More

    ಮೈಸೂರು ಬಾನುಲಿಯಲ್ಲಿ ‘ಉಲಿ ಉಯ್ಯಲೆ’ ಸರಣಿ ಕಾರ್ಯಕ್ರಮ ಬಿತ್ತರ

    ಮೈಸೂರು: ಕನ್ನಡ ಜನರ ಬದುಕಿನ ಪಾರಂಪರಿಕತೆ ತಿಳಿಸುವ ಉದ್ದೇಶದಿಂದ ಕನ್ನಡ ನುಡಿಬಿಂಬ ಯೋಜನೆಯನ್ನು ಭಾರತೀಯ ಭಾಷಾ ಸಂಸ್ಥಾನದ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರ ರೂಪಿಸಿದೆ.ಈ ಹಿನ್ನೆಲೆಯಲ್ಲಿ ಮೈಸೂರು ಬಾನುಲಿ ಕೇಂದ್ರದಿಂದ ಪ್ರಸಾರವಾಗುವ ‘ಉಲಿ ಉಯ್ಯಲೆ’ ಸರಣಿ ಕಾರ್ಯಕ್ರಮ ಬಿತ್ತರವಾಗಲಿದೆ. ಈ ಸಂಬಂಧ ಸಿಐಐಎಲ್‌ನಲ್ಲಿ ಈ ಕಾರ್ಯಕ್ರಮದ ಪಠ್ಯರಚನಾ ಪೂರ್ವಭಾವಿ ಕಮ್ಮಟ ಎರಡು ದಿನ ಆಯೋಜಿಸಲಾಗಿತ್ತು.
    ಸರಣಿ ಕಾರ್ಯಕ್ರಮದಲ್ಲಿ ಕನ್ನಡ ಭಾಷೆಯ ಚಾರಿತ್ರಿಕ ದೃಷ್ಟಿ, ಸಾಮಾಜಿಕತೆ, ಕನ್ನಡ ಶಾಸನಗಳಲ್ಲಿ ಜನಬದುಕು, ಜಾನಪದ ಅರಿವು, ಜಾನಪದ ಸೃಜನಶೀಲತೆ, ಸಂಗೀತ, ರಂಗಭೂಮಿ, ರಂಗಭಾಷೆ, ಕುಣಿತ, ನೃತ್ಯ, ಕನ್ನಡ ಮತ್ತು ಇತರ ಭಾಷೆಗಳು, ನಾಳಿನ ಕನ್ನಡ ಇತ್ಯಾದಿ ಶೀರ್ಷಿಕೆಯಡಿ 13 ಕಂತುಗಳಲ್ಲಿ ಶಾಸ್ತ್ರೀಯ ಕನ್ನಡವನ್ನು ವಿವಿಧ ಆಯಾಮಗಳಲ್ಲಿ ಬಿತ್ತರಗೊಳಿಸಲಾಗುತ್ತಿದೆ.
    ವಿದ್ವಾಂಸರು, ಆಕಾಶವಾಣಿ ನುರಿತ ಕಾರ್ಯಕ್ರಮದ ನಿರ್ವಾಹಕರು ಚರ್ಚಿಸಿ ಪ್ರತಿ 30 ನಿಮಿಷಗಳ ಅವಧಿ ಪಠ್ಯವನ್ನು ರಚಿಸಲು ಬೇಕಾಗುವ ವಿಷಯ ವಸ್ತುವನ್ನು ಗುರುತಿಸಲಾಯಿತು. ಪರಸ್ಪರ ಚರ್ಚಿಸುವ ಮೂಲಕ ಪರಿಕಲ್ಪನೆಯನ್ನು ಅಂತಿಮಗೊಳಿಸಲಾಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಪ್ರೊ.ಒ.ಎಲ್.ನಾಗಭೂಷಣ್ ಸ್ವಾಮಿ, ಡಾ.ಬಸವರಾಜ ಸಾದರ್, ಪ್ರೊ.ಪ್ರೀತಿ ಶುಭಚಂದ್ರ, ಡಾ.ಶೈಲಜಾ ವೇಣುಗೋಪಾಲ್, ಡಾ.ಬಸವರಾಜ ಕೋಡಗುಂಟೆ, ಎಂ.ಎಸ್.ಮೂರ್ತಿ, ಡಾ.ಕೆ.ವೈ.ನಾರಾಯಣಸ್ವಾಮಿ, ಡಾ.ಶಶಿಕಲಾ, ಡಾ.ಮಂಜುನಾಥ್, ಸುಬ್ರಹ್ಮಣಿ, ಕನ್ನಡ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಬಿ.ಶಿವರಾಮು ಶೆಟ್ಟಿ, ಎನ್‌ಟಿಎಸ್‌ನ ಡಾ.ಮುರಳಿಮೋಹನ್ ಇದ್ದರು.
    ಕಮ್ಮಟದ ಸಮಾರೋಪದಲ್ಲಿ ಸಿಐಐಎಲ್‌ನ ನಿರ್ದೇಶಕ ಪ್ರೊ.ಸಿ.ಜಿ.ವೆಂಕಟೇಶ್‌ಮೂರ್ತಿ, ಉಪನಿರ್ದೇಶಕ ಪ್ರೊ.ಧರ್ಮೇಶ್ ಫರ್ನಾಂಡಿಸ್ ಇದ್ದರು. 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts