More

    ವಿರಾಟ್ ಕೊಹ್ಲಿ ಶತಕ; ರಿಕಿ ಪಾಂಟಿಂಗ್ ದಾಖಲೆ ಪತನ

    ಚಟ್ಟೋಗ್ರಾಮ್‌: ಬಾಂಗ್ಲಾದೇಶ ವಿರುದ್ಧದ ಕೊನೆಯ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. ವಿರಾಟ್ ಕೊಹ್ಲಿ 113 ರನ್ ಗಳಿಸುವುದರೊಂದಿಗೆ ತಮ್ಮ 72ನೇ ಅಂತಾರಾಷ್ಟ್ರೀಯ ಶತಕ ಪೂರೈಸಿದರು. ಇದರೊಂದಿಗೆ ಅತೀ ಹೆಚ್ಚು ಅಂತಾರಾಷ್ಟ್ರೀಯ ಶತಕ ಸಿಡಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ರಿಕಿ ಪಾಂಟಿಂಗ್‌ ದಾಖಲೆಯನ್ನು ಹಿಂದಿಕ್ಕಿದ್ದಾರೆ.

    ಬಾಂಗ್ಲಾದೇಶ ವಿರುದ್ಧ 91 ಎಸೆತಗಳಲ್ಲಿ 113 ರನ್ ಗಳಿಸಿದ ಶತಕ ಸಿಡಿಸಿರುವುದು ವಿರಾಟ್ ಕೊಹ್ಲಿಯ 72ನೇ ಅಂತಾರಾಷ್ಟ್ರೀಯ ಶತಕ. ಇದರೊಂದಿಗೆ ಏಕದಿನ ಪಂದ್ಯದಲ್ಲಿ 44ನೇ ಅಂತಾರಾಷ್ಟ್ರೀಯ ದಾಖಲಿಸಿದರು. ಈ ಶತಕದ ಇನ್ನಿಂಗ್ಸ್​​ನಲ್ಲಿ 11 ಫೋರ್ ಹಾಗೂ 2 ಭರ್ಜರಿ ಸಿಕ್ಸರ್ ಒಳಗೊಂಡಿತ್ತು.

    ಅತೀ ಹೆಚ್ಚು ಅಂತಾರಾಷ್ಟ್ರೀಯ ಶತಕ ಸಿಡಿಸಿದವರಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್​ಗೆ ಮೊದಲ ಸ್ಥಾನ. 100 ಶತಕದೊಂದಿಗೆ ಮೊದಲ ಸ್ಥಾನದಲ್ಲಿ ಸಚಿನ್ ಇದ್ದಾರೆ. ಈ ಹಿಂದೆ ಅಪ್ಘಾನಿಸ್ತಾನ ವಿರುದ್ಧ ಮೊದಲ ಟಿ-20 ಶತಕ ದಾಖಲಿಸುವುದರೊಂದಿಗೆ ಕೊಹ್ಲಿ, ಅತೀ ಹೆಚ್ಚು ಸೆಂಚುರಿ ಸಿಡಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ರಿಕಿ ಪಾಂಟಿಂಗ್ ಜತೆಗೆ ಹಂಚಿಕೊಂಡಿದ್ದರು. ಇದೀಗ ಬಾಂಗ್ಲಾ ವಿರುದ್ಧ ಸೆಂಚುರಿ ದಾಖಲಿಸುವುದರೊಂದಿಗೆ ಆಸ್ಟ್ರೇಲಿಯಾದ ರಿಕ್ ಪಾಂಟಿಂಗ್ ದಾಖಲೆಯನ್ನು ಹಿಮ್ಮೆಟ್ಟಿದ್ದಾರೆ. ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ 71 ಅಂತಾರಾಷ್ಟ್ರೀಯ ಶತಕ ದಾಖಲಿಸಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts