ನವದೆಹಲಿ: ಲಸಿಕೆ ಪಡೆಯಬೇಕು, ಆದರೆ ಅದರ ಲಭ್ಯತೆ ಬಗ್ಗೆ ಮಾಹಿತಿ ಇಲ್ಲ ಎನ್ನುವವರಿಗೆ ಇನ್ನು ಮುಂದೆ ಆ ಚಿಂತೆ ಇರುವುದಿಲ್ಲ. ಏಕೆಂದರೆ ಜಿಯೋ ಸಂಸ್ಥೆ ತನ್ನ ಗ್ರಾಹಕರಿಗಾಗಿ ವಿಶೇಷ ಕೊಡುಗೆಯೊಂದನ್ನು ನೀಡುತ್ತಿದೆ. ಲಸಿಕೆ ಲಭ್ಯತೆಯ ಬಗ್ಗೆ ವಾಟ್ಸ್ಆ್ಯಪ್ ಚಾಟ್ನಲ್ಲಿಯೇ ಮಾಹಿತಿ ನೀಡಲು ಸಂಸ್ಥೆ ಮುಂದಾಗಿದೆ.
ಈ ರೀತಿಯ ಸೌಲಭ್ಯಕ್ಕಾಗಿ ಸಂಸ್ಥೆ ವಾಟ್ಸ್ಆ್ಯಪ್ ಚಾಟ್ಬಾಟ್ ಅನ್ನು ಆರಂಭಿಸಿದೆ. 700770007 ನಂಬರಿಗೆ ನೀವು ಹಾಯ್ ಎಂದು ಮೆಸೇಜ್ ಮಾಡಿ ಕಳುಹಿಸಬೇಕು. ಅದಾದ ನಂತರ ನಿಮಗೆ ನಿಮ್ಮ ಪ್ರದೇಶದ ಪಿನ್ಕೋಡ್ ಕೇಳಲಾಗುವುದು. ಅಲ್ಲಿನ ಲಸಿಕೆಯ ಲಭ್ಯತೆಯ ಬಗ್ಗೆ ನಿಮಗೆ ಮಾಹಿತಿಯನ್ನು ಚಾಟ್ ರೂಪದಲ್ಲಿಯೇ ಕಳುಹಿಸಿಕೊಡಲಾಗುವುದು.
ಜಿಯೋಗೆ ಸಂಬಂಧ ಪಟ್ಟಂತೆ ಜಿಯೋ ಬಳಕೆದಾರರು ಮೊಬೈಲ್ ಸಂಖ್ಯೆ ಪೋರ್ಟಬಿಲಿಟಿ ಸೇವೆ, ಜಿಯೋ ಸಿಮ್, ಜಿಯೋ ಫೈಬರ್, ಜಿಯೋಮಾರ್ಟ್ ಸೇರಿ ಅನೇಕ ಮಾಹಿತಿಯನ್ನು ವಾಟ್ಸ್ಆ್ಯಪ್ ಚಾಟ್ಬಾಟ್ನಲ್ಲಿಯೇ ಪಡೆಯಬಹುದು ಎಂದು ಸಂಸ್ಥೆ ತಿಳಿಸಿದೆ. (ಏಜೆನ್ಸೀಸ್)
16 ವರ್ಷದ ಬಾಲಕಿಗೆ ಕಾಮೋತ್ತೇಜಕ ನೀಡಿ 8 ವರ್ಷಗಳ ಕಾಲ ರೇಪ್ ಮಾಡಿದ ಕಾಮುಕ!