More

    ಅಡಕೆಗೆ ಕೊಳೆರೋಗ: ಪರಿಹಾರಕ್ಕೆ ಒತ್ತಾಯಿಸಿ 18ರಂದು ಪ್ರತಿಭಟನೆ

    ಸಾಗರ: ತಾಲೂಕಿನ ಎಲ್ಲ ಗ್ರಾಮಗಳಲ್ಲೂ ಅಡಕೆಗೆ ಕೊಳೆರೋಗ ಬಾಧಿಸುತ್ತಿದೆ. ಹಾನಿಗೊಳಗಾದ ತೋಟಗಳಿಗೆ ತಕ್ಷಣ ಪರಿಹಾರ ನೀಡುವಂತೆ ಒತ್ತಾಯಿಸಿ ಆ.18ರಂದು ನಗರಸಭೆ ಆವರಣದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಅಡಕೆ ಬೆಳೆಗಾರರ ಸಂಘದಿಂದ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಬಿ.ಆರ್.ಜಯಂತ್ ಹೇಳಿದರು.
    ಸಾಗರ ತಾಲೂಕಿನ ಕುಂಟಗೋಡು, ವರದಹಳ್ಳಿ, ಮುಂಗರವಳ್ಳಿ, ಲಿಂಗದಹಳ್ಳಿ, ಚಿಪ್ಳಿ ಇನ್ನಿತರೆ ಗ್ರಾಮಗಳ ತೋಟಗಳಿಗೆ ಮಂಗಳವಾರ ಬೆಳೆಗಾರರ ಸಂಘದ ಪದಾಧಿಕಾರಿಗಳ ಜತೆ ಭೇಟಿ ನೀಡಿ ಬೆಳೆಗಾರರ ಸಂಕಷ್ಟ ಆಲಿಸಿ ಅವರು ವರದಾಮೂಲದಲ್ಲಿ ಮಾತನಾಡಿದರು.
    ವಿಪರೀತ ಮಳೆಯಿಂದ ಶೇ.90ರಷ್ಟು ಅಡಕೆ ಕೊಳೆಯಿಂದ ನಾಶವಾಗಿದೆ. ಸಾಗರ ತಾಲೂಕಿನಲ್ಲಿ ಸಣ್ಣ ಮತ್ತು ಅತಿಸಣ್ಣ ಬೆಳೆಗಾರರು ಇದ್ದಾರೆ. ಪೂರ್ಣ ಬೆಳೆ ಕಳೆದುಕೊಂಡು ಬೆಳೆಗಾರರು ಬೀದಿಗೆ ಬೀಳುವಂತಾಗಿದೆ. ಸರ್ಕಾರ ಒಂದು ಹೆಕ್ಟೇರ್‌ಗೆ 28 ಸಾವಿರ ರೂ. ಪರಿಹಾರ ನೀಡುತ್ತಿರುವುದು ಕಡಿಮೆಯಾಗಿದೆ. ಪರಿಹಾರ ಧನ ಹೆಚ್ಚಿಸಬೇಕು ಮತ್ತು ತಕ್ಷಣ ಕೊಳೆರೋಗದಿಂದ ಸಂತ್ರಸ್ತರಾದ ಕುಟುಂಬದ ನೆರವಿಗೆ ಸರ್ಕಾರ ನಿಲ್ಲಬೇಕು ಎಂದು ಒತ್ತಾಯಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts