More

    ಕರ್ನಾಟಕ ಬಂದ್‌ಗೆ ವಿರೋಧ

    ವಿಜಯಪುರ: ಕನ್ನಡಪರ ಸಂಘಟನೆಗಳು ಡಿ.5 ರಂದು ಕರ್ನಾಟಕ ಬಂದ್‌ಗೆ ಕರೆಕೊಟ್ಟಿರುವುದನ್ನು ವಿರೋಧಿಸಿ ಸ್ವಾಮಿ ವಿವೇಕಾನಂದ ಸೇನೆ, ದಲಿತಪರ ಸಂಘಟನೆಗಳು, ಪ್ರಗತಿಪರ ಸಂಘಟನೆಗಳು, ಹಿಂದುಪರ ಸಂಘಟನೆ ವತಿಯಿಂದ ಭಾನುವಾರ ವಿಜಯಪುರದ ಸಿದ್ಧೇಶ್ವರ ದೇವಸ್ಥಾನದ ಮುಂದೆ ಪ್ರತಿಭಟನೆ ನಡೆಸಲಾಯಿತು.

    ಸ್ವಾಮಿ ವಿವೇಕಾನಂದ ಸೇನೆ ಅಧ್ಯಕ್ಷ ರಾಘವ ಅಣ್ಣಿಗೇರಿ ಮಾತನಾಡಿ, ಐತಿಹಾಸಿಕ ವಿಜಯಪುರದಲ್ಲಿ ಪಕ್ಷಾತೀತವಾಗಿ, ಜಾತ್ಯತೀತವಾಗಿ, ಧರ್ಮಾತೀತವಾಗಿ ಎಲ್ಲ ಕನ್ನಡ ಪ್ರೇಮಿಗಳು ಸೇರಿಕೊಂಡು ಡಿ.5ರ ಕರ್ನಾಟಕ ಬಂದನ್ನು ವಿರೋಧ ಮಾಡಲಿಕ್ಕಾಗಿ ನಾವೆಲ್ಲ ಇಲ್ಲಿ ಸೇರಿದ್ದೇವೆ. ಮರಾಠಾ ಸಮಾಜಕ್ಕೆ ಪ್ರಾಧಿಕಾರ ಮಾಡಿದ್ದರಿಂದ ವಿರೋಧಿಸುತ್ತಿರುವ ಕೆಲ ಸಂಘಟನೆಗಳ ನಿಲುವು ಸರಿಯಲ್ಲ. ಭಾರತೀಯ ಸೇನೆಯಲ್ಲಿ ಕ್ಷತ್ರೀಯ ಸಮಾಜದ ಕೊಡುಗೆ ಅಪಾರವಾಗಿದೆ. ಕ್ಷತ್ರೀಯ ಸಮಾಜದ ಒಂದು ಭಾಗವೇ ಮರಾಠಾ ಸಮಾಜ. ಮರಾಠಾ ನಿಗಮ ರಚನೆ ಮಾಡಿರುವುದು ಸ್ವಾಗತಾರ್ಹವಾಗಿದೆ ಎಂದರು.

    ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ಸದಸ್ಯ ಲಕ್ಷ್ಮ್ಮಣ ಜಾಧವ, ಮುಖಂಡರಾದ ಸಂತೋಷ ಪಾಟೀಲ, ರಾಹುಲ ಜಾಧವ, ಎಂ.ಎಸ್.ಕರಡಿ, ಬಾಗಪ್ಪ ಕನ್ನೊಳ್ಳಿ, ದತ್ತಾ ಗೊಲಾಂಡೆ, ಚಂದ್ರು ಚೌಧರಿ, ಸದಾಶಿವ ಅಳ್ಳಿಗಿಡದ, ಮನೋಜ ಸುರಪುರ, ಶಶಿ ಅಥರ್ಗಾ, ಬಸವರಾಜ ಪತ್ತಾರ, ರಾಜು ಅರಕೇರಿ, ಕಿರಣ ಮುತ್ತಗಿ, ಅಭಿ ಕನಮಡಿ, ಬಸವರಾಜ ಗೊಳಸಂಗಿ, ರಾಜಶೇಖರ ಕುರಿ, ಲಕ್ಷೀ ಕನ್ನೊಳ್ಳಿ, ಛಾಯಾ ಮಾಶಿಯವರ, ಭಾರತಿ ಬುಯ್ಯರ, ಗೀತಾ ಮಗನೂರ, ಹರೀಶ ಭರಟಗಿ, ಶಿವು ಹಟ್ಟಿ ಇನ್ನಿತರರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts