More

    ಒಂದೇ ಸೂರಿನಡಿ ಎಲ್ಲ ಕಚೇರಿ ವ್ಯವಸ್ಥೆ

    ಯರಗಟ್ಟಿ: ನೂತನ ಯರಗಟ್ಟಿ ತಾಲೂಕನ್ನು ಸಂಪೂರ್ಣ ರಚನೆ ಮಾಡಿದ ನಂತರದಲ್ಲಿ ಸೂಕ್ತ ಸ್ಥಳ ಗುರುತಿಸಿ ಒಂದೇ ಸೂರಿನಡಿ ಎಲ್ಲ ಕಚೇರಿಗಳು ಕಾರ್ಯ ನಿರ್ವಹಿಸುವಂತೆ ಮಾಡುವ ಮೂಲಕ ಜನತೆಗೆ ಆಡಳಿತಾತ್ಮಕ ಅನುಕೂಲ ಒದಗಿಸಲಾಗುವುದು ಎಂದು ವಿಧಾನಸಭೆ ಉಪಸಭಾಧ್ಯಕ್ಷ ಆನಂದ ಮಾಮನಿ ಭರವಸೆ ನೀಡಿದರು.

    ಇಲ್ಲಿನ ಎಪಿಎಂಸಿ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ನೂತನ ಯರಗಟ್ಟಿ ತಾಲೂಕಿನ ತಹಸೀಲ್ದಾರ್ ಕಚೇರಿ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಜತೆ ಚರ್ಚಿಸಿ ಕ್ಷೇತ್ರವನ್ನು ಸಂಪೂರ್ಣ ಅಭಿವೃದ್ಧಿ ಮಾಡಲಾಗುವುದು ಎಂದರು.

    ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಜನಪ್ರತಿನಿಧಿಗಳ ಹಾಗೂ ಹೋರಾಟಗಾರರ ಮತ್ತು ಮಾಧ್ಯಮಗಳ ನಿರಂತರ ಪ್ರಯತ್ನದಿಂದ ಯರಗಟ್ಟಿ ತಾಲೂಕು ಘೋಷಣೆಯಾಗಿದೆ ಎಂದರು. ಮುನವಳ್ಳಿ ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಮತ್ತು ಗಣಪತಿ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಸವದತ್ತಿ ತಹಸೀಲ್ದಾರ್ ಪ್ರಶಾಂತ ಪಾಟೀಲ, ಯರಗಟ್ಟಿ ತಹಸೀಲ್ದಾರ್ ಎಂ.ಎನ್.ಮಠದ, ಜಿಪಂ ಸದಸ್ಯರಾದ ಅಜಿತಕುಮಾರ ದೇಸಾಯಿ, ಫಕೀರಪ್ಪ ಹದ್ದಣ್ಣವರ, ವಿದ್ಯಾರಾಣಿ ಸೊನ್ನದ, ಎನ್.ಎಸ್. ಹಿರೇಕುಂಬಿ, ಜಗದೀಶ ಶಿಂತ್ರಿ, ತಾಪಂ ಅಧ್ಯಕ್ಷ ವಿನಯಕುಮಾರ ದೇಸಾಯಿ, ಪ್ರಕಾಶ ನರಿ, ಚಂದ್ರಶೇಖ ಅಳಗೋಡಿ, ಎ.ಎಂ. ಕಾಂಬೊಗಿ, ಸುನಿತಾ ನಿಂಬರಗಿ, ಶಂಕರ ಅಂತರಗಟ್ಟಿ, ಮಂಜುನಾಥ ನಡುವಿನಮನಿ, ಯಶವಂತಕುಮಾರ, ಡಾ.ಮಹೇಶ ಚಿತ್ತರಗಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts