More

    ವೇದದರ್ಶನ 93| ಜೀವನದಲ್ಲಿ ಹುಟ್ಟು-ಸಾವುಗಳೆರಡೇ ಮುಖ್ಯ ಘಟನೆಗಳಾದರೆ ಗಿಡಮರಗಳಿಗೂ ಮಾನವನಿಗೂ ಏನು ವ್ಯತ್ಯಾಸ? ಹುಟ್ಟು-ಸಾವುಗಳ ಈಚೆ-ಆಚೆ ಏನಿದೆ?

    ‘ಸಸ್ಯಮಿವ ಮರ್ತ್ಯಃ ಪಚ್ಯತೇ ಸಸ್ಯಮಿವಾಜಾಯತೇ ಪುನಃ’’ – ‘‘ಮರ್ತ್ಯನಾಗಿ (ಸಾಯುವುದಕ್ಕೆಂದೇ) ಹುಟ್ಟಿದ ಮನುಷ್ಯನು ಸಸ್ಯದಂತೆಯೇ ಬೆಳೆದು ಒಂದು ದಿನ ಹಣ್ಣಾಗುತ್ತಾನೆ; ಸಾಯುತ್ತಾನೆ: ಮತ್ತೆ ಸಸ್ಯದಂತೆಯೇ ಹುಟ್ಟುತ್ತಾನೆ.’’ ಅಂದರೆ, ಇದಲ್ಲದೆ ಜೀವನಕ್ಕೆ ಬೇರೆ ಅರ್ಥವೇ ಇಲ್ಲವೆ? ಜೀವನದಲ್ಲಿ ಹುಟ್ಟು-ಸಾವುಗಳೆರಡೇ ಮುಖ್ಯ ಘಟನೆಗಳಾದರೆ ಗಿಡಮರಗಳಿಗೂ ಮಾನವನಿಗೂ ಏನು ವ್ಯತ್ಯಾಸ? ಹುಟ್ಟು-ಸಾವುಗಳ ಈಚೆ-ಆಚೆ ಏನಿದೆ? ಇದನ್ನರಿಯಲು ಪ್ರಯತ್ನಿಸದಿರುವವನು ಹೇಗೆ ಮಾನವನಾದಾನು? ವಿಚಾರ, ಭಾವನೆ, ಧ್ಯೇಯ, ಅರ್ಪಣೆ, ದಾನ ಇವುಗಳಿಗೆಲ್ಲ ಏನು ಅರ್ಥ? ಜೀವನದಲ್ಲಿ ಇವುಗಳ ಸ್ಥಾನಮಾನವೇನು? ಸಸ್ಯಜೀವನದಲ್ಲಿ ಪ್ರಧಾನವಾಗಿ ಕಾಣದ ಈ ಮೌಲ್ಯಗಳಿಗೆ ಮಾನವ ಜೀವನದಲ್ಲಿ ಅರ್ಥ ಇರಬೇಕೇ? ಇವುಗಳೆಲ್ಲ ಇಲ್ಲದಿದ್ದರೆ ಜೀವನ ಏನಾಗುತ್ತದೆ?

    ವೇದದರ್ಶನ 93| ಜೀವನದಲ್ಲಿ ಹುಟ್ಟು-ಸಾವುಗಳೆರಡೇ ಮುಖ್ಯ ಘಟನೆಗಳಾದರೆ ಗಿಡಮರಗಳಿಗೂ ಮಾನವನಿಗೂ ಏನು ವ್ಯತ್ಯಾಸ? ಹುಟ್ಟು-ಸಾವುಗಳ ಈಚೆ-ಆಚೆ ಏನಿದೆ?ಇದು ಚಿಕ್ಕ ವಯಸ್ಸಿನಲ್ಲೇ ಮಹರ್ಷಿಯಾದ ನಚಿಕೇತನ ವಿಚಾರಧಾರೆ. ಭಾರತದ ಸನಾತನವಾದ ಸತ್ಯಾನ್ವೇಷಣೆಯ ಹಂಬಲಕ್ಕೆ ಈ ವಾಕ್ಯ ಒಂದು ಮಾರ್ವಿುಕ ಸಂಕೇತ ಮಾತ್ರ. ಹೀಗೆ ವಿಚಾರ ಮಾಡದವನು ಮಾನವನೇ ಅಲ್ಲವೆಂಬುದು ವೇದದ ದೃಷ್ಟಿ. ಇಂತಹವನು ಭಾರತೀಯನಂತೂ ಆಗುವುದು ‘‘ಸಾಂಸ್ಕೃತಿಕವಾಗಿ’’ ಸಾಧ್ಯವಿಲ್ಲ. ಈ ವಿಚಾರಧಾರೆ ವೇದದಿಂದ ಪುರಾಣದವರೆಗೆ ಹೇಗೆ ಒಂದೇ ಆಗಿದೆಯೆಂಬುದಕ್ಕೆ ಮುಂದಿನ ಈ ಒಂದೇ ನಿದರ್ಶನ ಸಾಕು: ಶ್ರೀಮದ್ಭಾಗವತ ಪುರಾಣದಲ್ಲಿ ಇದೇ ವಿಚಾರವನ್ನು, ನಮಗೆ ನಾವೇ ಕೇಳಿಕೊಳ್ಳಬೇಕಾದ ಈ ಪ್ರಶ್ನೆಯ ರೂಪದಲ್ಲಿ ನಿರೂಪಿಸಲಾಗಿದೆ: ತರವಃ ಕಿಂ ನ ಜೀವನ್ತಿ ಭಸ್ತ್ರಾಃ ಕಿಂ ನ ಶ್ವಸನ್ತ್ಯುತ | ನ ಖಾದಂತಿ ನ ಮೇಹನ್ತಿ ಕಿಂ ಗ್ರಾಮಪಶವೊà—ಪರೇ || (2.3.18) ‘‘(ಬೀಳದಂತೆ ನಿಂತಿರುವುದೇ ಜೀವನವಾದರೆ) ಮರಗಳೂ ಬದುಕುತ್ತಿಲ್ಲವೆ? (ಉಸಿರಾಡುವುದೇ ಜೀವನವಾದರೆ) ಜೀರ್ಕೆಳವೆಗಳೂ (ಪಿಚಕಾರಿಗಳೂ) ಉಸಿರಾಡುವುದಿಲ್ಲವೆ? (ತಿನ್ನುವುದೂ, ಸಂತಾನಾರ್ಥ ಮೈಥುನ ನಡೆಸುವುದೂ ಜೀವನದ ಮುಖ್ಯ ಲಕ್ಷಣವೆಂದು ಹೇಳುವುದಾದರೆ) ಬೇರೆ ಗ್ರಾಮಪಶುಗಳೂ (ನಾಯಿ, ಬೆಕ್ಕು ಮುಂತಾದವೂ) ಹಾಗೆಯೇ ಮಾಡುತ್ತಿಲ್ಲವೇ?’’

    ಅಂದರೆ ಮಾನವಜೀವನಕ್ಕೂ ಮೇಲೆ ಹೇಳಿದವುಗಳಿಗೂ ಮುಖ್ಯ ವ್ಯತ್ಯಾಸ ಇರುವುದು ಬಹಿರಂಗ ಜೀವನದಲ್ಲಲ್ಲ. ಅಂತರಂಗ ಜೀವನದಲ್ಲಿ. ಇಂಥದ್ದೊಂದು ಜೀವನ ಇದೆಯೆಂಬುದನ್ನೇ ಅನೇಕರು ಇಂದೂ ಕಾಣರು. ಇವರು ಹೇಗೆ ಮನುಷ್ಯರಾದಾರು? ಇಂತಹ ಅಂತರಂಗ ಜೀವನವನ್ನು ಕಾಣದಿರುವುದು ಮಾತ್ರವಲ್ಲದೆ, ಕಂಡ ಬೇರೆಯವರನ್ನು ಅಪಹಾಸ್ಯ ಮಾಡಿ, ಅಲ್ಲಗಳೆದು, ಬಾಹ್ಯಜೀವನವೊಂದೇ ಸತ್ಯವೆಂದು ಭ್ರಮಿಸಿ, ಕಾರ್ಯಾಕಾರ್ಯ ವಿವೇಕಶೂನ್ಯರಾದ ‘ಜನ’ರ ವರ್ಗವೊಂದು ಹಿಂದಿನಿಂದ ಇಂದಿನವರೆಗೂ

    ಇದ್ದೇ ಇದೆ: ವೇದಗಳು ಇವರನ್ನು ನಿಂದಿಸಿ, ನಚಿಕೇತವಾಣಿಯನ್ನು ಎತ್ತಿಹಿಡಿದಿವೆ.

    ‘‘ಮನುಷ್ಯನು ಸಸ್ಯದಂತೆ ಹುಟ್ಟಿ, ಬೆಳೆದು, ಬಿದ್ದರೆ ಬೀಳಲಿ, ನಷ್ಟವೇನು? ಅವನಿಗೂ ಅವುಗಳಿಗೂ ವ್ಯತ್ಯಾಸವಿಲ್ಲದಿದ್ದರೆ ಏನೂ ಬಾಧಕವಿಲ್ಲ. ಹುಟ್ಟಿಗೆ ಮುಂಚೆ ಏನಿದ್ದರೆ ನಮಗೇನು? ಸತ್ತಮೇಲೆ ಇನ್ನೂ ಏನೋ ಉಳಿಯುವುದೆಂಬುದು ಬರಿಯ ಭ್ರಾಂತಿ. ಅಕಸ್ಮಾತ್ ಉಳಿದರೂ ಸತ್ತವನಿಗೆ ಇದರಿಂದೇನೂ ಪ್ರಯೋಜನವಿಲ್ಲ. ಸ್ವರ್ಗ ನರಕಗಳು ಸುಳ್ಳು. ಮುಕ್ತಿ ಎಂಬುದು ಕಟ್ಟು ಕಥೆ. ದೇವರೂ, ಆತ್ಮ ಎಂಬುದಿಲ್ಲ. ವರ್ಣಾಶ್ರಮಧರ್ಮಗಳೂ, ಪುಣ್ಯ-ಪಾಪಗಳೂ, ಜಾಣರು ಇತರರನ್ನು ಹತೋಟಿಯಲ್ಲಿಟ್ಟುಕೊಳ್ಳಲು ಏರ್ಪಡಿಸಿಕೊಂಡ ಸ್ವಾರ್ಥ ವ್ಯವಸ್ಥೆಗಳು. ವೇದ ಹೇಳುವುದೆಲ್ಲ ಸುಳ್ಳು. ಯಜ್ಞದಲ್ಲಿ ಅರ್ಪಿತವಾದ ‘ಪಶು’ವು ಸ್ವರ್ಗಕ್ಕೆ ಹೋಗುವುದಾದರೆ, ‘ಯಜಮಾನನು’ ತಂದೆಯನ್ನೇ ಏಕೆ ಆಹುತಿ ಕೊಡಬಾರದು?…’’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts