More

    ಕಬ್ಬನ್ ಪಾರ್ಕ್ ಮಾದರಿ ಸಸ್ಯೋದ್ಯಾನ ನಿರ್ಮಿಸಿ

    ವಿಜಯಪುರ: ಭೂತನಾಳ ಕೆರೆ ಬಳಿಯ ಕರಾಡ ದೊಡ್ಡಿ ಆವರಣದಲ್ಲಿ ಸುಸಜ್ಜಿತ ‘ಸಸ್ಯ ಸಂಗಮ’ ಟ್ರೀ ಪಾರ್ಕ್ ಅಭಿವೃದ್ಧಿಗೆ ಅವಶ್ಯಕ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
    ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಸೋಮವಾರ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದ ಅವರು, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಸಸ್ಯ ಸಂಗಮ ಟ್ರೀ ಪಾರ್ಕ್ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಸಸ್ಯಶಾಸ ವಿದ್ಯಾರ್ಥಿಗಳ ಅಧ್ಯಯನದ ಅನುಕೂಲಕ್ಕಾಗಿ ವಿವಿಧ ತಳಿಯ ಸಸಿಗಳನ್ನು ಅಭಿವೃದ್ಧಿ ಪಡಿಸುವ ಜೊತೆಗೆ ಜಿಲ್ಲೆಯ ಸಾರ್ವಜನಿಕರಿಗೆ ವಿಶ್ರಾಂತಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಿದ್ದು, ಈಗಾಗಲೇ ಭೂತನಾಳ ಕೆರೆ ವ್ಯಾಪ್ತಿಯಲ್ಲಿ 540 ಎಕರೆ ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯ ನಿರ್ವಹಿಸುವಂತೆ ಸೂಚಿಸಿದರು.

    ನೈಸರ್ಗಿಕ ಅರಣ್ಯ

    ಸಸ್ಯೋದಾನದಲ್ಲಿ ನೈಸರ್ಗಿಕ ಅರಣ್ಯ ಅಭಿವೃದ್ಧಿಯ ಜೊತೆಗೆ ವಿವಿಧ ಮಾದರಿಯ ಮತ್ತು ತಳಿಗಳ ಸಸಿಗಳನ್ನು ಸಮರ್ಪಕವಾಗಿ ನಿರ್ವಹಿಸುವ ಕುರಿತಂತೆ ಯೋಜನೆ ರೂಪಿಸಬೇಕು. ಇಲ್ಲಿಯ ವಾತಾವರಣಕ್ಕೆ ಪೂರಕವಾಗುವ ಸಸಿಗಳ ಅಭಿವೃದ್ಧಿಗೆ ಯೋಜನೆ ಹಾಗೂ ಖರ್ಚು ವೆಚ್ಚ ವರದಿ ಸಹ ಸಿದ್ಧಪಡಿಸಲಾಗಿದೆ. ಅದರಂತೆ ಔಷಧಿಯ, ಆಯುರ್ವೇದಿಕ್ ಸಸಿಗಳ ಅಭಿವೃದ್ಧಿಗೂ ವಿಶೇಷ ಗಮನ ನೀಡುವಂತೆ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗದ ಅಧಿಕಾರಿಗಳಿಗೆ ಸೂಚಿಸಿದರು.
    ತೋಟಗಾರಿಕೆ ಆಧಾರಿತ ಚಟುವಟಿಕೆಗಳಿಗೂ ಇಲ್ಲಿ ಅವಕಾಶ ನೀಡುವ ಹಿನ್ನೆಲೆಯಲ್ಲಿ ಗ್ಲಾಸ್ ಹೌಸ್ (ಗಾಜಿನ ಮನೆ) ನಿರ್ಮಾಣ ಸೇರಿದಂತೆ ವಿಶೇಷ ರೀತಿಯ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಸ್ತಾವನೆ ರೂಪಿಸುವಂತೆ ತಿಳಿಸಿದರು.

    ಮಕ್ಕಳ ಮನರಂಜನೆ

    ಮಕ್ಕಳ ಮನರಂಜನೆಗಾಗಿ ಬಟರ್ ಫ್ಲೈ ಪಾರ್ಕ್, ಕ್ಯಾಟ್ತಸ್ ಹೌಸ್ ನಿರ್ಮಾಣದ ಬಗ್ಗೆಯೂ ಯೋಜನೆ ರೂಪಿಸಬೇಕು. ಅರಣ್ಯ ಇಲಾಖೆ ಮೂಲಕ ಸಸಿಗಳ ಜೊತೆಗೆ ಸಂಪರ್ಕ ರಸ್ತೆಗಳು, ಮಹಾ ನಗರ ಪಾಲಿಕೆಯಿಂದ ಸೋಲಾರ್ ವಿದ್ಯುತ್ ದೀಪಗಳ ಸೌಲಭ್ಯ, ಸಂಸ್ಕರಿಸಿದ ರಸ ಗೊಬ್ಬರದ ಸೌಲಭ್ಯ ಸೇರಿದಂತೆ ಕುಡಿಯುವ ನೀರು, ಶೌಚಗೃಹಗಳ ಸೌಲಭ್ಯ ಕಲ್ಪಿಸಬೇಕು. ಉದ್ಯಾನವನದಲ್ಲಿ ಕುಡಿಯುವ ನೀರು, ವೀಕ್ಷಣಾ ಗೋಪುರ, ಅಕ್ವೋರಿಯಂ ಸೇರಿದಂತೆ ವಿವಿಧ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕು ಎಂದರು.
    ಒಟ್ಟು 2.77 ಕೋಟಿ ರೂ. ವೆಚ್ಚದಲ್ಲಿ ಈ ಟ್ರೀ ಪಾರ್ಕ್ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಭೂತನಾಳ ಕೆರೆ ವ್ಯಾಪ್ತಿಯಲ್ಲಿ ಚೆಕ್ ಡ್ಯಾಂ ನಿರ್ಮಾಣ, ಮಕ್ಕಳ ಕ್ರೀಡಾ ಚಟುವಟಿಕೆ, ವಾಟರ್ ಫೊಂಡ್ ಸಂಬಂಧಪಟ್ಟಂತೆ ಟೆಂಡರ್‌ನ್ನು ಸಹ ಆಹ್ವಾನಿಸಲಾಗಿದೆ ಎಂದು ಕೆಬಿಜೆಎನ್‌ಎಲ್ ಅರಣ್ಯ ವಿಭಾಗದ ಅಧಿಕಾರಿಗಳು ಸಭೆಗೆ ತಿಳಿಸಿದರು.
    ತೋಟಗಾರಿಕೆ ಇಲಾಖೆ ಉಪ ನಿರ್ದೇಶಕರ ಸಂತೋಷ ಇನಾಮದಾರ, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ, ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಚಿಕ್ಕಲಗಾರ, ಕೆಬಿಜೆಎನ್‌ಎಲ್‌ನ ಆರ್‌ಎ್ಒ ಮಹೇಶ ಪಾಟೀಲ, ಡಿಸಿಎ್ ಎನ್.ಕೆ. ಬಾಗಾಯತ್ ಮತ್ತಿತರರಿದ್ದರು.

    ಕಬ್ಬನ್ ಪಾರ್ಕ್ ಮಾದರಿ ಸಸ್ಯೋದ್ಯಾನ ನಿರ್ಮಿಸಿ
    ಕಬ್ಬನ್ ಪಾರ್ಕ್ ಮಾದರಿ ಸಸ್ಯೋದ್ಯಾನ ನಿರ್ಮಿಸಿ
    ಕಬ್ಬನ್ ಪಾರ್ಕ್ ಮಾದರಿ ಸಸ್ಯೋದ್ಯಾನ ನಿರ್ಮಿಸಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts