More

    ಕಾನೂನು ಕ್ರಮ ಕೈಗೊಳ್ಳದಿದ್ದರೆ ಉಗ್ರ ಹೋರಾಟ

    ಇಂಡಿ: ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆ ಖಂಡಿಸಿ, ಕೊಲೆಗಾರನಿಗೆ ಕಠಿಣ ಶಿೆ ನೀಡಬೇಕು ಎಂದು ಒತ್ತಾಯಿಸಿ ಇಂಡಿ ತಾಲೂಕು ಚಿಂತನಾ ಕ್ರಿಯಾಶೀಲ ಮಠಾಧೀಶರ ಸಮಿತಿ, ಇಂಡಿ ತಾಲೂಕು ಜಂಗಮ ಕ್ಷೇಮಾಭಿವೃದ್ಧಿ ಸಂ, ಇಂಡಿ ತಾಲೂಕು ಸರ್ವಧರ್ಮ ಸಮನ್ವಯ ಒಕ್ಕೂಟ ಸಹಯೋಗದಲ್ಲಿ ಪಟ್ಟಣದಲ್ಲಿ ಬೃಹತ್​ ಪ್ರತಿಭಟನೆ ನಡೆಸಲಾಯಿತು.

    ಕೊಲೆಗಾರ ಯಾಜ್​ ವಿರುದ್ಧ ೂಷಣೆ ಕೂಗಿದ ಪ್ರತಿಭಟನಾಕಾರರು, ಬಸವೇಶ್ವರ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಗಮನ ಸೆಳೆದರು. ಅಂಬೇಡ್ಕರ್​ ವೃತ್ತದಿಂದ ಬಸವೇಶ್ವರ ವೃತ್ತದ ಮೂಲಕ ಮಿನಿ ವಿಧಾನಸೌಧ ತಲುಪಿದ ಪ್ರತಿಭಟನೆ ಮೆರವಣಿಗೆ ಅಲ್ಲಿ ಬೃಹತ್​ ಸಭೆಯಾಗಿ ಮಾರ್ಪಟ್ಟಿತು.

    ಸಭೆಯಲ್ಲಿ ಮಾತನಾಡಿದ ಹತ್ತಳ್ಳಿ ಗುರುಪಾದೇಶ್ವರ ಶ್ರೀಗಳು ಮತ್ತು ತಡವಲಗಾದ ರಾಚೋಟೇಶ್ವರ ಶ್ರೀಗಳು, ಆರೋಪಿ ಯಾಜಗೆ ಗಲ್ಲು ಶಿೆ ಆಗಬೇಕು. ಕಾನೂನು ಮೂಲಕ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದರು.

    ಜೆಡಿಎಸ್​ ಮುಖಂಡ ಬಿ.ಡಿ.ಪಾಟೀಲ, ನ್ಯಾಯವಾದಿ& ಜಂಗಮ ಕ್ಷೇಮಾಭಿವೃದ್ಧಿ ಸಂದ ಅಧ್ಯ ಎಸ್​.ಎಲ್​.ನಿಂಬರಗಿಮಠ, ಶ್ರೀಶೈಲಗೌಡ ಪಾಟೀಲ, ಪುರಸಭೆ ಮಾಜಿ ಅಧ್ಯ ಯಮನಾಜಿ ಸಾಳುಂಕೆ, ರಾವೇಂದ್ರ ಕಾಪಸೆ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಸೋಮು ನಿಂಬರಗಿಮಠ, ಸತೀಶ ಕುಂಬಾರ ಮಾತನಾಡಿ, ರಾಜ್ಯದಲ್ಲಿ ಭಯದ ವಾತಾವರಣ ಇದೆ. ಹೆಣ್ಣನ್ನು ಗೌರವಿಸುವ ದೇಶ ನಮ್ಮದು. ಕೊಲೆ ಮಾಡಿದವನಿಗೆ ಗಲ್ಲು ಶಿೆ ನೀಡಿ ಮಹಿಳೆಗೆ ಕರ್ನಾಟಕ ಸುರತವೆಂದು ಸಾರಬೇಕಾಗಿದೆ ಎಂದರು.

    ಅಲ್ಪಸಂಖ್ಯಾತ ಮುಖಂಡರಾದ ರೈಸ ಅಷ್ಟೇಕರ, ಮಹಮ್ಮದ ಇಲಿಯಾಸ, ಮಾಣಿಕ ಜನಾಬ, ಮೌಲಾನಾ ನಾಯ್ಕೋಡಿ ಮಾತನಾಡಿ, ಭಾರತದಲ್ಲಿ ಹಿಂದು&ಮುಸ್ಲಿಮರು ಸಹೋದರಂತೆ ಬಾಳುತ್ತಿದ್ದಾರೆ. ಇಲ್ಲಿರುವ ಮುಸ್ಲಿಮರು ಭಾರತೀಯರಾಗಿದ್ದು, ಮಾನವೀಯತೆ ಪ್ರತಿಕವಾಗಿದ್ದಾರೆ. ಅಪರಾಧಿ ಯಾಜನನ್ನು ಎನ್​ಕೌಂಟರ್​ ಮಾಡಬೇಕೆಂದು ಒತ್ತಾಯಿಸಿದರು.

    ನಂತರ ತಹಸೀಲ್ದಾರ್​ ಮಂಜುಳಾ ನಾಯಕ ಅವರಿಗೆ ಮನವಿ ಅರ್ಪಿಸಲಾಯಿತು. ಪ್ರತಿಭಟನೆಯಲ್ಲಿ ಬಂಥನಾಳದ ವೃಷಭಲಿಂಗೇಶ್ವರ ಶ್ರೀಗಳು, ಅಹಿರಸಂಗದ ಮಲ್ಲಿಕಾರ್ಜುನ ಶ್ರೀಗಳು, ಹಾವಿನಾಳದ ವಿಜಯಮಹಾಂತೇಶ ಶ್ರೀಗಳು, ಇಂಚಗೇರಿಯ ರುದ್ರಮುನಿ ಶ್ರೀಗಳು, ರೋಡಗಿಯ ಅಭಿನವ ಶಿವಲಿಂಗೇಶ್ವರ ಶ್ರೀಗಳು, ಅಥರ್ಗಾದ ಮುರುಗೇಂದ್ರ ಶ್ರೀಗಳು, ಚಡಚಣದ ಷಡರಿ ಶ್ರೀಗಳು, ರಾಮಸಿಂಗ್​ ಕನ್ನೊಳ್ಳಿ, ವೆಂಕಟೇಶ ಕುಲಕರ್ಣಿ, ಪುರಸಭೆ ಸದಸ್ಯ ದೇವೇಂದ್ರ ಕುಂಬಾರ, ಚಂದು ದೇವರ, ಪ್ರಕಾಶ ಬಿರಾದಾರ, ಶ್ರೀಧರ ತ್ರಿ, ರಾಜಗುರು ದೇವರ, ಶಾಂತು ಕಂಬಾರ, ಆನಂದ ದೇವರ, ಮಹೇಶ ಹೂಗಾರ, ಸೋಮಶೇಖರ ದೇವರ, ಶಿವಾಜಿ ಪವಾರ, ಅಭಿಷೇಕ ಬೀಳಗಿ, ಶಾಂತೇಶ ಪಾಸೋಡಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts