More

    ಅಧಿಕ ಔಷಧಿ ಸಂಪರಣೆ ಅವೈಜ್ಞಾನಿಕ

    ಬಾಗಲಕೋಟೆ: ಬರದ ನೆರಳಿನಲ್ಲಿರುವ ಒಣ ಬೇಸಾಯದ ತರಕಾರಿ ಬೆಳೆಗಳಾದ ಮೆಣಸಿನಕಾಯಿ ಹಾಗೂ ಈರುಳ್ಳಿಗಳು ಹೂವು ಮತ್ತು ಕಾಯಿ ಕಟ್ಟುವ ಹಂತದಲ್ಲಿದ್ದು, ವಾತಾವರಣ ವೈಪರಿತ್ಯದಿಂದಾಗಿ ತೇವಾಂಶ ಶೇ.5ಕ್ಕಿಂತ ಕಡಿಮೆ ನೀರಿನಾಂಶ ಇರುವದರಿಂದ ಇಂತಹ ಪರಿಸ್ಥಿತಿಯಲ್ಲಿ ದುಬಾರಿ ಬೆಳೆಯ ಔಷಧಿಗಳನ್ನು ಸಿಂಪರಣೆ ಮಾಡುವದರಿಂದ ಗಿಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ತೋವಿವಿಯ ಪ್ರಾದ್ಯಾಪಕ ಡಾ.ವಸಂತ ಗಾಣಿಗೇರ ಜಾಗೃತಿ ನೀಡಿದ್ದಾರೆ.

    ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಿಂದ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಂಡುಬಂದಿದ್ದು, ಕಡಿಮೆ ಖರ್ಚಿನಲ್ಲಿ ವಿಶ್ವವಿದ್ಯಾಲಯದಲ್ಲಿ ದೊರೆಯುವ ಜೈವಿಕ ಪೀಡೆನಾಶಕಗಳಾದ ಬಿವೇರಿಯಾ ಬೇಸಿಯನ್, ಮೆಟಾರೈಜಿಯಂ, ಲೇಖ್ಯಾನಿಸಿಯಂ, ಬ್ಯಾಸಿಲಸ್, ಸುಡೋಮೋನಾಸ್ ಹಾಗೂ ಜೈವಿಕ ಗ್ರೋಟಾನಿಕಗಳು, ಜೈವಿಕಗೊಬ್ಬರಗಳು ಅತ್ಯಲ್ಪ ದರದಲ್ಲಿ 150 ರೂ. ಪ್ರತಿ ಲೀಟರಗಳಿಗೆ ವಿಶ್ವವಿದ್ಯಾಲಯದಲ್ಲಿ ಲಭ್ಯವಿದ್ದು, ಇವುಗಳ ಬಳಕೆಯಿಂದ ಉತ್ತಮ ಪರಿಸರ ಹಾಗೂ ಕಡಿಮೆ ಖರ್ಚು ಮಾಡವುದರಿಂದ ಬೆಳೆ ಉತ್ತಮ ಫಸಲು ಪಡೆಯಬಹುದಾಗಿದೆ. ಖರ್ಚನ್ನು ಕಡಿಮೆಗೊಳಿಸಬಹುದಾಗಿದೆ ಎಂದು ತಿಳಿಸಿದರು.

    ತೋವಿವಿ ವಿಜ್ಞಾನಿಗಳಾದ ಡಾ. ಮಂಜುನಾಥ ಹುಬ್ಬಳ್ಳಿ (ಸಸ್ಯರೋಗ ಶಾಸ್ತ್ರ), ಡಾ ವಾಸೀಮ (ಕೀಟಶಾಸ್ತ್ರ) ಹಾಗೂ ಬಾಗಲಕೋಟ ತೋಟಗಾರಿಕೆ (ಜಿಲ್ಲಾ ಪಂಚಾಯತ) ಅಧಿಕಾರಿಗಳ ಸಹಯೋಗದೊಂದಿಗೆ ಬಾದಾಮಿ ತಾಲೂಕಿನ ಹಂÀಗರಗಿ ಗ್ರಾಮದ ರೈತರಾದ ಶಂಕ್ರಪ್ಪ ಹೊಸಗೌಡರ, ಸುರೇಶ ಗುಳಣ್ಣನವರ, ಬಸವರಾಜ ಕುರಿ, ಬೇಲೂರ ಗ್ರಾಮದ ರೈತರಾದ ಶ್ರೀ ಯಲಿಗಾರ, ಶಂಕ್ರಪ್ಪ ಹುನಗುಂದ ತಾಲೂಕಿನ ಸೂಳಿಭಾವಿ ಗ್ರಾಮದ ರೈತರಾದ ಜಿ.ಬಿ. ಮಕಾನದಾರ, ಬೆಂಕನಗೌಡ್ರ, ವಜ್ರಮಟ್ಟಿ ಬಾಗಲಕೋಟ ತಾಲೂಕಿನ ಬೆನಕಟ್ಟಿ ಗ್ರಾಮದ ರೈತರಾದ ಹನುಮಂತಗೌಡ ದಾಸಪ್ಪನವರ, ಹಾಗೂ ಬೆನ್ನೂರ ಭೀಮಶಿ ಲಖನವರ, ಮುಂತಾದ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ವೈಜ್ಞಾನಿಕ ಸಲಹೆ ನೀಡಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಬಿ.ಪಿ.ಪಾಟೀಲ, ಸುಭಾಷ ಸೂಪಿ, ಬಸವರಾಜ ಗೌಡನ್ನವರ, ಹೊಳೆಬಸು ಮೀಸಿ, ಗುರುರಾಜ ಹಾಗೂ ಆದರ್ಶ ಅಧಿಕಾರಿ ವರ್ಗದವರು ರೈತರ ಕ್ಷೇತ್ರಗಳನ್ನು ಭೇಟಿ ನೀಡಲು ಅತ್ಯುತ್ತಮವಾಗಿ ಸಹಕರಿಸಿದರು.

    ಮುಂದಿನ ದಿನಗಳಲ್ಲಿ ಇನ್ನೂ ತೋವಿವಿ ಹಾಗೂ ತೋಟಗಾರಿಕೆ ಇಲಾಖೆ (ಜಿ.ಪಂ) ಬಾಗಲಕೋಟದ ಸಹಯೋಗದೊಂದಿಗೆ ತೋಟಗಾರಿಕೆ ಬೆಳೆಗಳ ವಿಚಾರ ಗೋಷ್ಠಿಗಳನ್ನು ಹಾಗೂ ಕ್ಷೇತ್ರ ಭೇಟಿ ನೀಡಿ ರೈತರಿಗೆ ತಾಂತ್ರಿಕ ಸಲಹೆ ನೀಡಲು ಸನ್ನದ್ಧರಾಗಿದ್ದಾರೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts