More

    ಅಭಿವೃದ್ಧಿ ಕಾಣದೆ ಕುಗ್ಗಿದ ಶಿಗ್ಲಿ

    ಶಿಗ್ಲಿ : 14 ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಜನಪ್ರತಿನಿಧಿಗಳ ಅಸಡ್ಡೆಯಿಂದಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳಾಗಿಲ್ಲ. ಸರ್ಕಾರಿ ಸೌಲಭ್ಯಗಳಾಗಲಿ, ಅನುದಾನವಾಗಲಿ ಗ್ರಾಮಕ್ಕೆ ಸಮರ್ಪಕವಾಗಿ ಸಿಕ್ಕಿಲ್ಲ. ಜನಪ್ರತಿನಿಧಿಗಳು ಇಚ್ಛಾಶಕ್ತಿ ತೋರದಿರುವುದರಿಂದ ಗ್ರಾಮದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ಗ್ರಾಮಸ್ಥರು ದೂರುವಂತಾಗಿದೆ.

    ಚುನಾವಣೆ ಬಂದಾಗ ಮಾತ್ರ ಕಾಣಿಸಿಕೊಂಡು ಮತ ಕೇಳಿ ಆಯ್ಕೆಯಾದ ಮೇಲೆ ಇತ್ತ ಸುಳಿಯುವುದೂ ಇಲ್ಲ. ಜನಪ್ರತಿನಿಧಿಗಳಿಂದಾಗಿ ಗ್ರಾಮದಲ್ಲಿ ಅಭಿವೃದ್ಧಿ ಎನ್ನುವುದು ಮರೀಚಿಕೆ ಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸುವುದರಲ್ಲಿಯೂ ವಾಸ್ತವಾಂಶವಿದೆ.

    ಗ್ರಾಮದ ರಸ್ತೆಗಳು ರಸ್ತೆಗಳು ತಗ್ಗು-ಗುಂಡಿಗಳ ಆಗರಗಳಾಗಿವೆ. ಬಹುತೇಕ ರಸ್ತೆಗಳು ಡಾಂಬರೀಕರಣ ಗೊಂಡು ಮೂರ್ನಾಲ್ಕು ವರ್ಷಗಳೇ ಕಳೆದಿವೆ. ಮಳೆಗಾಲ ದಲ್ಲಿ ಕೆಸರುಗದ್ದೆಯಂತಾಗುವ ರಸ್ತೆಗಳಲ್ಲಿಯೇ ಪಾದಚಾರಿ ಗಳು, ವಾಹನ ಸವಾರರು ಸಂಚರಿಸಬೇಕಾದ ಅನಿವಾರ್ಯತೆಯಿದೆ. ಗ್ರಾಮವನ್ನೂ ಸಂರ್ಪಸುವ ರಸ್ತೆಗಳೆಲ್ಲ ಅವೈಜ್ಞಾನಿಕವಾಗಿದ್ದು, ಅವುಗಳ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಹಾಗಾದರೆ, ಜವಳಿ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದಿರುವ ಗ್ರಾಮಕ್ಕೆ ಬಂಡವಾಳ ಹರಿದು ಬರುವಂತೆ ಮಾಡಬೇಕಿದೆ. ಗ್ರಾಮದ ಶೇ. 70ರಷ್ಟು ಜನರು ಸೀರೆ ತಯಾರಿಕೆಯನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಕೈಮಗ್ಗ ಹಾಗೂ ವಿದ್ಯುತ್ ಮಗ್ಗಗಳ ಮಾಲೀಕರು ಹಾಗೂ ಕೆಲಸಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸಿ ಅವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು. ಜವಳಿ ಪಾರ್ಕ್ ನಿರ್ಮಾಣ ಮಾಡುವ ಮೂಲಕ ಇಲ್ಲಿನ ನೇಕಾರರನ್ನು ಪ್ರೇರೇಪಿಸುವ ಕೆಲಸವನ್ನು ಸರ್ಕಾರ ಮಾಡಬೇಕು. ಗ್ರಾಮದಲ್ಲಿ ಪದವಿ ಹಾಗೂ ತಾಂತ್ರಿಕ ಶಿಕ್ಷಣ ವಿದ್ಯಾಲಯ ಪ್ರಾರಂಭಿಸುವ ಮೂಲಕ ಶಿಕ್ಷಣ ಕ್ಷೇತ್ರವನ್ನೂ ಪ್ರೋತ್ಸಾಹಿಸುವ ಕಾರ್ಯವಾಗಬೇಕು ಎಂದು ಗ್ರಾಮಸ್ಥರಾದ ರವಿ ಕುಸನೂರ, ರಾಜರತ್ನ ಹುಲಗೂರ, ರಂಜನ್ ಪಾಟೀಲ, ಮನೋಹರ ಕರ್ಜಗಿ, ಮುಂಜುನಾಥ ಶಂಭೋಜಿ, ಹುಸೇನಸಾಬ್ ಗುಡೂರ, ಮಂಜುನಾಥ ಗುಡ್ಡೆಣ್ಣವರ ಇತರರು ಒತ್ತಾಯಿಸಿದ್ದಾರೆ.

    ಕಳೆದ ಮೂರು ವರ್ಷಗಳಿಂದ ಗ್ರಾಮದ ಅಭಿವೃದ್ಧಿಯನ್ನು ಜನಪ್ರತಿನಿಧಿಗಳು ಮರೆತಿದ್ದಾರೆ. ಹದಗೆಟ್ಟ ರಸ್ತೆ ದುರಸ್ತಿ, ಸರ್ಕಾರಿ ಪದವಿ ವಿದ್ಯಾಲಯ ಸ್ಥಾಪನೆ, ವಿದ್ಯಾರ್ಥಿಗಳ ಏಳಿಗೆಗಾಗಿ ವಸತಿ ನಿಲಯಗಳನ್ನು ನಿರ್ವಿುಸಬೇಕು. ಗುಡಿ ಕೈಗಾರಿಕೆಯಾದ ವಿದ್ಯುತ್ ಮಗ್ಗಗಳ ಮಾಲೀಕರಿಗೆ ಮತ್ತು ನೇಕಾರರಿಗೆ ಅನುಕೂಲವಾಗುವ ಜವಳಿ ಪಾರ್ಕ್ ಸ್ಥಾಪಿಸುವ ಮೂಲಕ ಸಾವಿರಾರು ಯುವಕರಿಗೆ ಉದ್ಯೋಗ ನೀಡುವ ಕೆಲಸವಾಗಬೇಕಿದೆ.

    | ಎಸ್.ಪಿ. ಬಳಿಗಾರ ಮಾಜಿ ಅಧ್ಯಕ್ಷ ಗದಗ ಜಿಪಂ

    ಪಂಚಾಯಿತಿಗೆ ಬರುವ ಅನುದಾನದಲ್ಲಿ ಗ್ರಾಮದಲ್ಲಿ ಸಮಗ್ರ ಯೋಜನೆ ಅನುಷ್ಠಾನಗೊಳಿಸಲು ಸಾಧ್ಯವಾಗುವುದಿಲ್ಲ. ಗ್ರಾಮದಲ್ಲಿ ಅಭಿವೃದ್ಧಿ ಕೆಲಸಗಳಾಗಬೇಕಾದರೆ ಸರ್ಕಾರ ವಿಶೇಷ ಅನುದಾನ ತರಲು ಸಂಸದ, ಶಾಸಕ ಹಾಗೂ ಸಚಿವರು ಮನಸ್ಸು ಮಾಡಬೇಕು.

    | ಅಶೋಕಯ್ಯ ಮುಳಗುಂದಮಠ ಗ್ರಾಪಂ ಅಧ್ಯಕ್ಷ | ಯಲ್ಲಪ್ಪ ತಳವಾರ ಉಪಾಧ್ಯಕ್ಷ

    ಕೃಷಿ ಹಾಗೂ ಸೀರೆ ನೇಕಾರಿಕೆ ಗ್ರಾಮದ ಪ್ರಮುಖ ಉದ್ಯೋಗವಾಗಿದ್ದು, ನೇಕಾರಿಕೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಪೂರೈಸುವ ಮೂಲಕ ಮಗ್ಗಗಳ ಮಾಲೀಕರು ಹಾಗೂ ಕೆಲಸಗಾರರ ಬದುಕು ಹಸನುಗೊಳಿಸಬೇಕು.

    | ನಾರಾಯಣಪ್ಪ ಹರವಿ

    ವಿದ್ಯುತ್ ಮಗ್ಗಗಳ ಮಾಲೀಕ, ಶಿಗ್ಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts