More

    ಅಂಗಡಿಗಳಲ್ಲಿ ಹೆಚ್ಚಿನ ಬೆಲೆಗೆ ಮಾಸ್ಕ್ ಮಾರಾಟ ದೂರು

    ಹಳಿಯಾಳ: ಕರೊನಾ ವೈರಸ್ ಬಗ್ಗೆ ಜನರಲ್ಲಿ ಮೂಡಿರುವ ಭೀತಿಯನ್ನೇ ಬಂಡವಾಳ ಮಾಡಿಕೊಂಡು ಮಾಸ್ಕ್​ಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ತಹಸೀಲ್ದಾರ್ ವಿದ್ಯಾಧರ ಗುಳಗುಳೆ ಅವರು ಪಟ್ಟಣದ ಕೆಲ ಅಂಗಡಿಗಳನ್ನು ಪರಿಶೀಲಿಸಿದರು.

    ಸಂಜೀವಿನಿ ಮೆಡಿಕಲ್​ನಲ್ಲಿ ಮಾಸ್ಕ್​ಗಳ ಖರೀದಿ ಬಿಲ್ ಇಲ್ಲದಿರುವುದು ಕಂಡು ಬಂದಿತು. ಈ ಕುರಿತು ವಿಚಾರಿಸಿದಾಗ ಮಾಸ್ಕ್​ಗಳನ್ನು ಜಿಎಸ್​ಟಿ ಸೇರಿ 13.75 ರೂ.ಗೆ ಖರೀದಿಸಲಾಗಿದೆ. ನಾವು 20 ರೂ.ಗಳಿಗೆ ಮಾರಾಟ ಮಾಡುತ್ತಿದ್ದೇವೆ ಎಂದು ತಪ್ಪೊಪ್ಪಿಕೊಂಡರು. ಮೆಡಿಕಲ್​ನಲ್ಲಿರುವ 250 ಮಾಸ್ಕ್​ಗಳನ್ನು ಎಂಆರ್​ಪಿ ದರದಲ್ಲಿ ಮಾರಾಟ ಮಾಡುವುದಾಗಿ ತಹಸೀಲ್ದಾರರಿಗೆ ಬರೆದು ಕೊಟ್ಟರು.

    ನಂತರ ತಂಡವು ಸ್ಟೇಷನರಿ ಅಂಗಡಿಗಳಿಗೆ ಭೇಟಿ ನೀಡಿತು. ರಾಜಸ್ಥಾನ ಮೂಲದ ವ್ಯಾಪಾರಸ್ಥರೊಬ್ಬರು ಮಾರಾಟಕ್ಕಿಟ್ಟಿರುವ ಮಾಸ್ಕ್್ಕಳ ಕರಿತು ವಿಚಾರಣೆ ನಡೆಸಿದಾಗ ಸಮರ್ಪಕ ಉತ್ತರ ನೀಡದ ಕಾರಣ ಮಾಸ್ಕ್​ಗಳನ್ನು ಜಪ್ತಿ ಮಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ರಮೇಶ ಕದಂ ಉಪಸ್ಥಿತರಿದ್ದರು.

    ತಾಲೂಕು ಆಸ್ಪತ್ರೆಯಲ್ಲಿ ಐದು ಹಾಸಿಗೆಗಳುಳ್ಳ ಪ್ರತ್ಯೇಕ ವಾರ್ಡ್ ಹಾಗೂ ಪ್ರತ್ಯೇಕ ವೈದ್ಯರನ್ನು ನೇಮಿಸಲಾಗಿದೆ. ವಿದೇಶದಿಂದ ಬರುವವರ ಮೇಲೆ ನಿಗಾ ವಹಿಸಲಾಗಿದೆ. ಡಾ. ರಮೇಶ ಕದಂ ತಾಲೂಕು ಆರೋಗ್ಯಾಧಿಕಾರಿ

    ****

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts