More

    ಕೌನ್ಸೆಲಿಂಗ್ ಮೂಲಕ ವರ್ಗಾವಣೆಯ ಕುರಿತು ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆಯಲ್ಲಿ ಏನಿದೆ?

    ಬೆಂಗಳೂರು: ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ 2020 ರಾಜ್ಯ ವಿಧಾನಸಭೆಯಲ್ಲಿ ಮಂಗಳವಾರ ಮಂಡನೆಯಾಗಿದೆ. ಇದರಲ್ಲಿ ಕೌನ್ಸೆಲಿಂಗ್ ಮೂಲಕ ವರ್ಗಾವಣೆ ವಿಚಾರ ಪ್ರಸ್ತಾಪವಾಗಿದ್ದು, ಪ್ರಮುಖ ಅಂಶಗಳು ಇಂತಿವೆ.

    ಶಿಕ್ಷಕರ ಸಮರ್ಪಕ ಮರುಹಂಚಿಕೆ, ವಲಯವಾರು ವರ್ಗಾವಣೆ, ಕೋರಿಕೆ ವರ್ಗಾವಣೆಯ ಪ್ರಕರಣಗಳನ್ನು ವರ್ಷದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳ ಸಾರ್ವತ್ರಿಕ ವರ್ಗಾವಣೆ ಸಂದರ್ಭದಲ್ಲಿ ಗಣಕೀಕೃತ ಕೌನ್ಸೆಲಿಂಗ್ ಮೂಲಕ ನಿಯಮಿಸಬಹುದಾದ ಅಂಥ ವಿಧಾನದಲ್ಲಿ ನಡೆಸತಕ್ಕದ್ದು. ಆದರೆ, ಏಪ್ರಿಲ್ ಮತ್ತು ಮೇ ತಿಂಗಳ ನಂತರವೂ ವಿಶೇಷ ಸನ್ನಿವೇಶಗಳಲ್ಲಿ ಲಿಖಿತದಲ್ಲಿ ದಾಖಲಿಸಬೇಕಾದ ಕಾರಣಗಳಿಗಾಗಿ ರಾಜ್ಯ ಸರ್ಕಾರದ ನಿರ್ದೇಶನದ ಮೇಲೆ ವರ್ಗಾವಣೆ ಮಾಡಬಹುದು.

    ಆದರೆ, ಯಾವೊಬ್ಬ ಶಿಕ್ಷಕನೂ ಕೌನ್ಸೆಲಿಂಗ್​ ಪ್ರಕ್ರಿಯೆಯಲ್ಲಿ ಒಂದು ಸ್ಥಳವನ್ನು ಆಯ್ಕೆ ಮಾಡದಿದ್ದರೆ ಮತ್ತು ಅದನ್ನು ಶಿಷ್ಯ-ಶಿಕ್ಷಕ ಅನುಪಾತದ ಆಧಾರದ ಮೇಲೆ ಸಾರ್ವಜನಿಕ ಹಿತಾಸಕ್ತಿಯಲ್ಲಿ ಭರ್ತಿಮಾಡುವುದು ಅಗತ್ಯವಾಗಿದ್ದರೆ, ರಾಜ್ಯ ಸರ್ಕಾರವು ನಿಯಮಿಸಬಹುದಾದ ಅಂಥ ಇತರ ಷರತ್ತುಗಳಿಗೆ ಒಳಪಟ್ಟು ಕನಿಷ್ಠ ಸೇವಾವಧಿಯನ್ನು ಪೂರೈಸಿದ ಯಾವೊಬ್ಬ ಶಿಕ್ಷಕನನ್ನೂ ಅಂಥ ಸ್ಥಳಕ್ಕೆ ವರ್ಗಾವಣೆ ಮಾಡಬಹುದು.

    ಅಲ್ಲದೆ, ಕರ್ನಾಟಕ ಸಿವಿಲ್ ಸೇವೆಗಳ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ಪ್ರಕಾರ ಗಂಭೀರವಾದ ದಂಡನೆಗೆ ಒಳಗಾಗಿರುವ ಅಥವಾ ನ್ಯಾಯಾಲಯದಲ್ಲಿ ಕ್ರಿಮಿನಲ್​ ಚಾರ್ಜುಗಳನ್ನು ಎದುರಿಸುತ್ತಿರುವ ಶಿಕ್ಷಕನನ್ನು, ಆತನು ಕನಿಷ್ಠ ಸೇವಾವಧಿಯನ್ನು ಪೂರೈಸಿರದಿದ್ದರೂ ಸಹ ಸಿ-ವಲಯದಲ್ಲಿನ ಯಾವುದೇ ಖಾಲಿ ಜಾಗಕ್ಕೆ ವರ್ಗಾವಣೆ ಮಾಡತಕ್ಕದ್ದು.

    ಅದೇ ರೀತಿ, ಈ ಅಧಿನಿಯಮದ 5 ಮತ್ತು 6ನೇ ಪ್ರಕರಣಗಳ ಅಡಿಯಲ್ಲಿ ಒಂದು ವರ್ಷದಲ್ಲಿ ಯಾವುದೇ ವೃಂದಕ್ಕೆ ಮತ್ತು ಯಾವುದೇ ಜ್ಯೇಷ್ಠತಾ ಘಟಕದಲ್ಲಿ ಮಾಡಲಾದ ವರ್ಗಾವಣೆಗಳ ಒಟ್ಟು ಸಂಖ್ಯೆಯು ಶೇಕಡ 15 ಅಥವಾ ರಾಜ್ಯ ಸರ್ಕಾರವು ಅಧಿಸೂಚಿಸಿದ ಅಂಥ ಕೆಳಮಿತಿಯನ್ನು ಮೀರತಕ್ಕದ್ದಲ್ಲ. ನಾಲ್ಕನೇ ಪರಂತುಕದಲ್ಲಿ ನಿಯಮಿಸಲಾದ ಮಿತಿಯ ಪರಸ್ಪರ ವರ್ಗಾವಣೆಗಳಿಗೆ ಮತ್ತು 10ನೇ ಪ್ರಕರಣದ (1)ನೇ ಉಪಪ್ರಕರಣದಲ್ಲಿನ (i) ಮತ್ತು (iv)ನೇ ಖಂಡಗಳಲ್ಲಿ ಪರಿಭಾಷಿಸಿದ ವಿಶೇಷ ಪ್ರವರ್ಗಗಳ ಪ್ರಕಾರ ಮಾಡಿದ ವರ್ಗಾವಣೆಗಳಿಗೆ ಅನ್ವಯಿಸತಕ್ಕದ್ದಲ್ಲ.

    (2) ಜ್ಯೇಷ್ಠತಾ ಘಟಕದ ಹೊರಗಿನ ಸ್ಥಳಕ್ಕೆ ಪರಸ್ಪರ ವರ್ಗಾವಣೆಯನ್ನು ಆ ವಲಯಕ್ಕೆ ವರ್ಗಾಯಿಸಬೇಕಾದಾಗ ಅರ್ಹವಾಗಿರುವ ಮತ್ತು 5 ವರ್ಷಗಳ ಬಾಕಿ ಉಳಿದ ಸೇವೆಯನ್ನು ಹೊಂದಿರುವ ಅನ್ಯಥಾ, ಇಬ್ಬರೂ ಶಿಕ್ಷಕರು 7 ವರ್ಷಗಳ ಕನಿಷ್ಠ ಸೇವೆಯನ್ನು ಪೂರೈಸಿರುವ ಷರತ್ತಿಗೆ ಒಳಪಟ್ಟು ಸೇವೆಯಲ್ಲಿ ಒಂದಕ್ಕಿಂತ ಹೆಚ್ಚಲ್ಲದಂತೆ ಅನುಮತಿಸತಕ್ಕದ್ದು. ಆತನು ಜ್ಯೇಷ್ಠತೆಯನ್ನು ರಕ್ಷಿಸಿಕೊಳ್ಳಲು ಅರ್ಹನಾಗಿರತಕ್ಕದ್ದಲ್ಲ ಮತ್ತು ನಿಯಮಿಸಬಹುದಾದ ಅಂಥ ಇತರ ಷರತ್ತುಗಳಿಗೆ ಒಳಪಟ್ಟಿರತಕ್ಕದ್ದು. ಆದರೆ, ಜ್ಯೇಷ್ಠತಾ ಘಟಕದ ಒಳಗೆ ಶಿಕ್ಷಕನ ಪರಸ್ಪರ ವರ್ಗಾವಣೆಯ ಸಂದರ್ಭದಲ್ಲಿ ಆ ಹುದ್ದೆಗೆ ವರ್ಗಾವಣೆ ಮಾಡಲು ಆತನು ಅನ್ಯಥಾ ಅರ್ಹನಾಗಿರಕ್ಕದ್ದು.

    (3) ಸಕ್ಷಮ ಪ್ರಾಧಿಕಾರವು ಎಲ್ಲ ಜಿಲ್ಲೆಗಳಲ್ಲಿ ಖಾಲಿ ಹುದ್ದೆಗಳ ಶೇಕಡಾವಾರನ್ನು ಸಾಧ್ಯವಾದಷ್ಟು ಮಟ್ಟಿಗೆ ಸಮಾನವಾಗಿ ಹಂಚಲಾಗಿದೆಯೇ ಎಂಬುದನ್ನು ಖಾತರಿಪಡಿಸಬೇಕು.

    ಶಿಕ್ಷಕರ ವರ್ಗಾವಣೆ ನಿಯಂತ್ರಣ ಮಸೂದೆಯಲ್ಲಿ ಕೋರಿಕೆಯ ವರ್ಗಾವಣೆ ವಿಚಾರದ ಅಂಶಗಳೇನಿವೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts