More

    ಅತಿರುದ್ರ ಯಾಗದಿಂದ ಸಂಕಲ್ಪ ಸಿದ್ಧಿ


    ಯಾದಗಿರಿ: ಭಕ್ತಿಯಿಂದ ಅತಿರುದ್ರ ಯಾಗದಲ್ಲಿ ಪಾಲ್ಗೊಳ್ಳುವ ಎಲ್ಲರಿಗೂ ಸಂಕಲ್ಪ ಸಿದ್ಧಿ ಉಂಟಾಗಿ, ಬದುಕಿನಲ್ಲಿ ಶಾಂತಿ,ಸಹನೆ, ನೆಮ್ಮದಿಯನ್ನು ಹೊಂದಲು ಸಾಧ್ಯವಾಗುತ್ತದೆ ಎಂದು ಅಬ್ಬೆತುಮಕೂರಿನ ಮಠಾಪತಿ ಡಾ.ಗಂಗಾಧರ ಶಿವಾಚಾರ್ಯರು ನುಡಿದರು.
    ಮಂಗಳವಾರ ಶ್ರೀಮಠದಲ್ಲಿ ಯುಗಾದಿ ಅಮಾವಾಸ್ಯೆ ನಿಮಿತ್ತ ಹಮ್ಮಿಕೊಂಡಿದ್ದ ಶಿವಾನುಭವ ಚಿಂತನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಮಾ. 24 ರಿಂದ ನಿರಂತರ ಒಂದು ವಾರ ಕಾಲ ಅತಿರುದ್ರಯಾಗ ಹಮ್ಮ್ಮಿಕೊಳ್ಳಲಾಗಿದ್ದು, ಇಡೀ ಕಲ್ಯಾಣ ಕನರ್ಾಟಕದಲ್ಲಿಯೇ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಐತಿಹಾಸಿಕ ಸಮಾರಂಭದಲ್ಲಿ ಶ್ರದ್ಧೆ,ನಿಷ್ಠೆಯಿಂದ ಪಾಲ್ಗೊಂಡಲ್ಲಿ ಎಲ್ಲರ ಮನೋಕಾಮನೆಗಳು ಈಡೇರುತ್ತವೆ ಎಂದು ಹೇಳಿದರು.
    ಶ್ರೀ ವಿಶ್ವಾರಾಧ್ಯರ ಮೂತರ್ಿ ಪ್ರತಿಪ್ಠಾಪನೆಯ ಹಿನ್ನೆಲೆಯಲ್ಲಿ ಪ್ರತಿ ಹನ್ನೊಂದು ವರ್ಷಗಳಿಗೊಮ್ಮೆ ಶ್ರೀಮಠದಲ್ಲಿ ವಿಶಿಷ್ಟವಾದ ಕಾರ್ಯಕ್ರಮಗಳನ್ನು ಹಮ್ಮ್ಮಿಕೊಂಡು ಬರಲಾಗುತ್ತಿದೆ. ಆ ಧಾಮರ್ಿಕ ಪರಂಪರೆಯಲ್ಲಿ ಈಗ ಅತಿರುದ್ರ ಯಾಗದಂಥ ಬೃಹತ್ ಸಮಾರಂಭ ನಡೆಸಲು ಶ್ರೀಮಠ ಸಜ್ಜುಗೊಂಡಿದೆ ಎಂದರು.
    108 ಗೋಮಂಗಲ ಪೂಜೆ, ವಿಶ್ವಾರಾಧ್ಯರ ತೊಟ್ಟಿಲೋತ್ಸವ, ಅಷ್ಟಲಕ್ಷ್ಮೀ, ಕುಬೇರ ಕುಂಕುಮ ಪೂಜೆ, 1008 ಉಮಾಮಹೇಶ್ವರಿ ಸಂತೃಪ್ತಿ ಸಮಾರಂಭ ಮತ್ತು ಶ್ರೀಶ್ವಾರಾಧ್ಯರ ಭವ್ಯ ಮೂತರ್ಿಯ ಲೋಕಾರ್ಪಣೆ ಹೀಗೆ ಹತ್ತು ಹಲವು ಧಾಮರ್ಿಕ ಕಾರ್ಯಕ್ರಮಗಳು ವಾರವಿಡೀ ಶ್ರೀಮಠದಲ್ಲಿ ನಡೆಯಲಿದ್ದು,ಆ ಎಲ್ಲ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಭಾಗವಹಿಸಿ ಪುನೀತರಾಗುವಂತೆ ಹೇಳಿದರು.

    ಈ ಸಂದರ್ಭದಲ್ಲಿ ಚನ್ನಪ್ಪಗೌಡ ಮೋಸಂಬಿ, ಡಾ.ಸುಭಾಶ್ಚಂದ್ರ ಕೌಲಗಿ, ವಿಶ್ವನಾಥ ಸಿರವಾರ,ವಿಶ್ವನಾಥ ಶಾಸ್ತ್ರಿ ಗವಿಮಠ, ಬಸವರಾಜಶಾಸ್ತ್ರೀ ಎಲೆಕೂಡ್ಲಗಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts