More

    ಅಂಬಾರಗೊಪ್ಪದಿಂದ ಶಿಕಾರಿಪುರವರೆಗೆ ಪಾದಯಾತ್ರೆ; ಗ್ರಾಮವನ್ನು ನಗರಸಭೆಗೆ ಸೇರ್ಪಡೆ ಮಾಡಬಾರದೆಂದು ಆಗ್ರಹ

    ಶಿಕಾರಿಪುರ: ಅಂಬಾರಗೊಪ್ಪ ಗ್ರಾಮವನ್ನು ಶಿಕಾರಿಪುರ ನಗರಸಭೆಗೆ ಸೇರಿಸಬಾರದು ಎಂದು ಆಗ್ರಹಿಸಿ ಗ್ರಾಮಸ್ಥರು ಶನಿವಾರ ಗ್ರಾಮದ ಬಸವಣ್ಣ ದೇವಸ್ಥಾನದಿಂದ ಶಿಕಾರಿಪುರ ತಹಸೀಲ್ದಾರ್ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಬಳಿಕ ತಹಸೀಲ್ದಾರ್ ಮತ್ತು ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
    ತಾಲೂಕಿನ 44 ಪಂಚಾಯಿತಿಗಳಲ್ಲಿ ಅಂಬಾರಗೊಪ್ಪ ಪಂಚಾಯಿತಿ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಪ್ರಕೃತಿ ರಮಣೀಯ ಪ್ರದೇಶವಾಗಿದ್ದು ಇದು ನಗರೀಕರಣ ಆಗುವುದು ಬೇಡ ಎಂದು ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ರಾಜಣ್ಣ ಹೇಳಿದರು.
    ಜನಸಂಖ್ಯೆ ಆಧಾರದ ಮೇಲೆ ನೋಡಿದರೆ ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಉಳಿದಂತೆ ಎಲ್ಲ ಸಮಾಜದ ಜನರೂ ಇದ್ದಾರೆ. ಅಂಬಾರಗೊಪ್ಪ ನಗರಸಭೆ ವ್ಯಾಪ್ತಿಗೊಳಪಡುವುದರಿಂದ ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಕ್ಷೇತ್ರದಿಂದ ಮತ್ತು ಉದ್ಯೋಗ ಖಾತ್ರಿ ಯೋಜನೆಯಿಂದ ವಂಚಿತವಾಗಲಿದೆ. ತೆರಿಗೆ, ವಿದ್ಯುತ್ ಬಿಲ್, ಕರ, ನೀರಿನ ಕಂದಾಯ ಹೆಚ್ಚಳವಾಗುತ್ತದೆ. ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕ ದೊರೆಯುವದಿಲ್ಲ ಎಂದರು.
    ಅಂಬಾರಗೊಪ್ಪ ನಗರಸಭೆ ವ್ಯಾಪ್ತಿಗೆ ಒಳಪಟ್ಟರೆ ಯಾವುದೇ ದಾಖಲೆಗಾಗಿ ಶಿಕಾರಿಪುರಕ್ಕೆ ಬಂದು ಹೋಗಬೇಕಾಗುತ್ತದೆ. ಗ್ರಾಪಂನಲ್ಲಾದರೆ ನಮಗೆ ಮನೆ ಬಾಗಿಲಲ್ಲೇ ಅವಶ್ಯಕ ದಾಖಲೆಪತ್ರಗಳು ದೊರೆಯುತ್ತವೆ. ಸಂಬಂಧಿಸಿದವರು ಈ ಪ್ರಕ್ರಿಯೆಯಲ್ಲಿ ಅಂಬಾರಗೊಪ್ಪ ಗ್ರಾಮವನ್ನು ಕೈಬಿಡಬೇಕು ಎಂದು ರಾಘವೇಂದ್ರ ನಾಯ್ಕ ಒತ್ತಾಯಿಸಿದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts