More

  ಪ್ಯಾನ್ ಇಂಡಿಯಾ ಶಬರಿ; ಮಹಿಳಾ ಪ್ರಧಾನ ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್

  ಕನ್ನಡದ ‘ಮಾಣಿಕ್ಯ’, ‘ರಣಂ’ ಸೇರಿ ಹಲವು ತೆಲುಗು, ತಮಿಳು ಹಾಗೂ ಮಲಯಾಳಂ ಬಾಷೆಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚಿರುವ ನಟಿ ವರಲಕ್ಷ್ಮಿ ಶರತ್‌ಕುಮಾರ್. ಈಗ ಹೊಸ ಚಿತ್ರ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದ ಹೆಸರು ‘ಶಬರಿ’.

  ಇದೊಂದು ಮಹಿಳಾ ಪ್ರಧಾನ ಚಿತ್ರವಾಗಿದ್ದು, ಅನಿಲ್ ಕಾಟ್ಜ್ ನಿರ್ದೇಶನ ಮಾಡಿದ್ದಾರೆ. ಮೇ. 3ರಂದು ಕನ್ನಡ, ತೆಲುಗು, ಹಿಂದಿ, ತಮಿಳಯ ಹಾಗೂ ಮಲಯಾಳಂ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತಿದೆ. ಭಾವನಾತ್ಮಕ ಎಳೆ ಇರುವ ಚಿತ್ರದಲ್ಲಿ ಥ್ರಿಲ್ಲರ್ ಅಂಶಗಳೂ ಒಳಗೊಂಡಿವೆ ಎನ್ನಲಾಗಿದೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿದ್ದು, ವರಲಕ್ಷ್ಮಿ ಶರತ್‌ಕುಮಾರ್ ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ವರಲಕ್ಷ್ಮಿ ಜತೆ ಗಣೇಶ್ ವೆಂಕಟರಮಣನ್, ಶಶಾಂಕ್, ಮೈಮ್ ಗೋಪಿ, ಸುನಯನಾ, ರಾಜಶ್ರೀ ನಾಯರ್, ಮಧುನಂದನ್, ರಶಿಕಾ ಬಾಲಿ, ವಿವಾ ರಾಘವ್, ಪ್ರಭು, ಭದ್ರಮ್, ಕೃಷ್ಣ ತೇಜ, ಬಿಂದು ಪಜಿದಿಮರ್ರಿ, ಅಸ್ರಿತಾ ವೆಮುಗಂಟಿ, ಹರ್ಷಿಣಿ ಕೊಡುರು. ಅರ್ಚನ್ ಅನಂತ್, ಪ್ರಮೋದಿನಿ, ಬೇಬಿ ನಿವೇಕ್ಷಾ, ಬೇಬಿ ಕೃತಿಕಾ ಪ್ರಮುಖ ತಾರಾಗಣದಲ್ಲಿದ್ದಾರೆ.

  ಉಳಿದಂತೆ ಚಿತ್ರಕ್ಕೆ ಗೋಪಿ ಸುಂದರ್ ಸಂಗೀತ ನಿರ್ದೇಶನ, ರಾಹುಲ್ ಶ್ರೀವತ್ಸ ಛಾಯಾಗ್ರಹಣ, ಧರ್ಮೇಂದ್ರ ಕಾಕರಾಳ ಸಂಕಲನವಿದೆ. ಇದರ ಜತೆ ವರಲಕ್ಷ್ಮಿ ತಮಿಳಿನ ‘ರಾಯನ್’ ಹಾಗೂ ಮಲಯಾಳಂನ ‘ಕಲರ್ಸ್’ ಚಿತ್ರಗಳಲ್ಲೂ ಬಿಜಿಯಾಗಿದ್ದಾರೆ. -ಏಜೆನ್ಸೀಸ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts