರ, ಎ.ಎ. ಜಗತಾಪ, ಪಿ.ಆರ್. ಘೋರ್ಪಡೆ, ನವೀನ ನಲವಡೆ, ಐಶ್ವರ್ಯ ಕುಂಬಾರ, ಜಿ.ಟಿ. ಬೋಸ್ಲೆ, ವಿದ್ಯಾರ್ಥಿನಿ ಪೂಜಾ ಘೋರ್ಪಡೆ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts