More

    ಕಾಂತರಾಜು, ಟಿ.ಡಿ.ನಾರಾಯಣ ಅಧಿಕಾರ ಸ್ವೀಕಾರ

    ಹುಣಸೂರು: ಹುಣಸೂರು ತಾಲೂಕು ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಕಾಂತರಾಜು ಮತ್ತು ನಗರಮಂಡಲದ ಅಧ್ಯಕ್ಷರಾಗಿ ಟಿ.ಡಿ.ನಾರಾಯಣ ಅಧಿಕಾರ ಸ್ವೀಕರಿಸಿದರು.

    ನಗರದ ಬ್ರಾಹ್ಮಣರ ಬೀದಿಯ ಶ್ರೀ ರಾಘವೇಂದ್ರಸ್ವಾಮಿ ಮಠದ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಪದಗ್ರಹಣ ಸಮಾರಂಭದಲ್ಲಿ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್ ಮತ್ತು ಮೈಸೂರು ಪ್ರಭಾರಿ ಮೈ.ವಿ.ರವಿಶಂಕರ್ ನೂತನ ವರಿಷ್ಠರಿಗೆ ಪಕ್ಷದ ಬಾವುಟ ನೀಡುವ ಮೂಲಕ ಪಕ್ಷದ ಜವಾಬ್ದಾರಿಯನ್ನು ನೀಡಿದರು.

    ಈ ವೇಳೆ ಮಾತನಾಡಿದ ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಕಳೆದ 10 ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೂರಾರು ಜನಪರ ಯೋಜನೆಗಳನ್ನು ರೂಪಿಸಿ ದೇಶವನ್ನು ವಿಶ್ವದೆತ್ತರಕ್ಕೆ ಕೊಂಡ್ಯೊಯ್ದಿದ್ದಾರೆ. ಜನಸಾಮಾನ್ಯರ ದನಿಯಾಗಿ ದುಡಿದಿದ್ದಾರೆ. ಸಂಸದ ಪ್ರತಾಪ್‌ಸಿಂಹ ಮೈಸೂರು-ಕೊಡಗು ಸಂಸದರಾಗಿ ಅಭಿವೃದ್ಧಿಯ ಪರ್ವವನ್ನೇ ಕೈಗೊಂಡಿದ್ದಾರೆ. ನರೇಂದ್ರ ಮೋದಿ ಅವರ ಕಾರ್ಯಕ್ರಮಗಳಿಗೆ ದೇಶದ ಪ್ರತಿಯೊಬ್ಬರ ಮನೆಯಲ್ಲೂ ಕನಿಷ್ಠ ಒಬ್ಬ ವ್ಯಕ್ತಿಯಾದರೂ ಫಲಾನುಭವಿಯಾಗಿರುತ್ತಾನೆ. ಹಾಗಾಗಿ ಕಾರ್ಯಕರ್ತರು ತಾಲೂಕಿನಲ್ಲಿ ನರೇಂದ್ರ ಮೋದಿ ಮತ್ತು ಪ್ರತಾಪ್‌ಸಿಂಹ ಅವರ ಅಭಿವೃದ್ಧಿಪರ ಕಾರ್ಯಗಳನ್ನು ಮನೆಮನೆಗೆ ತಿಳಿಸುವ ಕಾರ್ಯ ಮಾಡಬೇಕು. ನೂತನವಾಗಿ ಆಯ್ಕೆಯಾದ ಪಕ್ಷದ ಅಧ್ಯಕ್ಷರು, ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿ 3 ಲಕ್ಷಕ್ಕೂ ಅಧಿಕ ಮತಗಳಿಂದ ಜಯಗಳಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.

    ಕಾರ್ಯಕ್ರಮದಲ್ಲಿ ಗ್ರಾಮಾಂತರ ನಿಕಟಪೂರ್ವ ಅಧ್ಯಕ್ಷ ನಾಗಣ್ಣಗೌಡ, ನಗರಮಂಡಲದ ನಿಕಟಪೂರ್ವ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಹಿರಿಯ ಮಖಂಡ ನಾಗರಾಜ ಮಲ್ಲಾಡಿ, ಬಿ.ಎಸ್.ಯೋಗಾನಂದಕುಮಾರ್ ಹನಗೋಡು ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿರಣ್, ಜಯರಾಮೇಗೌಡ, ರಾಮಚಂದ್ರ, ದಿನೇಶ್, ಸತೀಶ್, ವೆಂಕಟೇಶ್, ರವಿಶಂಕರ್, ಸೋಮಶೇಖರ್, ಸೂರ್ಯಕುಮಾರ್, ಯೋಗೀಶ್, ಜಿಲ್ಲಾ ಕಾರ್ಯದರ್ಶಿ ಪ್ರಫುಲ್ಲಾ ಮಲ್ಲಾಡಿ, ಸುನಿಲ್, ರವಿಕುಮಾರ್, ಮಂಜುಳಮ್ಮ, ವೆಂಕಟಮ್ಮ, ಯಶೋಧಮ್ಮ, ಮೀನಾಕ್ಷಿ ಕಾರ್ಯಕರ್ತರು ಇದ್ದರು.
    8ಊಓ2: ಹುಣಸೂರು ತಾಲೂಕು ಬಿಜೆಪಿ ಗ್ರಾಮಾಂತರ ಅಧ್ಯಕ್ಷರಾಗಿ ಕಾಂತರಾಜು ಮತ್ತು ನಗರಮಂಡಲ ಅಧ್ಯಕ್ಷರಾಗಿ ಟಿ.ಡಿ.ನಾರಾಯಣ ಅಧಿಕಾರ ಸ್ವೀಕರಿಸಿದರು. ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ಮೈ.ವಿ.ರವಿಶಂಕರ್, ನಾಗಣ್ಣಗೌಡ, ಬಿ.ಎಸ್.ಯೋಗಾನಂದಕುಮಾರ್, ಗಣೇಶ್‌ಕುಮಾರಸ್ವಾಮಿ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts