More

    ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ

    ಗದಗ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರು ನಗರದ ಜಿಲ್ಲಾಡಳಿತ ಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

    ಕರೊನಾ ತಡೆಗಟ್ಟಲು ಅಂಗನವಾಡಿ ಕೇಂದ್ರಗಳಿಗೆ, ಕಾರ್ಯಕರ್ತೆಯರಿಗೆ ಗುಣಮಟ್ಟದ ಸ್ಯಾನಿಟೈಸರ್, ಮಾಸ್ಕ್, ಪಿಪಿಇ ಕಿಟ್ ಪೂರೈಸಬೇಕು. ಮಕ್ಕಳ ಮಾಸಿಕ ತಪಾಸಣೆ, ತೂಕ ಮಾಡುವಾಗ ಅಂಗನವಾಡಿ ಕೇಂದ್ರಗಳು, ಯಂತ್ರಗಳನ್ನು ಸ್ಯಾನಿಟೈಸ್ ಮಾಡಿಸಬೇಕು. 25000 ರೂ. ಪ್ರೋತ್ಸಾಹಧನ, ಸ್ಥಳೀಯ ಸಾರಿಗೆ ಬಸ್ ಪಾಸ್, ಊಟದ ವೆಚ್ಚ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

    ನಿವೃತ್ತರಾದವರಿಗೆ ನಿವೃತ್ತಿ ಸೌಲಭ್ಯ ಕೊಡಬೇಕು. ಮೇಲ್ವಿಚಾರಕಿಯರ ಹುದ್ದೆಗೆ ಶೇ. 100 ಮೀಸಲಾತಿ, ಸೇವಾ ಹಿರಿತನ ಆಧಾರದಲ್ಲಿ ಮುಂಬಡ್ತಿ, 50 ಲಕ್ಷ ರೂ. ವಿಮೆ, ಕರೊನಾ ಸೋಂಕಿತರಿಗೆ 5 ಲಕ್ಷ ರೂ. ಪರಿಹಾರ. ಮೊಟ್ಟೆ ಬಿಲ್, ಬಾಡಿಗೆ, ಗ್ಯಾಸ್ ಸಿಲಿಂಡರ್, ಗೌರವ ಧನ ಮುಂಗಡವಾಗಿ ಪಾವತಿಸಬೇಕು. ಬಾಕಿ ವೇತನ, ಮರಣ ಪರಿಹಾರ ಬಿಡುಗಡೆ ಮಾಡಬೇಕು. ಸಹಾಯಕಿಯರಿಗೆ ಕಾರ್ಯಕರ್ತೆಯಾಗಿ ಮುಂಬಡ್ತಿ ಕೊಡುವಾಗ ನಿಗದಿತ ವಯಸ್ಸಿನ ಮಿತಿ ತೆಗೆಯಬೇಕು. ಕಾರ್ಯಕರ್ತೆಯರ ಸೇವೆ ಕಾಯಂಗೊಳಿಸಬೇಕು. ಅಲ್ಲಿವರೆಗೆ ಕಾರ್ಯಕರ್ತೆಯರಿಗೆ 30 ಸಾವಿರ ರೂ. ಮತ್ತು ಸಹಾಯಕಿಯರಿಗೆ 21000 ರೂ. ವೇತನ ಕೊಡಬೇಕು. ಸೇವಾ ಜ್ಯೇಷ್ಠತೆ ಆಧಾರದಲ್ಲಿ ವೇತನ ಪಾವತಿಸಬೇಕು. ಖಾಲಿಯಿರುವ ಸಹಾಯಕಿಯರು, ಕಾರ್ಯಕರ್ತೆಯರ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಲಾಗಿದೆ.

    ಅಪರ ಜಿಲ್ಲಾಧಿಕಾರಿ ಸತೀಶಕುಮಾರಗೆ ಮನವಿ ಸಲ್ಲಿಸಲಾಯಿತು. ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ಆಗಸ್ಟ್​ನಿಂದ ಅಸಹಕಾರ ಚಳವಳಿ ಆರಂಭಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಸಿದರು.

    ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿ, ತಾಲೂಕಾಧ್ಯಕ್ಷೆ ಸಾವಿತ್ರಿ ಸಬನೀಸ, ತಾಲೂಕು ಉಪಾಧ್ಯಕ್ಷ ಡಿ.ಎಚ್. ರಡ್ಡೇರ, ಲಲಿತಾ ಮಾದರ, ಶಾರದಾ ತೋಟದ, ಅಕ್ಕಮ್ಮ ನರೇಗಲ್ಲ, ವಿಜಯಾ ಪಾಟೀಲ, ತ್ರಿವೇಣಿ ಸೌದಿ, ವಿದ್ಯಾ ಸೊರಟೂರ, ಮಂಜುಳಾ ಅಣ್ಣಿಗೇರಿ, ರೇಣುಕಾ ವಡ್ಡರ, ಅನಸೂಯಾ ಇನಾಮತಿ, ಎಸ್.ಆರ್. ಸೋಳಂಕಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts